ಜಾಹೀರಾತು ನಂಬಿ ಲಕ್ಷ ಲಕ್ಷ ಕಳೆದುಕೊಂಡ ನಿವೃತ್ತ ಬ್ಯಾಂಕ್ ನೌಕರ Retired bank employee

ಫೇಸ್‌ಬುಕ್‌ನಲ್ಲಿ ಬಂದಿದ್ದ ಜಾಹೀರಾತು ನಂಬಿದ ನಿವೃತ್ತ ಬ್ಯಾಂಕ್ ನೌಕರರೊಬ್ಬರು 2.29 ಲಕ್ಷ ರೂ. ಕಳೆದುಕೊಂಡಿದ್ದಾರೆ.
Retired bank employee
ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆ
Published on: 

ಶಿವಮೊಗ್ಗ: ಫೇಸ್‌ಬುಕ್‌ನಲ್ಲಿ ಬಂದಿದ್ದ ಜಾಹೀರಾತು ನಂಬಿದ ನಿವೃತ್ತ ಬ್ಯಾಂಕ್ ನೌಕರರೊಬ್ಬರು 2.29 ಲಕ್ಷ ರೂ. ಕಳೆದುಕೊಂಡಿದ್ದಾರೆ.

ನಿವೃತ್ತ ನೌಕರ ತನ್ನ ಮೊಬೈಲ್‌ನಲ್ಲಿ ಫೇಸ್‌ಬುಕ್ ನೋಡ್ತಿದ್ದಾಗ ಜಾಹೀರಾತು ಕಾಣಿಸಿಕೊಂಡಿದೆ. ಅದರಲ್ಲಿ ಪಿಂಚಣಿ ಬಗ್ಗೆ ಮಾಹಿತಿ ತುಂಬಿದ್ದರು. ತದನಂತರ ನಿವೃತ್ತ ನೌಕರನ ಮೊಬೈಲ್‌ಗೆ ವಂಚಕರು ಫೋನ್ ಮಾಡಿದ್ದರು. ಕರೆ ಸ್ವೀಕರಿಸಿದ ನಿವೃತ್ತ ನೌಕರನಿಗೆ ವಂಚಕರು ನಾವು ಕೆನರಾ ಬ್ಯಾಂಕ್‌ನವರೆಂದು ಪರಿಚಯಿಸಿಕೊಂಡಿದ್ದರು.

ನಂತರ ಲೈಫ್ ಸರ್ಟಿಫಿಕೇಟ್ ಬೇಕೆಂದು ದೂರುದಾರರ ಕಸ್ಟಮರ್ ಐಡಿ, ಹೆಸರು, ಜನ್ಮದಿನಾಂಕ, ಎಟಿಎಂ ಕಾರ್ಡ್ ಸಂಖ್ಯೆ ಹಾಗೂ ಪಿನ್ ನಂಬರ್ ಪಡೆದುಕೊಂಡಿದ್ದರು. ಅದಾದ ಕೆಲವೇ ಕ್ಷಣಗಳಲ್ಲಿ ದೂರುದಾರರ ಖಾತೆಯಿಂದ ಹಂತ ಹಂತವಾಗಿ 2.29 ಲಕ್ಷ ರೂ. ಕಡಿತಗೊಂಡಿದೆ. ಬಳಿಕ ಮೋಸ ಹೋದ ನಿವೃತ್ತ ನೌಕರ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net