ಕ್ರಿಯಾಶೀಲ ಮನೋಭಾವ ವೃದ್ಧಿಸುವ ಪುಸ್ತಕ ಓದು

ಸಾಗರ ತಾಲೂಕಿನ ಅಮಟೆಕೊಪ್ಪದ ಹೊಂಗಿರಣ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ಪುಸ್ತಕ ಸಪ್ತಾಹ ಸಮಾರೋಪದಲ್ಲಿ ತಾಲೂಕ ಕಸಾಪ ಅಧ್ಯಕ್ಷ ವಿ.ಟಿ.ಸ್ವಾಮಿ, ಕವಿತಾ, ಶೋಭಾ, ಅರವಿಂದ ಇತರರಿದ್ದರು.
ಸಾಗರ ತಾಲೂಕಿನ ಅಮಟೆಕೊಪ್ಪದ ಹೊಂಗಿರಣ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ಪುಸ್ತಕ ಸಪ್ತಾಹ ಸಮಾರೋಪದಲ್ಲಿ ತಾಲೂಕ ಕಸಾಪ ಅಧ್ಯಕ್ಷ ವಿ.ಟಿ.ಸ್ವಾಮಿ, ಕವಿತಾ, ಶೋಭಾ, ಅರವಿಂದ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಆಲೋಚನಾ ಕ್ರಮಗಳಿಗೆ ದಾರಿ ತೋರಿಸುವ ಮಾರ್ಗದರ್ಶಿ
  • ಪ್ರತಿಯೊಬ್ಬರು ಪುಸ್ತಕ ಪ್ರೀತಿ ಬೆಳೆಸಿಕೊಳ್ಳಿ
ಸಾಗರ: ಪುಸ್ತಕಗಳನ್ನು ಪ್ರೀತಿಸುವವರು ಜಗತ್ತನ್ನು ಸದಾ ಪ್ರೀತಿಸುತ್ತಾರೆ. ಪುಸ್ತಕ ನಮ್ಮಲ್ಲಿ ಕ್ರಿಯಾಶೀಲ ಮನೋಭಾವ ವೃದ್ಧಿಸುತ್ತದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿ.ಟಿ.ಸ್ವಾಮಿ ಹೇಳಿದರು.
ತಾಲೂಕಿನ ಅಮಟೆಕೊಪ್ಪದ ಹೊಂಗಿರಣ ಶಿಕ್ಷಣ ಸಂಸ್ಥೆಯಲ್ಲಿ ಪುಸ್ತಕ ಸಪ್ತಾಹ ಸಮಾರೋಪದಲ್ಲಿ ಮಾತನಾಡಿ, ಪುಸ್ತಕ ಇಲ್ಲದ ಜಗತ್ತನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಪುಸ್ತಕ ಎನ್ನುವುದು ವಸ್ತುವಾಗಿ ನೋಡದೆ ನಮ್ಮ ಆಲೋಚನಾ ಕ್ರಮಗಳಿಗೆ ದಾರಿ ತೋರಿಸುವ ಮಾರ್ಗದರ್ಶಿ ಎಂದೇ ಭಾವಿಸಬೇಕು. ಪುಸ್ತಕ ಸಂಸ್ಕೃತಿಯನ್ನು ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ತೆಗೆದುಕೊಂಡು ಹೋಗುವ ಕೆಲಸ ಮಾಡಬೇಕಿದೆ. ಮನುಷ್ಯರ ಜೀವನವನ್ನು ಅತಿ ಎತ್ತರಕ್ಕೆ ಒಯ್ಯುವ ಶಕ್ತಿ ಪುಸ್ತಕಗಳಲ್ಲಿದೆ. ವಿದ್ಯಾರ್ಥಿಗಳಿರುವ ಪ್ರತಿ ಮನೆಯಲ್ಲೂ ಗ್ರಂಥಾಲಯ ಸ್ಥಾಪನೆ ಆಗಬೇಕು ಎಂದು ತಿಳಿಸಿದರು.
ಕವಿತಾ ಮಾತನಾಡಿ, ಪುಸ್ತಕಗಳನ್ನು ಮರೆತರೆ ನಮ್ಮನ್ನು ನಾವು ಮರೆತಂತೆ. ಪ್ರತಿಯೊಬ್ಬರು ಪುಸ್ತಕ ಪ್ರೀತಿ ಬೆಳೆಸಿಕೊಳ್ಳಬೇಕು. ಮಕ್ಕಳಿಗೆ ಬಾಲ್ಯದಿಂದ ಪುಸ್ತಕ ಓದುವ ಹವ್ಯಾಸ ಬೆಳೆಸಬೇಕು ಎಂದರು. ಹೊಂಗಿರಣ ಶಿಕ್ಷಣ ಸಂಸ್ಥೆ ಪ್ರಾಚಾರ್ಯೆ ಶೋಭಾ, ಉಪಪ್ರಾಚಾರ್ಯ ಅರವಿಂದ, ಎಂ.ಎಚ್.ಶಿಲ್ಪಾ, ಕಲ್ಲೇಶ್, ಶ್ರಾವ್ಯಾ ಹೆಗಡೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net