ಹವಾಮಾನ ಬದಲಾವಣೆಯಿಂದ ಕೃಷಿಕರು ಒಂದೆಡೆ ಬಲಿಪಶುಗಳಾಗುತ್ತಿದ್ದರೆ ಇನ್ನೊಂದೆಡೆ ಕೃಷಿಯಿಂದಲೂ ಹವಾಮಾನ ಬದಲಾವಣೆ ಆಗುತ್ತಿದೆ. ಹಾಗಾಗಿ ಕೃಷಿಸ್ನೇಹಿ ಸಂಶೋಧನೆಗಳು, ಸಂಶೋಧಕರನ್ನು ಉತ್ತೇಜಿಸಬೇಕು ಎಂದು ಬೆಂಗಳೂರು ಯುಎಎಸ್ ವಿವಿ ಕುಲಪತಿ ಡಾ. ಎಸ್.ವಿ.ಸುರೇಶ್ ಹೇಳಿದರು. ಮಳೆ, ಉಷ್ಣತೆ ವೈಪರೀತ್ಯ ತಡೆಯುವ ತಳಿಗಳ ಅಭಿವೃದ್ಧಿ ಆಗಬೇಕು. ರೈತರಿಗಾಗುವ ನಷ್ಟವನ್ನು ಸ್ಮಾರ್ಟ್ ತಂತ್ರಜ್ಞಾನದಿಂದ ಕಡಿಮೆಗೊಳಿಸುವುದು, ಹವಾಮಾನ ವೈಪರೀತ್ಯ ಎದುರಿಸಲು ವ್ಯವಸ್ಥಿತ ವಿಧಾನ ಅಳವಡಿಸಿಕೊಳ್ಳುವ ಜತೆಗೆ ಅದರ ನಿರ್ವಹಣೆಯೂ ಮುಖ್ಯವಾಗಿದೆ. ಸ್ಪರ್ಧಾತ್ಮಕ ಸಂಶೋಧನೆಗಿಂತ ಸಹಕಾರಿ ಸಂಶೋಧನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಅಭಿಪ್ರಾಯಪಟ್ಟರು.