ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಎರಡು ಗುಂಪುಗಳ ಮಧ್ಯೆ ಗಲಾಟೆ । Centrol Jail

 ಸೋಗಾನೆಯ ಕೇಂದ್ರ ಕಾರಾಗೃಹ
ಸೋಗಾನೆಯ ಕೇಂದ್ರ ಕಾರಾಗೃಹ
Published on
ಶಿವಮೊಗ್ಗ: ಸೋಗಾನೆಯ ಕೇಂದ್ರ ಕಾರಾಗೃಹ(Centrol Jail)ದ ಶರಾವತಿ ವಿಭಾಗದಲ್ಲಿ ಕೈದಿಗಳ ಎರಡು ಗುಂಪುಗಳ ಮಧ್ಯೆ ಗಲಾಟೆಯಾಗಿದ್ದು, ಕೆಲವರ ಮೇಲೆ ಹಲ್ಲೆ ನಡೆದಿದೆ. 
ಸೊಹೈಲ್ ಅಹ್ಮದ್ ಮತ್ತು ಮೊಹ್ಮದ್ ಜುನೈದ್ ಎಂಬುವರು ಟವರ್(Tower) ವಿಭಾಗದ ಬಳಿ ಬಂದಾಗ ಅನ್ವರ್ ಎಂಬಾತನೊಂದಿಗೆ ಮಾತಿನ ಚಕಮಕಿ ನಡೆದಿದೆ. ನಂತರ ಅನ್ವರ್ ಮತ್ತು ಆತನ ಸಹಚರರು ಭದ್ರಾ ವಿಭಾಗದ ಕೊಠಡಿಗೆ ತೆರಳಿ ಸೊಹೈಲ್ ಮತ್ತು ಜುನೈದ್ ಮೇಲೆ ಹಲ್ಲೆ ನಡೆಸಿದ್ದಾರೆ. 
ಗಾಯಗೊಂಡ ಕೈದಿಗಳನ್ನು ಚಿಕಿತ್ಸೆಗಾಗಿ ಕಾರಾಗೃಹದ ಆಸ್ಪತ್ರೆ(Hospital)ಗೆ ದಾಖಲಿಸಿದ್ದು, ಆರೋಪಿಗಳಾದ ತನ್ವೀರ್, ಅನ್ವರ್, ಸೈಯದ್ ಇಷಾಖ್ ಮತ್ತು ವಸೀಂ ಅಕ್ರಂ ಆಸ್ಪತ್ರೆಯ ಮುಂಭಾಗಕ್ಕೆ ಬಂದು ಒಳಗೆ ನುಗ್ಗಲು ಪ್ರಯತ್ನಿಸಿದ್ದಾರೆ. ಈ ಸಂದರ್ಭ ಬಂದಿ ಅನ್ವರ್ ಎಂಬಾತ ಹೂವಿನ ಕುಂಡದಿಂದ ಹೊಡೆಯಲು ಯತ್ನಿಸಿ, ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ. 
ಘಟನೆಗೆ ಸಂಬಂಧಿಸಿದಂತೆ ತನ್ವೀರ್, ಅನ್ವರ್, ಸೊಹೈಲ್ ಅಹ್ಮದ್, ಮೊಹ್ಮದ್ ಜುನೈದ್, ಮೊಹ್ಮದ್ ಇಮ್ರಾನ್, ಸೈಯದ್ ಇಷಾಖ್, ವಸೀಂ ಅಕ್ರಂ ಮತ್ತು ಫರ್ದೀನ್ ಶೇಖ್ ಎಂಬುವರ ವಿರುದ್ಧ ಜೈಲು ಅಧೀಕ್ಷಕಿ ಆರ್.ಪ್ರೀತಿ  ನೀಡಿದ ದೂರಿನ ಮೇರೆಗೆ ತುಂಗಾನಗರ(Tunganagara) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net