ಶಿಡ್ಲಘಟ್ಟ ಕಾಂಗ್ರೆಸ್ ಮುಖಂಡನ ಬಂಧಿಸಿ I arrest congress leader

ಶಿಡ್ಲಘಟ್ಟ ಪೌರಾಯುಕ್ತೆಗೆ ಬೆದರಿಕೆ ಹಾಕಿದ ರಾಜೀವ್ ಗೌಡನ ಬಂಧನಕ್ಕೆ ಆಗ್ರಹಿಸಿ ಶಿವಮೊಗ್ಗ ನಗರ ಪಾಲಿಕೆ ನೌಕರರ ಸಂಘದ ಎನ್.ಗೋವಿಂದ್, ಮೋಹನ್‌ಕುಮಾರ್, ಮಂಜುನಾಥ್, ಪೂಜಾರ್, ವಸಂತ್‌ಕುಮಾರ್, ಬಾಲಯ್ಯ ಇತರರಿದ್ದರು.
ಶಿಡ್ಲಘಟ್ಟ ಪೌರಾಯುಕ್ತೆಗೆ ಬೆದರಿಕೆ ಹಾಕಿದ ರಾಜೀವ್ ಗೌಡನ ಬಂಧನಕ್ಕೆ ಆಗ್ರಹಿಸಿ ಶಿವಮೊಗ್ಗ ನಗರ ಪಾಲಿಕೆ ನೌಕರರ ಸಂಘದ ಎನ್.ಗೋವಿಂದ್, ಮೋಹನ್‌ಕುಮಾರ್, ಮಂಜುನಾಥ್, ಪೂಜಾರ್, ವಸಂತ್‌ಕುಮಾರ್, ಬಾಲಯ್ಯ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪಾಲಿಕೆ ನೌಕರರಿಂದ ಡಿಸಿ ಕಚೇರಿ ಎದುರು ಪ್ರತಿಭಟನೆ
  • ಮಹಿಳಾ ಅಧಿಕಾರಿಗೆ ಭದ್ರತೆ ನೀಡಲು ಆಗ್ರಹ
  • ಪೌರಾಯುಕ್ತೆಗೆ ನಿಂದಿಸಿದ ಪ್ರಕರಣ
ಶಿವಮೊಗ್ಗ: ಶಿಡ್ಲಘಟ್ಟ ನಗರಸಭೆ ಆಯುಕ್ತೆ ಅಮೃತಾ ಗೌಡ ಅವರಿಗೆ ಕಾಂಗ್ರೆಸ್ (congress) ಮುಖಂಡ ರಾಜೀವ್ ಗೌಡ ಎಂಬಾತ ಬೆದರಿಕೆ ಹಾಕಿ, ಸರ್ಕಾರಿ (goverment) ಕೆಲಸಕ್ಕೆ ಅಡಚಣೆ ಮಾಡಿರುವುದರಿಂದ ಆತನನ್ನು ಬಂಧಿಸಿ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ನಗರ ಪಾಲಿಕೆ ನೌಕರರು ಶುಕ್ರವಾರ ಡಿಸಿ ಕಚೇರಿ ಎದುರು ಪ್ರತಿಭಟನೆ (protest)ನಡೆಸಿದರು.
ಆಯುಕ್ತೆಗೆ ದೂರವಾಣಿಯಲ್ಲಿ ರಾಜೀವ್ ಗೌಡ ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾನೆ. ಮಹಿಳಾ ಅಧಿಕಾರಿಯ ಘನತೆಗೆ ಕುಂದು ಉಂಟಾಗಿದೆ. ಸರ್ಕಾರಿ ಕೆಲಸಕ್ಕೆ ಅಡ್ಡಿ, ಶಾಂತಿ ಭಂಗಕ್ಕೆ ಪ್ರಚೋದನೆ ಮತ್ತು ಬೆದರಿಕೆ, ಗಲಭೆಗೆ ಕುಮ್ಮಕ್ಕು ನೀಡಿದ ಆರೋಪದ ದೂರು ದಾಖಲಾಗಿದೆ. ಇದು ನಾಗರಿಕ ಸಮಾಜ ತಲೆತಗ್ಗಿಸುವಂತಹ ಘಟನೆ ಎಂದು ದೂರಿದರು.
ಪೌರಕಾರ್ಮಿಕರಿಂದ ಹಿಡಿದು, ಆಯುಕ್ತರವರೆಗೆ ನಿಂದನೆ ಮತ್ತು ಬೆದರಿಕೆ ಕರೆಗಳು ಬರುತ್ತಿವೆ. ಕೆಲಸ ಮಾಡುವ ನೌಕರರಿಗೆ ಅವಮಾನ ಮಾಡಲಾಗುತ್ತಿದೆ. ಆದ್ದರಿಂದ ರಾಜೀವ್ ಗೌಡನನ್ನು ಕೂಡಲೇ ಬಂಧಿಸಬೇಕು. ಪೌರಾಯುಕ್ತರಿಗೆ ಭದ್ರತೆ ನೀಡಬೇಕೆಂದು ಒತ್ತಾಯಿಸಿದರು.
ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಎನ್.ಗೋವಿಂದ್, ಪ್ರಧಾನ ಕಾರ್ಯದರ್ಶಿ ಮೋಹನ್‌ಕುಮಾರ್, ಪದಾಧಿಕಾರಿಗಳಾದ ಪೂಜಾರ್, ವಸಂತ್‌ಕುಮಾರ್, ಮಂಜುನಾಥ್, ಬಾಲಯ್ಯ, ಲೋಹಿತ್ ಯಾದವ್, ಮಧು, ಮಾರುತಿ, ಎಸ್.ಆರ್.ನಾಗೇಶ್, ಸುನೀಲ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net