ತತ್ವಗಳು ಮಹಾತ್ಮ ಗಾಂಧೀಜಿಗೆ ಪ್ರೇರಣೆ

ಭದ್ರಾವತಿಯಲ್ಲಿ ಏರ್ಪಡಿಸಿದ್ದ ನಾರಾಯಣ ಗುರು ಜಯಂತಿ ಕಾರ್ಯಕ್ರಮವನ್ನು ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಉದ್ಘಾಟಿಸಿದರು. ಬಿ.ಕೆ.ಮೋಹನ್, ಜ್ಯೋತಿಕುಮಾರಿ, ಸಿದ್ದಬಸಪ್ಪ ಇತರರಿದ್ದರು.
ಭದ್ರಾವತಿಯಲ್ಲಿ ಏರ್ಪಡಿಸಿದ್ದ ನಾರಾಯಣ ಗುರು ಜಯಂತಿ ಕಾರ್ಯಕ್ರಮವನ್ನು ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಉದ್ಘಾಟಿಸಿದರು. ಬಿ.ಕೆ.ಮೋಹನ್, ಜ್ಯೋತಿಕುಮಾರಿ, ಸಿದ್ದಬಸಪ್ಪ ಇತರರಿದ್ದರು.
Published on
ಭದ್ರಾವತಿ: ದಲಿತ, ಹಿಂದುಳಿದವರ ಪರ ಹೋರಾಟ, ಮದ್ಯಪಾನ ನಿಷೇಧ, ಬಾಲ್ಯ ವಿವಾಹಕ್ಕೆ ತಡೆ, ಸರಳ ವಿವಾಹ ಪದ್ಧತಿಗೆ ನೀಡಿದ ಆದ್ಯತೆಗಳು ಬ್ರಹ್ಮಶ್ರೀ ನಾರಾಯಣ ಗುರುಗಳ ಸಮಾಜಮುಖಿ ಕೊಡುಗೆ ಎಂದು ಶಿಕ್ಷಣ ಇಲಾಖೆ ಜಿಲ್ಲಾ ಪರಿವೀಕ್ಷಕಿ ಜ್ಯೋತಿಕುಮಾರಿ ಹೇಳಿದರು.
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ತಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರು, ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾರಾಯಣ ಗುರುಗಳು ಸದಾ ಸಮಾಜಮುಖಿ ಚಿಂತನೆ ಮಾಡುತ್ತಿದ್ದರು. ಧರ್ಮಜಾಗೃತಿ ಮೂಲಕ ಆರಂಭವಾದ ಅವರ ಸಾಮಾಜಿಕ ಚಳವಳಿ ಅನೇಕ ತಿರುವುಗಳನ್ನು ಪಡೆದುಕೊಂಡವು. ಮಹಾತ್ಮ ಗಾಂಧೀಜಿ ಕೂಡ ಬ್ರಹ್ಮಶ್ರೀ ನಾರಾಯಣ ಗುರುಗಳಿಂದ ಪ್ರೇರಿತರಾಗಿದ್ದರು ಎಂದರು.
ನಗರಸಭೆ ಸದಸ್ಯ ಬಿ.ಕೆ.ಮೋಹನ್ ಮಾತನಾಡಿ, ಸಮಾಜ ಸುಧಾರಕರು ಒಂದು ಜಾತಿಗೆ ಸೀಮಿತರಾದವರಲ್ಲ. ಎಲ್ಲ ಸಮುದಾಯಗಳಿಗೂ ಬೇಕಾದ ದಾರ್ಶನಿಕರು. ಆದರೆ ಜಯಂತಿಗೆ ಬೆರಳೆಣಿಕೆಯಷ್ಟು ಜನರು ಮಾತ್ರ ಬಂದಿರುವುದು ಬೇಸರದ ಸಂಗತಿ ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಬಿಇಒ ಕೆ.ಸಿ.ಸುರೇಶ್, ಈಡಿಗ ಸಮಾಜದ ತಾಲೂಕು ಅಧ್ಯಕ್ಷ ನಟರಾಜ್, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಿದ್ದಬಸಪ್ಪ, ನಗರಸಭೆ ಸದಸ್ಯ ಚನ್ನಪ್ಪ, ಬಿ.ಎಸ್.ಗೋಪಾಲ್, ಸಿ.ಜಯಪ್ಪ, ಗಂಗಾಧರ್, ಕೋಗಲೂರು ತಿಪ್ಪೇಸ್ವಾಮಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net