ಸೆ.4ರಂದು ಶ್ರೀಕೃಷ್ಣ ಜನ್ಮಾಷ್ಠಮಿ ಮಹೋತ್ಸವ | Shri Krishna Janmashtami

ಇಸ್ಕಾನ್ ಸಂಸ್ಥೆಯ ಕರ್ನಾಟಕ ಪ್ರಾದೇಶಿಕ ಕಾರ್ಯದರ್ಶಿ ಸುಧೀರ್ ಚೈತನ್ಯದಾಸ್.
ಇಸ್ಕಾನ್ ಸಂಸ್ಥೆಯ ಕರ್ನಾಟಕ ಪ್ರಾದೇಶಿಕ ಕಾರ್ಯದರ್ಶಿ ಸುಧೀರ್ ಚೈತನ್ಯದಾಸ್.
Published on

ಪ್ರಮುಖ ಮುಖ್ಯಾಂಶಗಳು

  • ಪ್ರತಿ ವರ್ಷದಂತೆ ಶಿವಮೊಗ್ಗ-ಭದ್ರಾವತಿ ನಡುವಿನ ಬಿದರೆಯಲ್ಲಿ ಮಹೋತ್ಸವ
  • ಬೆಳಗ್ಗೆ 8ರಿಂದ ರಾತ್ರಿ 8ರವೆಗೆ ಶ್ರೀಕೃಷ್ಣ ದರ್ಶನ ಹಾಗೂ ಮಹಾಪ್ರಸಾದ ವಿತರಣೆ
  • ಇಸ್ಕಾಂನ್ ಕರ್ನಾಟಕ ಪ್ರಾದೇಶಿಕ ಕಾರ್ಯದರ್ಶಿ ಸುಧೀರ್ ಚೈತನ್ಯದಾಸ್ ಹೇಳಿಕೆ
ಶಿವಮೊಗ್ಗ: ಪ್ರತಿ ವರ್ಷದಂತೆ ಈ ಬಾರಿಯೂ ಶಿವಮೊಗ್ಗ-ಭದ್ರಾವತಿ ನಡುವಿನ ಬಿದರೆಯ ದಕ್ಷಿಣ ಶ್ರೀ ಮಾಯಾಪುರ್ ಧಾಮ್‌ನಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ(Shri Krishna Janmashtami) ಮಹೋತ್ಸವವನ್ನು ಸೆಪ್ಟೆಂಬರ್ 4ರಂದು ಅದ್ದೂರಿಯಿಂದ ಆಚರಿಸಲಾಗುವುದು ಎಂದು ಇಸ್ಕಾನ್ ಸಂಸ್ಥೆ(ISKCON Institute

)ಯ ಕರ್ನಾಟಕ ಪ್ರಾದೇಶಿಕ ಕಾರ್ಯದರ್ಶಿ ಸುಧೀರ್ ಚೈತನ್ಯದಾಸ್ ಹೇಳಿದರು.

ಇಡೀ ಜಗತ್ತಿನಲ್ಲಿ ಶ್ರೀಕೃಷ್ಣ ಮಹಾಪುರುಷ ಎನಿಸಿಕೊಂಡಿದ್ದಾನೆ. ಆನಂತರ ಸನಾಧಾನ ಧರ್ಮದಲ್ಲಿ ಅನೇಕ ಮಹಾಪುರುಷರು ಬಂದು ಹೋದರೂ ಶ್ರೀಕೃಷ್ಣನಿಗೆ ಸರಿಸಾಟಿ ಯಾರೂ ಇಲ್ಲ. ಹಾಗಾಗಿ ಶ್ರೀಕೃಷ್ಣನ ಜನ್ಮದಿನವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಉಡುಪಿ, ಶಿವಮೊಗ್ಗ, ಬೆಂಗಳೂರು ಒಳಗೊಂಡಂತೆ 12ಕ್ಕೂ ಅಧಿಕ ಕಡೆ ಶ್ರೀಕೃಷ್ಣನ ಜನ್ಮಾಷ್ಠಮಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಅದರಲ್ಲಿ ಶಿವಮೊಗ್ಗ(Shivamogga)ದ ಬಿದರೆಯಲ್ಲಿ ನಡೆಯುವ ಶ್ರೀಕೃಷ್ಣ ಜನ್ಮಾಷ್ಠಮಿ ಮಹೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾಗಲಿದ್ದಾರೆ ಎಂದರು.
ಇಸ್ಕಾನ್‌ನ ಶಿವಮೊಗ್ಗ ಶಾಖೆ ಆರಂಭಗೊಂಡು 25 ವರ್ಷವಾಗಿದ್ದು, ಪ್ರತಿ ವರ್ಷವೂ ಶ್ರೀಕೃಷ್ಣ ಜನ್ಮಾಷ್ಠಿಮಿ ಮಹೋತ್ಸವವನ್ನು ಭಕ್ತರ ಸಹಕಾರದಲ್ಲಿ ಅದ್ದೂರಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ. ದೇಶಾದ್ಯಂತ 300 ಶಾಖೆಗಳನ್ನು ಹೊಂದಿರುವ ಇಸ್ಕಾನ್ ಆಧ್ಯಾತ್ಮಿಕ ಕಾರ್ಯಕ್ರಮ(spiritual program)ಗಳನ್ನು ಆಯೋಜಿಸುತ್ತಾ ಬರುತ್ತಿದೆ ಎಂದರು. 
ಸೆ.4ರಂದು ಬೆಳಗ್ಗೆ 8ರಿಂದ ರಾತ್ರಿ 8ರವೆಗೆ ಶ್ರೀಕೃಷ್ಣ ದರ್ಶನ(SriKrishna Darshan) ಹಾಗೂ ಮಹಾಪ್ರಸಾದ ವಿತರಣೆ ನಡೆಯಲಿದ್ದು, ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಹರಿನಾಮ ಸಂಕೀರ್ತನೆ, ಸಾಂಸ್ಕೃತಿಕ ಕಾರ್ಯಕ್ರಮ, ಮಹಾಭಿಷೇಕ, ಪ್ರವಚನ, ವೈಭವ ಆರತಿ, ತೊಟ್ಟಿಲೊತ್ಸವ ಜರುಗಲಿದೆ ಎಂದು ಹೇಳಿದರು. ಇಸ್ಕಾನ್ ಶಿವಮೊಗ್ಗದ ಸಹ ವ್ಯವಸ್ಥಾಪಕರಾದ ರಸರಾಜ್ ಗೋಪಾಲದಾಸ, ರಸಿಕಶೇಖರ ಚೈತನ್ಯದಾಸ್, ವಿಶ್ವಂಭರ ಗೌರಾಂಗದಾಸ್, ಜನಾರ್ಧನ ಪ್ರಭು ಸುದ್ದಿಗೋಷ್ಠಿಯಲ್ಲಿದ್ದರು.

‘ವಿಜಯವಾಣಿ’ ಸಹಯೋಗದಲ್ಲಿ ಸ್ಪರ್ಧೆ

ಕನ್ನಡದ ನಂಬರ್ 1 ದಿನಪತ್ರಿಕೆ ‘ವಿಜಯವಾಣಿ’(Vijayavani) ಮಾಧ್ಯಮ ಸಹಯೋಗದಲ್ಲಿ ಸೆ.4ರಂದು ಶ್ರೀಕೃಷ್ಣ ಜನ್ಮಾಷ್ಠಮಿ ಮಹೋತ್ಸವದ ಅಂಗವಾಗಿ ವೇಷಭೂಷಣ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಕಳೆದ ನಾಲ್ಕೈದು ವರ್ಷಗಳಿಂದ ‘ವಿಜಯವಾಣಿ’ ಪತ್ರಿಕೆಯು ರಾಧಾ-ಕೃಷ್ಣ ವೇಷಭೂಷಣ ಸ್ಪರ್ಧೆ ನಡೆಸಲಾಗುತ್ತಿದೆ ಎಂದು ಸುಧೀರ್ ಚೈತನ್ಯ ದಾಸ್ ಹೇಳಿದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net