ಏರ್‌ಪೋರ್ಟ್‌ನಲ್ಲಿ ವಾಣಿಜ್ಯ ಚಟುವಟಿಕೆಗೆ ಒಲವು I commercial activity
ಶಿವಮೊಗ್ಗ ವಿಮಾನ ನಿಲ್ದಾಣ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಶಿವಮೊಗ್ಗದಲ್ಲಿ ಪಂಚತಾರಾ ಹೋಟೆಲ್
ಮೂಲಸೌಕರ್ಯಕ್ಕಿಲ್ಲ ಸರ್ಕಾರದ ಆಸಕ್ತಿ
ಶಿವಮೊಗ್ಗ: ರಾಜ್ಯ ಕೈಗಾರಿಕಾ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ನಂಜಯ್ಯನಮಠ್ ನಾಲ್ಕು ತಿಂಗಳ ಅವಧಿಯಲ್ಲಿ ಎರಡನೇ ಬಾರಿ ಶಿವಮೊಗ್ಗ ಏರ್‌ಪೋರ್ಟ್‌ಗೆ ಭೇಟಿ ನೀಡಿದ್ದಾರೆ. ಆದರೆ ನಾಲ್ಕು ತಿಂಗಳ ಅವಧಿಯಲ್ಲಿ ಆಗಿರುವ ಬದಲಾವಣೆ ಮಾತ್ರ ಶೂನ್ಯ. ಟೆಂಡರ್ (tender) ಪ್ರಕ್ರಿಯೆಗಳಿಗೆ ಮಾತ್ರ ಸರ್ಕಾರ (govermint) ಆಸಕ್ತಿ ವಹಿಸುತ್ತಿದೆ. ಏರ್‌ಪೋರ್ಟ್ (airport) ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಚಿಂತನೆ ನಡೆಸುತ್ತಿಲ್ಲ ಎಂಬ ಅಸಮಾಧಾನ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ಏರ್‌ಪೋರ್ಟ್‌ಗೆ ನೈಟ್ ಲ್ಯಾಂಡಿಂಗ್ ಅಳವಡಿಕೆ ಬಗ್ಗೆ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ಕೆಸರೆರೆಚಾಟ ನಡೆಯುತ್ತಿದೆ. ಆದರೆ ಇನ್ನೂ ನೈಟ್ ಲ್ಯಾಂಡಿಂಗ್ ವ್ಯವಸ್ಥೆ ಅಳವಡಿಕೆಯಾಗಿಲ್ಲ. ಉಡಾನ್ ಅವಧಿ ಮುಕ್ತಾಯದ ಹಂತದಲ್ಲಿದೆ. ಇದು ವಿಮಾನ ಸಂಚಾರದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ.
ಪೈಲಟ್ ತರಬೇತಿ ಆರಂಭ, ಸರಕು ಸಾಗಣೆ ವಿಮಾನಗಳ ಕಾರ್ಯಾಚರಣೆ ಗಗನ ಕುಸುಮವಾಗಿದೆ. ಪೈಲಟ್ ತರಬೇತಿ ಕೇಂದ್ರ ಆರಂಭಕ್ಕೆ ಅರ್ಜಿ ಆಹ್ವಾನಿಸಿದ್ದರೂ ಖಾಸಗಿ ಸಂಸ್ಥೆಗಳು ಮುಂದೆ ಬಂದಿಲ್ಲ. ಶಿವಮೊಗ್ಗ ವಿಮಾನ ನಿಲ್ದಾಣ ಇನ್ನಷ್ಟು ಸುಧಾರಣೆ ಆಗಬೇಕು ಎಂಬುದೇ ಇದಕ್ಕೆ ಮುಖ್ಯ ಕಾರಣ.
"
ವಿಮಾನ ನಿಲ್ದಾಣದಲ್ಲಿ ಪೈಲಟ್ ತರಬೇತಿ ಕೇಂದ್ರ ಆರಂಭಿಸಲು ಈ ಹಿಂದೆ ಖಾಸಗಿ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ ಯಾವುದೇ ಕಂಪನಿಗಳು ಆಸಕ್ತ ತೋರಿಲ್ಲ. ತರಬೇತಿ ಕೇಂದ್ರ ಆರಂಭಿಸಲು ಇನ್ನೊಮ್ಮೆ ತರಬೇತಿ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗುವುದು.