26ಕ್ಕೆ ಶಿವ ಸಂಕಲ್ಪ ಮಹಿಳಾ ಘಟಕದ ಉದ್ಘಾಟನೆ | Shiva sankalpa

ಶಿವ ಸಂಕಲ್ಪ ಮಹಿಳಾ ಘಟಕದ ಅಧ್ಯಕ್ಷೆ ಆಶಾ ಚನ್ನಬಸಪ್ಪ
ಶಿವ ಸಂಕಲ್ಪ ಮಹಿಳಾ ಘಟಕದ ಅಧ್ಯಕ್ಷೆ ಆಶಾ ಚನ್ನಬಸಪ್ಪ
Published on
ಶಿವಮೊಗ್ಗ: ನಗರದ ಕುವೆಂಪು ರಂಗಮಂದಿರದಲ್ಲಿ ಮಾ.26ರ ಸಂಜೆ 5ಕ್ಕೆ ಶಿವ ಸಂಕಲ್ಪ(Shiva sankalpa) ಮಹಿಳಾ ಘಟಕದ ಉದ್ಘಾಟನೆ ಹಾಗೂ ಕೆಳದಿ ರಾಣಿ ಚನ್ನಮ್ಮಾಜಿ(Keladhi rani chennammaji) ಅವರ 352ನೇ ಸ್ಮರಣೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಹಿಳಾ ಘಟಕದ ಅಧ್ಯಕ್ಷೆ ಆಶಾ ಚನ್ನಬಸಪ್ಪ ಹೇಳಿದರು.
ಶಿರಹಟ್ಟಿಯ ಬಾಲೆಹೊಸೂರು ಮಠದ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಮಹಿಳಾ ಘಟಕ ಉದ್ಘಾಟಿಸುವರು. ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಲಾವಿದೆ ಇಂದುಮತಿ ಸಾಲಿಮಠ್(Indumati Salimath) ವಿಶೇಷ ಉಪನ್ಯಾಸ ನೀಡುವರು. ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಶ್ರೀ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ಸಹ್ಯಾದ್ರಿ ಮಹಿಳಾ ಪಟ್ಟಣ ಸಹಕಾರ ಬ್ಯಾಂಕ್ ಅಧ್ಯಕ್ಷೆ ಪಿ.ವೀರಮ್ಮ, ಸ್ತ್ರೀರೋಗ ತಜ್ಞೆ ಡಾ. ವಾಣಿ ಕೋರಿ, ಜಿಪಂ ಮಾಜಿ ಸದಸ್ಯ ಕೆ.ಇ.ಕಾಂತೇಶ್ ಮತ್ತಿತರರು ಭಾಗವಹಿಸುವರು ಎಂದರು.
ಸಂಜೆ 4ಕ್ಕೆ ಉಭಯ ಶ್ರೀಗಳನ್ನು ಶಿವಮೂರ್ತಿ ವೃತ್ತ(Shivamurthy Circle)ದಿಂದ ಕುವೆಂಪು ರಂಗಮಂದಿರದವರೆಗೆ 500 ಮಹಿಳೆಯರು ಪೂರ್ಣಕುಂಭದ ಮೂಲಕ ಸ್ವಾಗತಿಸಿ, ಸಾಂಸ್ಕೃತಿಕ ಮೇಳಗಳೊಂದಿಗೆ ಮೆರವಣಿಗೆ(Parade)ಯಲ್ಲಿ ಕರೆತರಲಾಗುವುದು ಎಂದು ಹೇಳಿದರು. ಪ್ರಮುಖರಾದ ಇ.ವಿಶ್ವಾಸ್, ಎಸ್.ಎಂ.ಸೋಮಶೇಖರ್, ಬಿ.ಎನ್.ಲಿಂಗಮೂರ್ತಿ, ಪುಷ್ಪಾ, ವಿನುತಾ ಅರವಿಂದ್ ಸುದ್ದಿಗೋಷ್ಠಿಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net