ಅಂಗನವಾಡಿ ಕಾರ್ಯಕರ್ತೆಯರಿಂದ ಪ್ರತಿಭಟನೆ I anganawadi protest

 ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕೆ.ಸಿ.ವಿಶಾಲ, ವೇದಾವತಿ, ಪುಷ್ಪಾ ಸಾಗರ್, ಕಲಾವತಿ, ಕುಸುಮಾ, ರೇಣುಕಾ, ಗಾಯತ್ರಿ ಇದ್ದರು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕೆ.ಸಿ.ವಿಶಾಲ, ವೇದಾವತಿ, ಪುಷ್ಪಾ ಸಾಗರ್, ಕಲಾವತಿ, ಕುಸುಮಾ, ರೇಣುಕಾ, ಗಾಯತ್ರಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ
  • ಹೊಸ ಜವಾಬ್ದಾರಿಗಳನ್ನು ನೀಡಿದಂತೆ ಒತ್ತಾಯ
ಶಿವಮೊಗ್ಗ: ಗೌರವಧನ ಹೆಚ್ಚಳ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಅಂಗನವಾಡಿ (anganawadi) ಕಾರ್ಯಕರ್ತೆಯರು (workers) ಮತ್ತು ಸಹಾಯಕಿಯರ ೆಡರೇಷನ್ ಶಿವಮೊಗ್ಗ ಜಿಲ್ಲಾ ಸಮಿತಿಯಿಂದ ಮಂಗಳವಾರ ಡಿಸಿ ಕಚೇರಿ ಎದುರು ಪ್ರತಿಭಟನೆ (protest) ನಡೆಸಲಾಯಿತು.
ಅಂಗನವಾಡಿ ಕಾರ್ಯಕರ್ತೆಯರಿಗೆ 15 ಸಾವಿರ ರೂ. ಹಾಗೂ ಸಹಾಯಕಿಯರಿಗೆ 10 ಸಾವಿರ ರೂ.ವರೆಗೆ ಗೌರವಧನ ಹೆಚ್ಚಿಸಬೇಕು. 2011ರಿಂದ ನಿವೃತ್ತರಾದ ಎಲ್ಲ ಕಾರ್ಯಕರ್ತೆಯರು, ಸಹಾಯಕಿಯರಿಗೆ ಗ್ರಾಚ್ಯುಟಿ ಹಾಗೂ ಸ್ವಯಂ ನಿವೃತ್ತರಿಗೂ ಗ್ರಾಚ್ಯುಟಿ ನೀಡಬೇಕು ಎಂದು ಆಗ್ರಹಿಸಿದರು.
ನಿವೃತ್ತರಿಗೆ ಮಾಸಿಕ ಪಿಂಚಣಿ ನೀಡಬೇಕು. ನಿವೃತ್ತಿ ವಯೋಮಿತಿಯನ್ನು 65ಕ್ಕೆ ಏರಿಸಬೇಕು. ಅಂಗನವಾಡಿ ಕೇಂದ್ರದ ಕೆಲಸದ ಜತೆಗೆ ಇತರೆ ಜವಾಬ್ದಾರಿ ಹೊರಿಸುವುದನ್ನು ನಿಲ್ಲಿಸಬೇಕು. ಇತರ ಜವಾಬ್ದಾರಿ ನಿರಾಕರಿಸುವ ಕಾರ್ಯಕರ್ತೆಯರ ವಿರುದ್ಧ ಕ್ರಮ ಜರುಗಿಸಿ ಅಮಾನತುಗೊಳಿಸುತ್ತಿರುವುದನ್ನು ಕೂಡಲೆ ಕೈಬಿಡಬೇಕೆಂದು ಒತ್ತಾಯಿಸಿದರು.
ಎಸ್‌ಐಆರ್ ಸಮೀಕ್ಷೆ ಮಾಡುವವರಿಗೆ ಹೆಚ್ಚುವರಿ ಗೌರವಧನ ನೀಡಬೇಕು. ಸಮೀಕ್ಷೆ ವೇಳೆ ಅನಾರೋಗ್ಯಕ್ಕೆ ತುತ್ತಾದವರಿಗೆ ವೈದ್ಯಕೀಯ ವೆಚ್ಚ ಹಾಗೂ ಮೃತರಾದವರಿಗೆ 30ಲಕ್ಷ ರೂ. ಪರಿಹಾರ ನೀಡಬೇಕು. 50ವರ್ಷ ಮೇಲ್ಪಟ್ಟವರು ಮತ್ತು ಅನಾರೋಗ್ಯ ಸಮಸ್ಯೆ ಇರುವ ಕಾರ್ಯಕರ್ತೆಯರು ಹಾಗೂ ಸಹಾಯಕಿಯರನ್ನು ಸಮೀಕ್ಷೆ ಕಾರ್ಯದಿಂದ ಕೈಬಿಡಬೇಕು ಎಂದು ಆಗ್ರಹಿಸಿದರು. ತಮ್ಮ ಸಂಘಟನೆಯ ಒಟ್ಟು 29ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
ೆಡರೇಷನ್ ಜಿಲ್ಲಾಧ್ಯಕ್ಷೆ ಕೆ.ಸಿ.ವಿಶಾಲ, ಕಾರ್ಯದರ್ಶಿ ವೇದಾವತಿ, ಪ್ರಮುಖರಾದ ಎನ್.ರವೀಂದ್ರ ಸಾಗರ್, ಪುಷ್ಪಾ ಸಾಗರ್, ಶಶಿಕಲಾ, ಗಾಯತ್ರಿ, ರೇಣುಕಾ, ಕಲಾವತಿ, ಗೀತಾ, ಲೀಲಾವತಿ, ಕುಸುಮಾ, ಲಕ್ಷ್ಮೀ, ವಿ.ಆರ್.ಮೀನಾಕ್ಷಿ, ಸುಶೀಲಾಬಾಯಿ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net