ಅಹೋರಾತ್ರಿ ಧರಣಿಯು ಮಾ.24ರಂದು ಬೆಳಗ್ಗೆ 9.30ರಿಂದ 25ರ ಬೆಳಗ್ಗೆ 9.30ರವರೆಗೆ ನಡೆಯಲಿದ್ದು, ನಂತರ ಸಹಿ ಸಂಗ್ರಹ ನಡೆಯಲಿದೆ. ಬೆಕ್ಕಿನ ಕಲ್ಮಠದ ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಬಸವ ಕೇಂದ್ರದ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿ, ಬಂಗಾರಮಕ್ಕಿಯ ಶ್ರೀ ಮಾರುತಿ ಗುರೂಜಿ, ವಿನಯ್ ಗುರೂಜಿ, ಬಿಳಕಿ ಮಠದ ಶ್ರೀ ರಾಚೋಟೇಶ್ವರ ಸ್ವಾಮೀಜಿ, ಪರಿಸರಕ್ಕಾಗಿ ನಾವು ಸಂಘಟನೆಯ ಎ.ಟಿ.ರಾಮಸ್ವಾಮಿ, ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ, ಪ್ರಮುಖರಾದ ಪರಶುರಾಮೇಗೌಡ, ಪ್ರೊ. ಎಲ್.ಕೆ.ಶ್ರೀಪತಿ, ಕೆ.ಈ.ಕಾಂತೇಶ್, ಡಾ. ಶೇಖರ್ ಗೌಳೇರ್ ಸೇರಿ 500ಕ್ಕೂ ಅಧಿಕ ಗಣ್ಯರು ಭಾಗವಹಿಸುವರು ಎಂದರು.