ಶಿವಮೊಗ್ಗ ಪೊಲೀಸರಿಂದ 4,15,741 ರೂ. ಮೌಲ್ಯದ ಪಟಾಕಿ ಜಪ್ತಿ | Shivamogga Police
ಶಿವಮೊಗ್ಗ ಗ್ರಾಮಾಂತರ ಠಾಣೆ
Published on:
Copied
Follow Us
ಶಿವಮೊಗ್ಗ: ಸಾರಿಗೆ ಅಧಿಕಾರಿಗಳಿಂದ ಪರವಾನಗಿ ಪಡೆಯದೆ ಸುರಕ್ಷಿತ ಕ್ರಮ ಕೈಗೊಳ್ಳದೆ ಪಟಾಕಿ(fireworks)ಸಾಗಿಸುತ್ತಿದ್ದ ಲಾರಿಯನ್ನು ಶಿವಮೊಗ್ಗ ಪೊಲೀಸರು(Shivamogga Police)ವಶಕ್ಕೆ ಪಡೆದಿದ್ದು, 4,15,741 ರೂ. ಮೌಲ್ಯದ ಪಟಾಕಿ ಜಪ್ತಿ ಮಾಡಿದ್ದಾರೆ.
ತಮಿಳುನಾಡಿನ ಶಿವಾಕಾಶಿ(shivakashi)ಯಿಂದ ಶಿವಮೊಗ್ಗ ಮತ್ತು ಹುಬ್ಬಳ್ಳಿಯ ಗೋಡೌನ್(Godown)ಗಳಿಗೆ ಪಟಾಕಿ ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಡಿವೈಎಸ್‌ಪಿ ಸಂಜೀವ್ ಕುಮಾರ್ ನೇತೃತ್ವದಲ್ಲಿ ವಿರೂಪಿನಕೊಪ್ಪ ಬಳಿ ದಾಳಿ ನಡೆಸಲಾಗಿದೆ.
ಸ್ಪೋಟಕ ವಸ್ತುಗಳ ಸಾಗಣೆಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಂದ ಅನುಮತಿ ಪಡೆದಿಲ್ಲ. ಲಾರಿಯಲ್ಲಿ ಅಗ್ನಿ ನಿರೋಧಕ ವಸ್ತುಗಳು ಇಲ್ಲದಿರುವುದು ಗೊತ್ತಾಗಿದೆ. ಘಟನೆ ಸಂಬಂಧ ಚಾಲಕ ಇಬ್ರಾಹಿಂ ಸಾಬ್, ಲಾರಿ ಮಾಲೀಕ, ಪಟಾಕಿ ರವಾನಿಸಿದ ಸಂಸ್ಥೆ ಸೇರಿ ಹಲವರ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.