ಕುಡಿದ ಮತ್ತಿನಲ್ಲಿ ಸ್ನೇಹಿತನ ಕೊಲೆ । MURDER

ಬಂಧಿತ ಗಾಜನೂರು ದೊಡ್ಡಕೇರಿ ಬೀದಿಯ ಮಾಲತೇಶ್ ಮತ್ತು ಕೃಷ್ಣಮೂರ್ತಿ.
ಬಂಧಿತ ಗಾಜನೂರು ದೊಡ್ಡಕೇರಿ ಬೀದಿಯ ಮಾಲತೇಶ್ ಮತ್ತು ಕೃಷ್ಣಮೂರ್ತಿ.
Published on

ಪ್ರಮುಖ ಮುಖ್ಯಾಂಶಗಳು

  • ಗಾಜನೂರಿನ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಘಟನೆ
  • ಮಾತಿಗೆ ಮಾತು ಬೆಳೆದು ಕಲ್ಲು ಎತ್ತಿ ಹಾಕಿ ಕತ್ತಿಯಿಂದ ಚುಚ್ಚಿ ಕೊಲೆ
  • ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲು, ಇಬ್ಬರ ಬಂಧನ
ಶಿವಮೊಗ್ಗ: ಗಾಜನೂರಿನ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಗುರುವಾರ ತಡರಾತ್ರಿ ಕುಡಿದ ಮತ್ತಿನಲ್ಲಿ ಸ್ನೇಹಿತನನ್ನೇ ಕಲ್ಲು ಎತ್ತಿ ಹಾಕಿ ಕೊಲೆ(Murder) ಮಾಡಿದ್ದ ಇಬ್ಬರನ್ನು ತುಂಗಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗದ ಹೊಸಮನೆ 6ನೇ ತಿರುವಿನ ಶ್ರೀನಿವಾಸ್ (36) ಕೊಲೆಯಾದ ವ್ಯಕ್ತಿ. ಗಾಜನೂರು ದೊಡ್ಡಕೇರಿ(Doddakeeri)ಬೀದಿಯ ಕೃಷ್ಣಮೂರ್ತಿ(44) ಮತ್ತು ಮಾಲತೇಶ್(21) ಬಂಧಿತರು. ಕೃಷ್ಣಮೂರ್ತಿ ಬಟ್ಟೆ ಅಂಗಡಿಯಲ್ಲಿ ಮತ್ತು ಮಾಲತೇಶ್ ಗಾರೆ ಕೆಲಸ ಮಾಡಿಕೊಂಡಿದ್ದ. ಶ್ರೀನಿವಾಸ್ ಗಾರೆ ಕೆಲಸದ ಮೇಸ್ತ್ರಿಯಾಗಿದ್ದರು.
ಮೂವರು ಗುರುವಾರ ರಾತ್ರಿ ಗಾಜನೂರು ಸಮೀಪದ ಬಾರ್‌(Bar)ನಲ್ಲಿ ಮದ್ಯ ಖರೀದಿಸಿ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಸೇವಿಸಿದ್ದರು. ಕುಡಿದ ಮತ್ತಿನಲ್ಲಿ ಮಾತಿಗೆ ಮಾತು ಬೆಳೆದು ಆರೋಪಿಗಳು ಕಲ್ಲು ಎತ್ತಿ ಹಾಕಿ ಕತ್ತಿಯಿಂದ ಚುಚ್ಚಿ ಶ್ರೀನಿವಾಸ್ ನನ್ನು ಕೊಲೆ ಮಾಡಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಈ ಬಗ್ಗೆ ಜಿ.ಶ್ರೀಧರ್ ಎಂಬುವರು ತುಂಗಾನಗರ ಠಾಣೆಗೆ ದೂರು ನೀಡಿದ್ದರು.
ತುಂಗಾನಗರ ಠಾಣೆ ಇನ್ಸ್‌ಪೆಕ್ಟರ್ ಕೆ.ಟಿ.ಗುರುರಾಜ, ಸಿಬ್ಬಂದಿ ಕಿರಣ್ ಮೋರೆ, ಅರುಣ್‌ಕುಮಾರ್, ನಾಗಪ್ಪ, ರಂಗನಾಥ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net