

ಪ್ರಮುಖ ಮುಖ್ಯಾಂಶಗಳು
ಇತ್ತೀಚೆಗೆ ಮಹಾನಗರ ಪಾಲಿಕೆ ಪ್ರಗತಿ ಪರಿಶೀಲನೆ ನಡೆಸಿದ್ದು, ಡಿಸೆಂಬರ್‌ನಲ್ಲಿ ಶೂನ್ಯ ಗುಂಡಿ ಅಭಿಯಾನ ಕೈಗೊಳ್ಳುವಂತೆ ಇಂಜಿನಿಯರ್‌ಗಳಿಗೆ ಸೂಚಿಸಲಾಗಿದೆ. ಮಳೆ ಅಧಿಕವಾಗಿದ್ದ ಕಾರಣ ಗುಂಡಿಗಳಾಗಿವೆ. ಮಳೆ ಇಲ್ಲದ ಕಾರಣ ತಾತ್ಕ್ಕಾಲಿಕ ಪರಿಹಾರ ಬಿಟ್ಟು ಶಾಶ್ವತವಾಗಿ ಗುಂಡಿಗಳಿಗೆ ಮುಕ್ತಿ ನೀಡುವಂತೆ ಪಾಲಿಕೆ ಆಯುಕ್ತರಿಗೂ ಸೂಚಿಸಿದ್ದೇನೆ.
ಶಿವಮೊಗ್ಗ ನಗರದ ರಸ್ತೆಗಳು ಗುಂಡಿಗಳಿಂದ ಕೂಡಿವೆ. ಯಾವುದೇ ರಸ್ತೆಗೆ ಹೋದರೂ ಮಾರುದ್ದದ ಗುಂಡಿಗಳ ದರ್ಶನವಾಗುತ್ತಿದೆ. ಗುಂಡಿಗಳನ್ನು ಮುಚ್ಚುವುದಕ್ಕೂ ಮಹಾನಗರ ಪಾಲಿಕೆ ಮೀನಮೇಷ ಎಣಿಸುತ್ತಿದೆ. ಆಡಳಿತ ಸಂಪೂರ್ಣವಾಗಿ ನಿಷ್ಕ್ರಿಯವಾಗಿದೆ. ತೆರಿಗೆ ಕಟ್ಟಿದರೂ ವಾಹನ ಸವಾರರಿಗೆ ಓಡಾಡಲು ಸುಸಜ್ಜಿತ ರಸ್ತೆಗಳು ಇಲ್ಲದಂತಾಗಿದೆ.
ಈ ಬಾರಿ ಯಾವುದೇ ಅವ್ಯವಹಾರ ಆಗಬಾರದು ಎಂಬ ಕಾರಣಕ್ಕೆ ಪ್ರತಿಯೊಂದು ಗುಂಡಿಗಳನ್ನು ಗುರುತಿಸಿ, ಪಟ್ಟಿ ಮಾಡಿ, ಈಗಿರುವ ಸ್ಥಿತಿ, ದುರಸ್ತಿ ಆದ ನಂತರದ ಫೋಟೊವನ್ನು ತೆಗೆಯಲಾಗುವುದು. ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 1500 ಗುಂಡಿಗಳನ್ನು ಗುರುತಿಸಿದ್ದು, ಡಿಸೆಂಬರ್‌ನಿಂದ ರಸ್ತೆ ದುರಸ್ತಿ ನಡೆಸಲಾಗುವುದು.