ಮುಂದಿನ ತಲೆಮಾರಿಗೆ ಯಕ್ಷಪರಂಪರೆ ತಲುಪಿಸಿ

ಸಾಗರದಲ್ಲಿ ಸರಣಿ ತಾಳಮದ್ದಳೆ ಕಾರ್ಯಕ್ರಮವನ್ನು ಕಲಾಪೋಷಕ ಸುಬ್ಬರಾವ್ ಕಟ್ಟಿನಕೆರೆ ಉದ್ಘಾಟಿಸಿದರು. ಎಲ್.ಎಂ.ಹೆಗಡೆ, ಸುಬ್ರಾಯ ಹೆಗಡೆ, ರಮೇಶ್ ಹೆಗಡೆ ಇತರರಿದ್ದರು.
ಸಾಗರದಲ್ಲಿ ಸರಣಿ ತಾಳಮದ್ದಳೆ ಕಾರ್ಯಕ್ರಮವನ್ನು ಕಲಾಪೋಷಕ ಸುಬ್ಬರಾವ್ ಕಟ್ಟಿನಕೆರೆ ಉದ್ಘಾಟಿಸಿದರು. ಎಲ್.ಎಂ.ಹೆಗಡೆ, ಸುಬ್ರಾಯ ಹೆಗಡೆ, ರಮೇಶ್ ಹೆಗಡೆ ಇತರರಿದ್ದರು.
Published on
ಸಾಗರ: ಯಕ್ಷಗಾನ ಪರಂಪರೆ ಸಂರಕ್ಷಿಸಿ ಮುಂದಿನ ತಲೆಮಾರಿಗೆ ತಲುಪಿಸುವ ಕೆಲಸ ಆಗಬೇಕು ಎಂದು ನಿವೃತ್ತ ಕನ್ನಡ ಉಪನ್ಯಾಸಕ ಎಲ್.ಎಂ.ಹೆಗಡೆ ಹೇಳಿದರು.
ಸಾಗರದ ಕುಡುಪಲಿ ಸದಾನಂದ ಸ್ವರಾಲಯದಲ್ಲಿ ಶ್ರೀ ರಾಜರಾಜೇಶ್ವರಿ ಕೃಪಾಪೋಷಿತ ವಂಶವಾಹಿನಿ ಯಕ್ಷಮೇಳ ಗುಂಡೂಮನೆ ಆಯೋಜಿಸಿರುವ ಸರಣಿ ತಾಳಮದ್ದಳೆ ಕಾರ್ಯಕ್ರಮದಲ್ಲಿ ಮಾತನಾಡಿ, ಕುಟುಂಬವೊಂದು ಯಕ್ಷ ಪರಂಪರೆ ಸಂಘಟನೆ ಹೊಣೆಯನ್ನು ಹೊತ್ತು ಸಾಗುವುದು ಕಷ್ಟ ಎಂದು ತಿಳಿಸಿದರು.
ಹಿರಿಯ ಕಲಾಪೋಷಕ ಸುಬ್ಬರಾವ್ ಕಟ್ಟಿನಕೆರೆ, ಸಂಸ್ಥೆ ಗೌರವಾಧ್ಯಕ್ಷ ಸುಬ್ರಾಯ ಹೆಗಡೆ ಗುಂಡೂಮನೆ, ಕೆಳದಿ ಗ್ರಾಪಂ ಮಾಜಿ ಅಧ್ಯಕ್ಷ ರಮೇಶ್, ರಮೇಶ್ ಹೆಗಡೆ ಗುಂಡೂಮನೆ, ಶ್ರೀಧರ ಹೆಗಡೆ, ಅಶೋಕ ಹೆಗಡೆ, ಸಂಜನಾ ಹೆಗಡೆ ಇತರರಿದ್ದರು.
ವಿಭು ಗೋವಂಶಿ ಭಾಗ-2ರ ತಾಳಮದ್ದಳೆ ನಡೆಯಿತು. ಭಾಗವತರಾಗಿ ಸೂರ್ಯನಾರಾಯಣ, ಸೃಜನ್ ಗಣೇಶ್ ಹೆಗಡೆ, ಮದ್ದಲೆಯಲ್ಲಿ ಶ್ರೀವತ್ಸ, ಚಂಡೆಯಲ್ಲಿ ಸ್ವರೂಪ ಪಾಲ್ಗೊಂಡಿದ್ದರು. ಅರ್ಥದಾರಿಗಳಾಗಿ ಅರುಣ್, ರವಿಶಂಕರ್ ಭಟ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net