ಶುದ್ಧ ನೀರು ಪೂರೈಕೆಗೆ ಆಗ್ರಹಿಸಿ ಪ್ರತಿಭಟನೆ | Water purification

ಶಿವಮೊಗ್ಗಕ್ಕೆ ಶುದ್ಧ ನೀರು ಪೂರೈಸಬೇಕು ಎಂದು ಒತ್ತಾಯಿಸಿ ವಿವಿಧ ಸಂಘಟನೆಗಳ ಪ್ರಮುಖರಾದ ಎಸ್.ಆರ್.ಗೋಪಾಲ್, ಕೆ.ವಿ.ವಸಂತಕುಮಾರ್, ಡಾ. ಎ.ಸತೀಶ್‌ಕುಮಾರ್ ಶೆಟ್ಟಿ, ಎಸ್.ಬಿ.ಅಶೋಕಕುಮಾರ್, ಡಾ. ಕೆ.ಆರ್.ಶ್ರೀಧರ್, ಬಿ.ಗೋಪಿನಾಥ್, ಜೆ.ಆರ್.ವಾಸುದೇವ, ಜನಾರ್ದನ ಪೈ, ಶೇಖರ್ ಗೌಳೇರ್, ಚನ್ನವೀರಪ್ಪ ಗಾಮನಗಟ್ಟಿ ಇದ್ದರು.
ಶಿವಮೊಗ್ಗಕ್ಕೆ ಶುದ್ಧ ನೀರು ಪೂರೈಸಬೇಕು ಎಂದು ಒತ್ತಾಯಿಸಿ ವಿವಿಧ ಸಂಘಟನೆಗಳ ಪ್ರಮುಖರಾದ ಎಸ್.ಆರ್.ಗೋಪಾಲ್, ಕೆ.ವಿ.ವಸಂತಕುಮಾರ್, ಡಾ. ಎ.ಸತೀಶ್‌ಕುಮಾರ್ ಶೆಟ್ಟಿ, ಎಸ್.ಬಿ.ಅಶೋಕಕುಮಾರ್, ಡಾ. ಕೆ.ಆರ್.ಶ್ರೀಧರ್, ಬಿ.ಗೋಪಿನಾಥ್, ಜೆ.ಆರ್.ವಾಸುದೇವ, ಜನಾರ್ದನ ಪೈ, ಶೇಖರ್ ಗೌಳೇರ್, ಚನ್ನವೀರಪ್ಪ ಗಾಮನಗಟ್ಟಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಿಥಿಲಾವಸ್ಥೆಯಲ್ಲಿ ನೀರು ಶುದ್ಧೀಕರಣ ಘಟಕದ ಉಪಕರಣ
  • ಡಿಸಿ ಕಚೇರಿ ಎದುರು ವಿವಿಧ ಸಂಘಟನೆಗಳ ಪ್ರತಿಭಟನೆ
  • ಮುಂಜಾಗ್ರತೆ ವಹಿಸದ ನಗರ ನೀರು ಸರಬರಾಜು ಮಂಡಳಿ
ಶಿವಮೊಗ್ಗ: ನಗರಕ್ಕೆ ಶುದ್ಧ ನೀರು(Clean water) ಪೂರೈಕೆಗೆ ಶಾಶ್ವತ ಯೋಜನೆ ರೂಪಿಸುವಂತೆ ಆಗ್ರಹಿಸಿ ಶಿವಮೊಗ್ಗ ನಾಗರಿಕರ ಹಿತರಕ್ಷಣಾ ವೇದಿಕೆಗಳ ಒಕ್ಕೂಟ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ರೋಟರಿ ಕ್ಲಬ್ ಮಿಡ್‌ಟೌನ್ ಪದಾಧಿಕಾರಿಗಳು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ(Protest) ನಡೆಸಿದರು.
ಕೆಲ ದಿನಗಳಿಂದ ಮಣ್ಣು ಮಿಶ್ರಿತ ನೀರು ಪೂರೈಕೆಯಾಗುತ್ತಿದೆ. ಇದು ನಾಗರಿಕರ ಆರೋಗ್ಯ ಮೇಲೆ ದುಷ್ಪರಿಣಾಮ ಬೀರುತ್ತಿದೆ. ನೀರು ಶುದ್ಧೀಕರಣ ಘಟಕ(Purification plant)ದಲ್ಲಿ ಮಳೆಗಾಲಕ್ಕೆ ಮುಂಚಿತವಾಗಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮ ಪಾಲಿಸುತ್ತಿಲ್ಲ. ಇದರಿಂದ ಯಂತ್ರಗಳ ನಿರ್ವಹಣಾ ಕಾರ್ಯ ಸರಿಯಾಗದೆ ಕಲುಷಿತ ನೀರು ಪೂರೈಕೆಯಾಗುತ್ತಿದೆ. ಇದಕ್ಕೆ ಕರ್ನಾಟಕ ನಗರ ನೀರು ಸರಬರಾಜು ಮಂಡಳಿ(ಕೆಯುಡಬ್ಲುೃಎಸ್)ಯ ನಿರ್ಲಕ್ಷೃವೇ ಕಾರಣ ಎಂದು ದೂರಿದರು.
ಮಣ್ಣು ಮಿಶ್ರಿತ ನೀರು ಮನೆಗಳ ನೀರಿನ ತೊಟ್ಟಿಗೆ ಸೇರುತ್ತಿದೆ. ಪ್ರತಿವರ್ಷ ನೀರಿನ ತೊಟ್ಟಿ ಅಥವಾ ಟ್ಯಾಂಕ್‌ಗಳ ಸ್ವಚ್ಛತೆಗೆ ಹಲವಾರು ರೂ. ವ್ಯಯಿಸಬೇಕಿದೆ. ಕಲುಷಿತ ನೀರು(Polluted water) ಪೂರೈಕೆ ಬಗ್ಗೆ ಪ್ರಶ್ನಿಸಿದರೆ ಹೆಚ್ಚು ಮಳೆ ಬಂದ ಕಾರಣಕ್ಕೆ ಹೀಗಾಗಿದೆ ಎಂದು ಮಂಡಳಿ ಹಾರಿಕೆ ಉತ್ತರ ನೀಡುತ್ತಿದೆ. ಇದು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ಯತ್ನ ಎಂದು ವಾಗ್ದಾಳಿ ನಡೆಸಿದರು.
ರಾಜ್ಯ ಸರ್ಕಾರದ ಗಮನಕ್ಕೆ ತಂದು ಬಜೆಟ್‌ಪೂರ್ವ(Pre-Budget)ದಲ್ಲಿ ನೀರು ಶುದ್ಧೀಕರಣ ಘಟಕವನ್ನು ಮೇಲ್ದರ್ಜೆಗೆ ಏರಿಸಬೇಕೆಂದು ಈ ಹಿಂದೆ ಒತ್ತಾಯಿಸಿದರೂ ಕ್ರಮ ಕೈಗೊಳ್ಳಲಿಲ್ಲ. ಸಮಸ್ಯೆ ಸರಿಪಡಿಸಲು ಜಿಲ್ಲಾ ಉಸ್ತುವಾರಿ ಸಚಿವರು ಸೇರಿ ಜನಪ್ರತಿನಿಧಿಗಳ ಉನ್ನತಮಟ್ಟದ ಸಭೆಯ ಅಗತ್ಯವಿದೆ. ಇಂತಹ ಸಭೆಯನ್ನು ಕೂಡಲೇ ಆಯೋಜಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಒಕ್ಕೂಟದ ಅಧ್ಯಕ್ಷ ಎಸ್.ಆರ್.ಗೋಪಾಲ್, ಪ್ರಧಾನ ಕಾರ್ಯದರ್ಶಿ  ಕೆ.ವಿ.ವಸಂತಕುಮಾರ್, ಸಂಘಟನಾ ಕಾರ್ಯದರ್ಶಿ ಡಾ. ಎ.ಸತೀಶ್‌ಕುಮಾರ್ ಶೆಟ್ಟಿ, ಕಾರ್ಯದರ್ಶಿ ಎಸ್.ಬಿ.ಅಶೋಕಕುಮಾರ್, ಪ್ರಮುಖರಾದ ಡಾ. ಕೆ.ಆರ್.ಶ್ರೀಧರ್, ಬಿ.ಗೋಪಿನಾಥ್, ಜೆ.ಆರ್.ವಾಸುದೇವ, ಡಿ.ಎಂ.ಶಂಕರಪ್ಪ, ಸೋಮಶೇಖರ್, ಸೀತಾರಾಮ್, ಎಸ್.ಎನ್.ವೆಂಕಟೇಶ್, ವಿನೋದ್ ಪೈ, ಜನಾರ್ದನ ಪೈ, ಶೇಖರ್ ಗೌಳೇರ್, ಎಸ್.ರಾಜು, ಭಾಸ್ಕರ್ ಕಾಮತ್, ಗಣೇಶ್ ಅಂಗಡಿ, ಚನ್ನವೀರಪ್ಪ ಗಾಮನಗಟ್ಟಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net