ಐದು ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ |CM Siddaramaiah

ಮಾಜಿ ಸಚಿವ ಎಚ್.ಆಂಜನೇಯ
ಮಾಜಿ ಸಚಿವ ಎಚ್.ಆಂಜನೇಯ
Published on
ಶಿವಮೊಗ್ಗ: ಐದು ವರ್ಷಕ್ಕೆ ಶಾಸಕರ ಆಯ್ಕೆ ನಡೆಯುತ್ತದೆ. ಸಿಎಂ(cm) ಆಯ್ಕೆ ಕೂಡ ಐದು ವರ್ಷಕ್ಕೆ ಆಗಿದೆ. ಹೀಗಾಗಿ ಐದು ವರ್ಷವೂ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಅವರೇ ಮುಂದುವರಿಯಲಿದ್ದಾರೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.
ಅಧಿಕಾರ ಹಂಚಿಕೆ ಬಗ್ಗೆ ಹೈಕಮಾಂಡ್(High Command) ಹಾಗೂ ಸಿಎಂ ನಡುವೆ ಒಪ್ಪಂದವಾಗಿರುವ ಬಗ್ಗೆ ನನಗೆ ಗೊತ್ತಿಲ್ಲ. ಅವರ ಮಧ್ಯೆ ಆಗಿರುವ ಒಪ್ಪಂದಕ್ಕೆ ಮೂರನೆಯವರು ಏನೂ ಹೇಳಲು ಸಾಧ್ಯವಿಲ್ಲ ಎಂದು ಸೋಮವಾರ ಸುದ್ದಿಗೊಷ್ಠಿಯಲ್ಲಿ ಹೇಳಿದರು.
ಶಾಸಕರು, ಸಚಿವರು ದೆಹಲಿಗೆ ಹೋಗುವುದು ಸಾಮಾನ್ಯ. ದೆಹಲಿ(Delhi)ಯಲ್ಲಿ ಕಾಂಗ್ರೆಸ್‌ನ ದೇವಸ್ಥಾನ ಇದೆ. ಹೈಕಮಾಂಡೇ ನಮಗೆ ದೇವರು. ಹಾಗಾಗಿ ದರ್ಶನಕ್ಕೆ ಹೋಗಿರಬಹುದು. ಅದರ ಬಗ್ಗೆ ನನಗೆ ಮಾಹಿತಿ ಇಲ್ಲ. ಸಚಿವರು, ಶಾಸಕರು ದೆಹಲಿಗೆ ಹೋಗುತ್ತಿದ್ದರೆ ಅದಕ್ಕೆ ಮಹತ್ವ ನೀಡಬೇಕಿಲ್ಲ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net