ಧಾರ್ಮಿಕ ಆಚರಣೆಗಳ ವಿಶಿಷ್ಟ ಮಾಸ ಶ್ರಾವಣ

ಶಿಕಾರಿಪುರದ ವಿರಕ್ತಮಠದಲ್ಲಿ ಆಯೋಜಿಸಿದ್ದ ಶ್ರಾವಣ ಮಾಸದಲ್ಲಿ ಶ್ರವಣಾನುಭವ ಕಾರ್ಯಕ್ರಮದಲ್ಲಿ ಶ್ರೀ ಮಹಂತ ಸ್ವಾಮೀಜಿ, ಕೆ.ಎಸ್​.ಗುರುಮೂರ್ತಿ, ಸುಧೀರ್​, ನಾಗರಾಜ್​ ಗೌಡ , ಎನ್​.ವಿ.ಈರೇಶ್​, ರೂಪಕಲಾ ಹೆಗ್ಡೆ ಇತರರಿದ್ದರು.
ಶಿಕಾರಿಪುರದ ವಿರಕ್ತಮಠದಲ್ಲಿ ಆಯೋಜಿಸಿದ್ದ ಶ್ರಾವಣ ಮಾಸದಲ್ಲಿ ಶ್ರವಣಾನುಭವ ಕಾರ್ಯಕ್ರಮದಲ್ಲಿ ಶ್ರೀ ಮಹಂತ ಸ್ವಾಮೀಜಿ, ಕೆ.ಎಸ್​.ಗುರುಮೂರ್ತಿ, ಸುಧೀರ್​, ನಾಗರಾಜ್​ ಗೌಡ , ಎನ್​.ವಿ.ಈರೇಶ್​, ರೂಪಕಲಾ ಹೆಗ್ಡೆ ಇತರರಿದ್ದರು.
Published on
ಶಿಕಾರಿಪುರ: ಸದ್ವಿಚಾರಗಳನ್ನು ಶ್ರವಣ ಮಾಡುವ ಮತ್ತು ಆಧ್ಯಾತ್ಮಿಕ ಸಂದೇಶಗಳನ್ನು ಸಾರುವ ವಿಶಿಷ್ಟ ಮಾಸವೇ ಶ್ರಾವಣ ಮಾಸ ಎಂದು ಶಿಕಾರಿಪುರ ವಿರಕ್ತಮಠದ ಶ್ರೀ ಚನ್ನಬಸವ ಸ್ವಾಮೀಜಿ ಹೇಳಿದರು.
ವಿರಕ್ತಮಠದಲ್ಲಿ ಆಯೋಜಿಸಿದ್ದ ಶ್ರಾವಣ ಮಾಸದಲ್ಲಿ ಶ್ರವಣಾನುಭವ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಅವರು, ಶಿಕಾರಿಪುರದ ಮಣ್ಣಿನ ಕಣಕಣದಲ್ಲೂ ಶರಣರ ಚಿಂತನೆಗಳು ಹಾಸು ಹೊಕ್ಕಾಗಿವೆ. ಶರಣರು ನುಡಿದಂತೆ ನಡೆದವರು. ಸರಳತೆಯ ಸಾಕಾರ ಮೂರ್ತಿಗಳು ಎಂದರು.
ಪಾಂಡೋಮಟ್ಟಿಯ ಶ್ರೀ ಗುರುಬಸವ ಸ್ವಾಮೀಜಿ ಆಶೀರ್ವಚನ ನೀಡಿ, ಶಿಕಾರಿಪುರದ ವಿರಕ್ತಮಠದ ಪೂಜ್ಯರು ನಿರಂತರವಾಗಿ ಈ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದಾರೆ. ಮಾನವೀಯ ಮೌಲ್ಯಗಳನ್ನು ಜನತೆಗೆ ತಲುಪಿಸಿ ಸಚ್ಚಾರಿತ್ರ್ಯ ಮೂಡಿಸುವ ಅವರ ಸಾಮಾಜಿಕ ಕಳಕಳಿ ಉತ್ತಮ ಎಂದು ತಿಳಿಸಿದರು.
ಎಂಎಡಿಬಿ ಮಾಜಿ ಅಧ್ಯ ಕೆ.ಎಸ್​.ಗುರುಮೂರ್ತಿ ಮಾತನಾಡಿ, ಶ್ರಾವಣ ಮಾಸವು ಧಾರ್ಮಿಕ, ಅಧ್ಯಾತ್ಮಿಕ ಹಾಗೂ ಸಾಂಸತಿಕ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಮತ್ತಷ್ಟು ಗಟ್ಟಿಗೊಳಿಸುವ ಪವಿತ್ರ ಕಾಲವಾಗಿದೆ. ಇಂತಹ ಪುಣ್ಯ ಸಂದರ್ಭದಲ್ಲಿ ಆಯೋಜಿಸಲಾದ ಶ್ರಾವಣಾನುಭವ ಕಾರ್ಯಕ್ರಮವು ಧರ್ಮ, ಸಂಸತಿ, ಸಂಸ್ಕಾರ ಹಾಗೂ ಆಧ್ಯಾತ್ಮಿಕ ಚಿಂತನೆಗಳನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ಹೇಳಿದರು.
ತಿಪ್ಪಾಯಿಕೊಪ್ಪದ ಶ್ರೀ ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಉದ್ಯಮಿ ಎನ್​.ವಿ.ಈರೇಶ್​ ಕಾರ್ಯಕ್ರಮ ಉದ್ಘಾಟಿಸಿದರು. ತಾಲೂಕು ವೀರಶೈವ ಮಹಾಸಭಾ ಅಧ್ಯ ಸುಧೀರ್​, ಗ್ಯಾರಂಟಿ ಸಮಿತಿ ಅಧ್ಯ ನಾಗರಾಜ್​ ಗೌಡ, ಹಿರಿಯ ಸಹಕಾರಿ ಬಿ.ಡಿ.ಭೂಕಾಂತ್​, ರೂಪಕಲಾ ಹೆಗ್ಡೆ, ರೈತ ಸಂದ ಪ್ಯಾಟಿ ಈರಣ್ಣ, ಶರಣ ಸಾಹಿತ್ಯ ಪರಿಷತ್​ ತಾಲೂಕು ಅಧ್ಯ ಶಶಿಧರ್​ ಸ್ವಾಮಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net