ಮರ ಕಡಿತಲೆ ಖಂಡಿಸಿ ಪರಿಸರ ಹೋರಟಗಾರರು, ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಹಾಗೂ ರಾಷ್ಟ್ರಭಕ್ತ ಬಳಗದ ಪದಾಧಿಕಾರಿಗಳು ನಗರದ ಸೈನ್ಸ್ ಮೈದಾನದಲ್ಲಿ ಪ್ರತಿಭಟನೆ ನಡೆಸಿದರು. ಎಸ್.ಆರ್.ಗೋಪಾಲ್, ಕೆ.ವಿ.ವಸಂತಕುಮಾರ್, ಡಾ. ಎ.ಸತೀಶ್‌ಕುಮಾರ್ ಶೆಟ್ಟಿ, ಪ್ರೊ ಎಲ್.ಕೆ.ಶ್ರೀಪತಿ, ಶೇಖರ್ ಗೌಳೆರ್, ಅಶೋಕ್‌ಕುಮಾರ್, ಜರ್ನಾಧನ್ ಪೈ, ಕೆ.ವಿ.ಸುಬ್ಬಣ್ಣ, ನಾಗೇಶ್, ಶ್ರೀಕಾಂತ್ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಶಾಲಾ ಕಟ್ಟಡ ನಿರ್ಮಾಣದ ನೆಪ
ರಾತ್ರೋರಾತ್ರಿ ಸೈನ್ಸ್ ಮೈದಾನದಲ್ಲಿದ್ದ ಬೃಹತ್ ಮರಗಳ ಕಡಿತಲೆ
ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಒತ್ತಾಯ
ಶಿವಮೊಗ್ಗ: ಶಾಲಾ ಕಟ್ಟಡ ನಿರ್ಮಾಣದ ನೆಪದಲ್ಲಿ ಸಾರ್ವಜನಿಕರ ಅಭಿಪ್ರಾಯ ಪಡೆಯದೆ 20ಕ್ಕೂ ಅಧಿಕ ಮರ ಕಡಿತಲೆ ಮಾಡಿರುವುದನ್ನು ಖಂಡಿಸಿ ಪರಿಸರ ಹೋರಾಟಗಾರರು(Environmental activists), ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಹಾಗೂ ರಾಷ್ಟ್ರಭಕ್ತ ಬಳಗದ ಪದಾಧಿಕಾರಿಗಳು ಶನಿವಾರ ನಗರದ ಸೈನ್ಸ್ ಮೈದಾನದಲ್ಲಿ ಪ್ರತಿಭಟನೆ(Protest) ನಡೆಸಿದರು.
ರಾತ್ರೋರಾತ್ರಿ ಸೈನ್ಸ್ ಮೈದಾನ(Science Ground)ದಲ್ಲಿದ್ದ ಬೃಹತ್ ಮರಗಳನ್ನು ಕಡಿತಲೆಗೊಳಿಸಲಾಗಿದೆ. ಮರಗಳನ್ನು ಕಡಿದಿರುವ ಪ್ರದೇಶವು ಹಸಿರು ವಲಯಕ್ಕೆ ಒಳಪಟ್ಟಿದೆ. ಮರಗಳ ತೆರವಿಗೆ ಸಂಬಂಧಿಸಿದಂತೆ ಅನುಮತಿ ಪಡೆದಿರುವ ಬಗ್ಗೆ ಗೊಂದಲವಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಒಂದೆಡೆ ಜಿಲ್ಲಾ ಪಂಚಾಯತ್(District Panchayat) ಮನವಿ ಮೇರೆಗೆ ಅರಣ್ಯ ಇಲಾಖೆ ಮರಗಳ ಕಡಿತಕ್ಕೆ ಅನುಮತಿ ನೀಡಿದೆ ಎನ್ನಲಾಗುತ್ತಿದ್ದರೆ, ಮತ್ತೊಂದೆಡೆ ಯಾವುದೇ ಅನುಮತಿ ಪಡೆದಿಲ್ಲ ಎಂಬ ಮಾಹಿತಿಯೂ ಇದೆ. ಹೀಗಾಗಿ ಈ ಕುರಿತು ಜಿಲ್ಲಾಡಳಿತವು ದಾಖಲೆಗಳನ್ನು ಪರಿಶೀಲಿಸಿ ವಾಸ್ತವಾಂಶ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ಸಾರ್ವಜನಿಕ ಸಭೆ(Public meeting) ಅಥವಾ ವಿಚಾರಣೆ ನಡೆಸದೆ ಮರಗಳನ್ನು ಕಡಿದಿರುವುದು ಸರಿಯಲ್ಲ. ಮರಗಳ ತೆರವುಗೊಳಿಸುವ ಮೊದಲು ಪರಿಸರದ ಮೇಲೆ ಉಂಟಾಗುವ ಪರಿಣಾಮವನ್ನು ಪರಿಗಣಿಸಬೇಕಿತ್ತು. ಮರಗಳ ನಷ್ಟಕ್ಕೆ ಸೂಕ್ತ ಪರ್ಯಾಯ ವ್ಯವಸ್ಥೆಯನ್ನೂ ಕಲ್ಪಿಸಿಲ್ಲ. ನಗರದಲ್ಲಿ ವರ್ಷದಿಂದ ವರ್ಷಕ್ಕೆ ತಾಪಮಾನ ಹೆಚ್ಚುತ್ತಿರುವ ಸಂದರ್ಭದಲ್ಲಿ ನಗರದ ಹಸಿರು ಪ್ರದೇಶಗಳು ಮತ್ತು ಮರಗಳನ್ನು ಸಂರಕ್ಷಿಸುವುದು ಅಧಿಕಾರಿಗಳ ಪ್ರಮುಖ ಜವಾಬ್ದಾರಿಯಾಗಿದೆ. ನಗರೀಕರಣದ ಹೆಸರಿನಲ್ಲಿ ಹಸಿರು ಪ್ರದೇಶಗಳಿಗೆ ಹಾನಿಯಾಗದಂತೆ ಜಿಲ್ಲಾಡಳಿತ ಎಚ್ಚರಿಕೆ ವಹಿಸಬೇಕು. ಒಟ್ಟಾರೆ ಮರಗಳ ಕಡಿತಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಎಡಿಸಿ ವಿ.ಅಭಿಷೇಕ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಅಧ್ಯಕ್ಷ ಎಸ್.ಆರ್.ಗೋಪಾಲ್, ಪ್ರಧಾನ ಕಾರ್ಯದರ್ಶಿ ಕೆ.ವಿ.ವಸಂತಕುಮಾರ್, ಸಂಘಟನಾ ಕಾರ್ಯದರ್ಶಿ ಡಾ. ಎ.ಸತೀಶ್‌ಕುಮಾರ್ ಶೆಟ್ಟಿ, ಪರಿಸರ ಹೋರಾಟಗಾರರಾದ ಪ್ರೊ ಎಲ್.ಕೆ.ಶ್ರೀಪತಿ, ಶೇಖರ್ ಗೌಳೆರ್, ಆಶೋಕ್‌ಕುಮಾರ್, ಜರ್ನಾಧನ್ ಪೈ, ಕೆ.ವಿ.ಸುಬ್ಬಣ್ಣ, ನಾಗೇಶ್, ರಾಷ್ಟ್ರಭಕ್ತರ ಬಳಗದ ಶ್ರೀಕಾಂತ್ ಸೇರಿ ಹಲವರು ಪ್ರತಿಭಟನೆಯಲ್ಲಿದ್ದರು.
"
ಸೈನ್ಸ್ ಮೈದಾನದಲ್ಲಿ ಅಭಿವೃದ್ಧಿ ನೆಪದಲ್ಲಿ 18 ವರ್ಷದ 24 ಮರಗಳನ್ನು ಕಡಿತಲೆ ಮಾಡಲಾಗಿದೆ. ಇದು ಸರಿಯಲ್ಲ. ಒಂದು ಮರ ಕಡಿದರೆ 10 ಸಸಿ ನೆಡಬೇಕು. ಹಾಗಾಗಿ ಕನಿಷ್ಠ 240 ಸಸಿಗಳನ್ನು ನೆಡಲೇಬೇಕು. ಗಿಡ ನೆಡುವವರೆಗೂ ಯಾವುದೇ ಕಾಮಗಾರಿಗಳನ್ನು ಇಲ್ಲಿ ಮುಂದುವರಿಸುವಂತಿಲ್ಲ.