ವಿವಿಯು ಏಕಾಏಕಿ ಪರೀಕ್ಷಾ ಹಾಗೂ ಪ್ರವೇಶ ಶುಲ್ಕವನ್ನು ಸಾವಿರಾರು ರೂ. ಹೆಚ್ಚಿಸಿದೆ. ಇದು ಬಡ ವಿದ್ಯಾರ್ಥಿಗಳಿಗೆ ಹೊರೆಯಾಗಲಿದೆ. ಡಿಜಿಟಲ್ ಮೌಲ್ಯಮಾಪನದ ತಾಂತ್ರಿಕ ಲೋಪ(Technical error)ಗಳಿಂದ ಫಲಿತಾಂಶಗಳಲ್ಲಿ ಗೊಂದಲ ಏರ್ಪಟ್ಟಿದ್ದು, ಪಾಸ್ ಆದವರಿಗೂ ಫೇಲ್ ಎಂದು ತೋರಿಸುತ್ತಿದೆ. ಇದು ವಿದ್ಯಾರ್ಥಿಗಳ ನಿದ್ದೆಗೆಡಿಸಿದೆ. ಈ ಅವ್ಯವಸ್ಥೆ ಸರಿಪಡಿಸಲು ವಿಫಲರಾಗಿರುವ ಕುಲಪತಿಯನ್ನು ವಜಾಗೊಳಿಸಬೇಕು. ರಾಜ್ಯಪಾಲರು ಮಧ್ಯೆ ಪ್ರವೇಶಿಸಬೇಕು ಎಂದು ಆಗ್ರಹಿಸಿದರು. ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ವಿಜಯ್, ಕಾರ್ಯಾಧ್ಯಕ್ಷ ರವಿ ಕಾಟಿಕೆರೆ, ಮಧುಸೂದನ್ ಮತ್ತಿತರರು ಹಾಜರಿದ್ದರು.