ಸಾಂಸ್ಕೃತಿಕ ಕಾರ್ಯಕ್ರಮ ಪ್ರತಿಭೆಗಳಿಗೆ ವೇದಿಕೆ I cultural programme

ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನಲ್ಲಿ ಏರ್ಪಡಿಸಿದ್ದ ಸಹ್ಯಾದ್ರಿ ಸಿರಿ ಕಾರ್ಯಕ್ರಮವನ್ನು ಗಾಯಕಿ ಸುರೇಖಾ ಹೆಗಡೆ ಉದ್ಘಾಟಿಸಿದರು. ಪ್ರೊ. ಎಸ್.ಸಿರಾಜ್ ಅಹಮದ್, ಡಾ. ಕೆ.ಎನ್.ಮಂಜುನಾಥ್, ಡಾ. ಎಚ್.ಪಿ.ಮಂಜುನಾಥ್, ವಿ.ಎಚ್.ಕರಿಬಸಪ್ಪ , ಪ್ರಣತಿ ಇತರರಿದ್ದರು.
ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನಲ್ಲಿ ಏರ್ಪಡಿಸಿದ್ದ ಸಹ್ಯಾದ್ರಿ ಸಿರಿ ಕಾರ್ಯಕ್ರಮವನ್ನು ಗಾಯಕಿ ಸುರೇಖಾ ಹೆಗಡೆ ಉದ್ಘಾಟಿಸಿದರು. ಪ್ರೊ. ಎಸ್.ಸಿರಾಜ್ ಅಹಮದ್, ಡಾ. ಕೆ.ಎನ್.ಮಂಜುನಾಥ್, ಡಾ. ಎಚ್.ಪಿ.ಮಂಜುನಾಥ್, ವಿ.ಎಚ್.ಕರಿಬಸಪ್ಪ , ಪ್ರಣತಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಹ್ಯಾದ್ರಿ ಸಿರಿ ಕಾರ್ಯಕ್ರಮ
  • ಪ್ರೊ. ಎಸ್.ಸಿರಾಜ್ ಅಹಮದ್ ಹೇಳಿಕೆ
ಶಿವಮೊಗ್ಗ: ಸ್ಪರ್ಧೆಗಳು ವಿದ್ಯಾರ್ಥಿಗಳ ಪ್ರತಿಭೆ (tallent) ಅನಾವರಣಕ್ಕೆ ಉತ್ತಮ ವೇದಿಕೆ ಎಂದು ಸಹ್ಯಾದ್ರಿ (sahyadri) ಕಲಾ ಕಾಲೇಜಿ (college) ನ ಪ್ರಾಚಾರ್ಯ ಪ್ರೊ. ಎಸ್.ಸಿರಾಜ್ ಅಹಮದ್ ಹೇಳಿದರು.
ನಗರದ ಸಹ್ಯಾದ್ರಿ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ಸಹ್ಯಾದ್ರಿ ಸಿರಿ-2026 ಕಾರ್ಯಕ್ರಮದಲ್ಲಿ ಮಾತನಾಡಿ, ಇದು ಸಂಸ್ಕೃತಿ ಬಿಂಬಿಸುವ ಕಾರ್ಯಕ್ರಮ. ಕುವೆಂಪು ವಿವಿ ವ್ಯಾಪ್ತಿಯ 16ಕ್ಕೂ ಹೆಚ್ಚು ಕಾಲೇಜಿನ ತಂಡಗಳು ಭಾಗವಹಿಸಿವೆ. 18 ವರ್ಷಗಳಿಂದ ಕಾರ್ಯಕ್ರಮ ಪ್ರತಿ ವರ್ಷ ನಡೆಯುತ್ತಿದೆ ಎಂದರು.
ಕಾರ್ಯಕ್ರಮ ಸಂಚಾಲಕ ಡಾ. ಕೆ.ಎನ್.ಮಂಜುನಾಥ್ ಮಾತನಾಡಿ, ಕುವೆಂಪು ವಿವಿಯಲ್ಲಿ ನಡೆಯುವ ಸಹ್ಯಾದ್ರಿ ಉತ್ಸವದಂತೆ ಇದೂ ಕೂಡ ಅತ್ಯಂತ ಯಶಸ್ವಿಯಾಗಿದೆ. ವಿವಿಧ ಕಾಲೇಜಿನ ಮಕ್ಕಳು ಡೊಳ್ಳು, ಕಂಸಾಳೆ, ಜಾನಪದ ನೃತ್ಯ, ಕೋಲಾಟ, ಸಂಸ್ಕೃತಿ ಬಿಂಬಿಸುವ ಭಿತ್ತಿಚಿತ್ರಗಳೊಂದಿಗೆ ಗಮನಸೆಳೆದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಹ್ಯಾದ್ರಿ ಸಿರಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಗಾಯಕಿ ಸುರೇಖಾ ಹೆಗಡೆ, ಸಹ್ಯಾದ್ರಿ ಕಾಲೇಜು ನಮ್ಮೆಲ್ಲರ ಹೆಮ್ಮೆಯ ಸಂಕೇತ. ಇಂತಹ ಕಾರ್ಯಕ್ರಮಗಳಿಂದ ನವೋಲ್ಲಾಸ ದೊರೆಯುವ ಜತೆಗೆ ಪ್ರತಿಭಾ ಪ್ರದರ್ಶನಕ್ಕೆ ಅನುಕೂಲವಾಗುತ್ತದೆ ಎಂದು ಹೇಳಿದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಎಂಆರ್‌ಎಸ್ ವೃತ್ತದಿಂದ ಕಾಲೇಜಿನ ಆವರಣದವರೆಗೆ ಸಾಂಸ್ಕೃತಿಕ ಮೆರವಣಿಗೆ ನಡೆಯಿತು. ರಿಪ್ಪನ್‌ಪೇಟೆ, ತೀರ್ಥಹಳ್ಳಿ, ಸಾಗರ, ಸೊರಬ, ಚಿಕ್ಕಮಗಳೂರು ಜಿಲ್ಲೆಯ ವಿವಿ ವ್ಯಾಪ್ತಿಯ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಾಡಿನ ನೃತ್ಯ, ಡೊಳ್ಳು, ಕೋಲಾಟ, ವೀರಗಾಸೆ ಸೇರಿ ಹಲವು ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ವಿದ್ಯಾರ್ಥಿಗಳ ಜತೆಗೆ ಬೋಧಕ-ಬೋಧಕೇತರ ಸಿಬ್ಬಂದಿ ಹೆಜ್ಜೆ ಹಾಕಿದರು.
ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಚಾರ್ಯೆ ಪ್ರೊ. ಎನ್.ರಾಜೇಶ್ವರಿ, ಪ್ರಾಧ್ಯಾಪಕ ಡಾ. ಎಚ್.ಪಿ.ಮಂಜುನಾಥ್, ಪ್ರಮುಖರಾದ ವಿ.ಎಚ್.ಕರಿಬಸಪ್ಪ, ನಂದಿತಾ, ಜಾಹ್ನವಿ, ಪ್ರಣತಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net