ದೇಶವೇ ಮೊದಲು ಬಿಜೆಪಿ ಧ್ಯೇಯ I naition fist bjp

ಬಿಜೆಪಿ ಸಂಸ್ಥಾಪನಾ ದಿನದ ಅಂಗವಾಗಿ ಶಿವಮೊಗ್ಗ ಜಿಲ್ಲಾ ಕಚೇರಿ ಎದುರು ಪಕ್ಷದ ಧ್ವಜಾರೋಹಣ ನೆರವೇರಿಸಲಾಯಿತು. ಎನ್.ಕೆ.ಜಗದೀಶ್, ಎಸ್.ಎನ್.ಚನ್ನಬಸಪ್ಪ, ಆರ್.ಕೆ.ಸಿದ್ದರಾಮಣ್ಣ, ಡಿ.ಮೋಹನ್ ರೆಡ್ಡಿ, ಎಸ್.ದತ್ತಾತ್ರಿ, ಕೆ.ಬಿ.ಅಶೋಕ ನಾಯ್ಕ, ಸುರೇಖಾ ಮುರಳೀಧರ್, ಜ್ಯೋತಿ ಪ್ರಕಾಶ್, ಮಂಜುನಾಥ್ ಇತರರಿದ್ದರು.
ಬಿಜೆಪಿ ಸಂಸ್ಥಾಪನಾ ದಿನದ ಅಂಗವಾಗಿ ಶಿವಮೊಗ್ಗ ಜಿಲ್ಲಾ ಕಚೇರಿ ಎದುರು ಪಕ್ಷದ ಧ್ವಜಾರೋಹಣ ನೆರವೇರಿಸಲಾಯಿತು. ಎನ್.ಕೆ.ಜಗದೀಶ್, ಎಸ್.ಎನ್.ಚನ್ನಬಸಪ್ಪ, ಆರ್.ಕೆ.ಸಿದ್ದರಾಮಣ್ಣ, ಡಿ.ಮೋಹನ್ ರೆಡ್ಡಿ, ಎಸ್.ದತ್ತಾತ್ರಿ, ಕೆ.ಬಿ.ಅಶೋಕ ನಾಯ್ಕ, ಸುರೇಖಾ ಮುರಳೀಧರ್, ಜ್ಯೋತಿ ಪ್ರಕಾಶ್, ಮಂಜುನಾಥ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜನಸಂಘ ಕಾಲದಿಂದಲೂ ಒಂದೇ ವಿಚಾರಧಾರೆ
  • ಜಿಲ್ಲಾ ಪ್ರಭಾರಿ ಆರ್.ಕೆ.ಸಿದ್ದರಾಮಣ್ಣ ಹೇಳಿಕೆ
  • ಪಕ್ಷದ ಸಂಸ್ಥಾಪನಾ ದಿನಾಚರಣೆ
ಶಿವಮೊಗ್ಗ: 76 ವರ್ಷಗಳ ಹಿಂದೆ ಜನಸಂಘ (janasangha) ಏನು ಹೇಳಿತ್ತೋ ಅದನ್ನೇ ಬಿಜೆಪಿ (bjp) ಇಂದಿಗೂ ಪಾಲಿಸುತ್ತಿದೆ. ಜನಸಂಘ ಕಾಲದ ಅನೇಕ ಕನಸುಗಳು ಇಂದು ನನಸಾಗಿವೆ. ಅಂದಿನ ವಿಚಾರಧಾರೆಯೇ ಇಂದಿಗೂ ಮುಂದುವರಿಯುತ್ತಿದೆ. ಸದಾ ಕಾಲ ನಮಗೆ ದೇಶವೇ ಮೊದಲು (first) ಎಂದು ಬಿಜೆಪಿ ಜಿಲ್ಲಾ ಪ್ರಭಾರಿ, ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಕೆ.ಸಿದ್ದರಾಮಣ್ಣ ತಿಳಿಸಿದರು.
ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಬಿಜೆಪಿ 47ನೇ ಸಂಸ್ಥಾಪನಾ ದಿನಾಚರಣೆಯ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ದೇಶದ ಸಂಸ್ಕಾರ-ಸಂಸ್ಕೃತಿ ಉಳಿಸಲು ಏನು ಮಾಡಬೇಕೆಂದು ನಮ್ಮ ಹಿರಿಯರು ಬಯಸಿದ್ದರೋ ಅದನ್ನೇ ಪಕ್ಷ ಇಂದಿಗೂ ಮಾಡುತ್ತಿದೆ ಎಂದರು.
ರಾಮ ಜನ್ಮಭೂಮಿಗಾಗಿ ಹೋರಾಟ ಮಾಡಿ ಮಂದಿರ ನಿರ್ಮಿಸಿದ್ದೇವೆ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 370ನೇ ವಿಧಿ ರದ್ದು ಮಾಡಿದ್ದೇವೆ. ಇನ್ನು ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬರುವುದು ಬಾಕಿಯಿದೆ. ಕೇಂದ್ರದಲ್ಲಿ ಎನ್‌ಡಿಎ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು 12 ವರ್ಷಗಳಾಗಿವೆ. ಇದು ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ಕಾಲಘಟ್ಟ ಎಂದು ಅಭಿಪ್ರಾಯಪಟ್ಟರು.
2047ರ ವೇಳೆಗೆ ಈ ದೇಶ ವಿಕಸಿತ ಭಾರತವಾಗಬೇಕು. ಅದರ ಆಧಾರದಲ್ಲಿ ವಿಶ್ವಗುರು ಆಗಬೇಕೆಂಬ ದೃಢ ಸಂಕಲ್ಪದೊಂದಿಗೆ ಕಾರ್ಯನಿರ್ವಹಿಸುತ್ತಿದ್ದೇವೆ. ಗ್ರಾಮ ಸಡಕ್ ಮತ್ತು ಚಂದ್ರಯಾನ ಮುಂತಾದ ಬೃಹತ್ ಯೋಜನೆಯ ಜತೆಗೆ ಪಂಡಿತ್ ದೀನದಯಾಳ್ ಉಪಾಧ್ಯಾಯರ ಸಂಕಲ್ಪದಂತೆ ಸಮಾಜದ ಕಟ್ಟಕಡೆಯ ಮನುಷ್ಯನ ಅಭಿವೃದ್ಧಿಯ ಗುರಿಯನ್ನೂ ಹೊಂದಿದ್ದೇವೆ ಎಂದರು.
ಶಾಸಕ ಎಸ್.ಎನ್.ಚನ್ನಬಸಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ನಗರಾಧ್ಯಕ್ಷ ಡಿ.ಮೋಹನ್ ರೆಡ್ಡಿ, ಮಾಜಿ ಶಾಸಕ ಕೆ.ಬಿ.ಅಶೋಕ ನಾಯ್ಕ, ಪ್ರಮುಖರಾದ ಎಸ್.ದತ್ತಾತ್ರಿ, ಎಸ್.ಜ್ಞಾನೇಶ್ವರ್, ಮಾಲತೇಶ್, ಸಿಂಗನಹಳ್ಳಿ ಸುರೇಶ್, ಸುರೇಖಾ ಮುರಳೀಧರ್, ಅಣ್ಣಪ್ಪ, ಯಶೋದಾ, ಚೈತ್ರಾ ನಾಯಕ್, ಜ್ಯೋತಿಪ್ರಕಾಶ್, ಚಂದ್ರಶೇಖರ್, ಮಂಜುನಾಥ್ ಇತರರಿದ್ದರು.
"

ಸ್ವಚ್ಛ ಭಾರತ್ ಜತೆಗೆ ಸ್ವಚ್ಛ ಕಾರ್ಯಾಲಯ ಎನ್ನುವ ಯೋಜನೆ ಹಮ್ಮಿಕೊಂಡಿದ್ದು, ಭಾನುವಾರದಿಂದಲೇ ದೇಶದ ಎಲ್ಲ ಬಿಜೆಪಿ ಕಾರ್ಯಾಲಯಗಳನ್ನು ಸ್ವಚ್ಛ ಮಾಡಿದ್ದೇವೆ. ರಂಗೋಲಿ ಹಾಕಿ, ಸಿಂಗರಿಸಿ, ಬಿಜೆಪಿ ಜನ್ಮದಿನವನ್ನು ಆಚರಿಸಿದ್ದೇವೆ. ನಮ್ಮ ಪ್ರತಿ ಬೂತ್ ಅಧ್ಯಕ್ಷನ ಮನೆಯ ಮೇಲೆ ಧ್ವಜಾರೋಹಣ ಮಾಡಿ, ಪಕ್ಷ ಸಂಘಟನೆಯ ಕೆಲಸ ಮಾಡುತ್ತಿದ್ದೇವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net