ಧಾರ್ಮಿಕ ಹಕ್ಕು ರಕ್ಷಣೆಗೆ ಆಗ್ರಹಿಸಿ ಮೌನ ಮೆರವಣಿಗೆ Christian Forum

ಶಿವಮೊಗ್ಗ: ಕರ್ನಾಟಕ ಅಲ್ಪಸಂಖ್ಯಾತರ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಅಧಿನಿಯಮ-2022 ರದ್ದುಪಡಿಸಬೇಕೆಂದು ಆಗ್ರಹಿಸಿ ಆಲ್ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಫೋರಂ ಹ್ಯೂಮನ್ ರೈಟ್ಸ್‌ನ ಶಿವಮೊಗ್ಗ ವಲಯದ ಪ್ರಮುಖರು ಗುರುವಾರ ನಗರದಲ್ಲಿ ಮೌನ ಮೆರವಣಿಗೆ ನಡೆಸಿದರು.
Christian Forum
ಕರ್ನಾಟಕ ಅಲ್ಪಸಂಖ್ಯಾತರ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಅಧಿನಿಯಮ ರದ್ದುಪಡಿಸಬೇಕೆಂದು ಆಗ್ರಹಿಸಿ ಕ್ರಿಶ್ಚಿಯನ್ ಫೋರಂ ಹ್ಯೂಮನ್ ರೈಟ್ಸ್‌ನ ಶಿವಮೊಗ್ಗ ವಲಯದ ಪ್ರಮುಖರು ಡಿಸಿ ಕಚೇರಿ ಎದುರು ಮೌನ ಪ್ರತಿಭಟನೆ ನಡೆಸಿದರು. ಸೈಮನ್ ಪಿಂಟೋ, ಫಾಸ್ಟರ್ ರೇಮಂಡ್ ಸಗಾಯ್ ರಾಜ್, ವೀರೇಶ್, ಜಿ.ಕುಮಾರ್, ಸತೀಶ್ ಡಿಸೋಜ ಇತರರಿದ್ದರು.
Published on: 

ಶಿವಮೊಗ್ಗ: ಕರ್ನಾಟಕ ಅಲ್ಪಸಂಖ್ಯಾತರ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಅಧಿನಿಯಮ-2022 ರದ್ದುಪಡಿಸಬೇಕೆಂದು ಆಗ್ರಹಿಸಿ ಆಲ್ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಫೋರಂ ಹ್ಯೂಮನ್ ರೈಟ್ಸ್‌ನ ಶಿವಮೊಗ್ಗ ವಲಯದ ಪ್ರಮುಖರು ಗುರುವಾರ ನಗರದಲ್ಲಿ ಮೌನ ಮೆರವಣಿಗೆ ನಡೆಸಿದರು.

2023ರ ಜೂನ್‌ನಲ್ಲಿ ರಾಜ್ಯಸರ್ಕಾರ ಕೈಗೊಂಡ ನಿರ್ಧಾರದಂತೆ ಈ ಅಧಿನಿಯಮ ರದ್ದುಪಡಿಸಿ ಮಸೂದೆಯನ್ನು ಆದಷ್ಟು ಬೇಗ ಮಂಡಿಸಿ ಅಂಗೀಕರಿಸಬೇಕು. ಕಾಯ್ದೆ ರದ್ದಾಗುವವರೆಗೆ ಯಾವುದೇ ವ್ಯಕ್ತಿ ಅಥವಾ ಸಮುದಾಯವು ಕಾನೂನು ಬಾಹಿರ ಕಿರುಕುಳ, ಬಂಧನ ಅಥವಾ ಮಾನಹಾನಿಗೆ ಒಳಗಾಗದಂತೆ ರಕ್ಷಣೆ ನೀಡಬೇಕು. ಅಲ್ಪಸಂಖ್ಯಾತರ ಧಾರ್ಮಿಕ ಸ್ವಾತಂತ್ರ್ಯ, ವೈಯಕ್ತಿಕ ಸ್ವಾತಂತ್ರ್ಯ ಸೇರಿ ಪರಸ್ಪರ ಸಮ್ಮತಿಯ ವಯಸ್ಕರು ತಮ್ಮ ಜೀವನ ಸಂಗಾತಿ ಆಯ್ಕೆ ಮಾಡಿಕೊಳ್ಳುವ ಹಕ್ಕನ್ನು ರಕ್ಷಿಸಬೇಕೆಂದು ಒತ್ತಾಯಿಸಿದರು.

ಕಾನೂನುಬದ್ಧ ಧಾರ್ಮಿಕ ಸಭೆಗಳು, ಆರಾಧನೆ, ದತ್ತಿ ಚಟುವಟಿಕೆಗಳು ಮತ್ತು ಧಾರ್ಮಿಕ ನಂಬಿಕೆಗಳನ್ನು ಶಾಂತಿಯುತವಾಗಿ ಹಂಚಿಕೊಳ್ಳುವ ಹಕ್ಕಿಗೆ ಪರಿಣಾಮಕಾರಿ ರಕ್ಷಣೆ ಒದಗಿಸಬೇಕು. ಈ ಅಧಿನಿಯಮದ ಅಡಿಯಲ್ಲಿ ದಾಖಲಾಗಿರುವ ಎಲ್ಲ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಫೋರಂ ಅಧ್ಯಕ್ಷ ರೆವರೆಂಡ್ ಡಾ.ಸೈಮನ್ ಪಿಂಟೋ, ಕಾರ್ಯದರ್ಶಿ ಫಾಸ್ಟರ್ ರೇಮಂಡ್ ಸಗಾಯ್ ರಾಜ್, ಕಾರ್ಯಕಾರಿ ಸಮಿತಿ ಸದಸ್ಯ ಮೊನ್ಸಿಜ್ಙೋರ್ ಸ್ಟ್ಯಾನಿಶ್ ಡಿಸೋಜ, ವೀರೇಶ್, ಜಿ.ಕುಮಾರ್, ಸತೀಶ್ ಡಿಸೋಜ, ಯೇಸುದಾಸ್, ಚಿನ್ನಪ್ಪ, ರೋಸಲಿನ್ ಇತರರಿದ್ದರು.