ತುಂಬು ಗರ್ಣಿಣಿಯಾಗಿದ್ದ ಹಂಸಿಣಿ ಹೆರಿಗೆ ಅವಧಿ(Childbirth period) ಮುಗಿದ್ದರೂ ಮರಿ ಹಾಕಿರಲಿಲ್ಲ. ಹಾಗಾಗಿ ಹಂಸಿಣಿ ಮೇಲೆ ತೀವ್ರ ನಿಗಾ(Intensive care) ಇರಿಸಲಾಗಿತ್ತು. ಮೈಸೂರು ಮತ್ತು ಬನ್ನೇರುಘಟ್ಟ ಝೂ(Bannerghatta Zoo)ನಿಂದ ತಜ್ಞ ಪಶು ವೈದ್ಯರ ತಂಡವೇ ಆಗಮಿಸಿ ತಪಾಸಣೆ ನಡೆಸಿತ್ತು. ಕಳೆದೆರಡು ದಿನದಿಂದ ಚಿಕಿತ್ಸೆ ನೀಡಿತ್ತು. ಮರಿ ಹಾಕದ ಕಾರಣ ಶುಕ್ರವಾರವಷ್ಟೇ ರಕ್ತ ಮತ್ತು ದೇಹದ ಕೆಲ ಮಾದರಿ ಸಂಗ್ರಹಿಸಿ ಕೊಂಡೊಯ್ದಿತ್ತು. ಇದೀಗ ಹಂಸಿಣಿಯ ಮರಿ ಗರ್ಭದಲ್ಲೇ ಸೋಂಕಿನಿಂದ ಮೃತಪಟ್ಟಿದೆ ಎಂದು ಹುಲಿ ಮತ್ತು ಸಿಂಹಧಾಮದ ಕಾರ್ಯ ನಿರ್ವಾಹಕ ನಿರ್ದೇಶಕ ಅಮರಾಕ್ಷರ ದೃಢಪಡಿಸಿದ್ದಾರೆ.