ಶಿವಮೊಗ್ಗದಲ್ಲಿ ನಿವೃತ್ತ ನ್ಯಾ. ಎಚ್.ಎನ್.ನಾಗಮೋಹನ್ ದಾಸ್ ಅವರ ಮೆಮೊರಬಲ್ ಟ್ರಯಲ್ಸ್ ಕೃತಿಯನ್ನು ಸಚಿವ ಮಧು ಬಂಗಾರಪ್ಪ ಬಿಡುಗಡೆ ಮಾಡಿದರು. ಸಿ.ಎಸ್.ಷಡಾಕ್ಷರಿ, ಕೆ.ಬಸಪ್ಪ ಗೌಡ, ಡಾ. ಅನಲಾ, ಕೆ.ಪಿ.ಶ್ರೀಪಾಲ್ ಇತರರಿದ್ದರು.
ಶಿವಮೊಗ್ಗ: ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ (nagamohana das) ರಚನೆಯ ಮೆಮೊರಬಲ್ (memorable) ಟ್ರಯಲ್ಸ್ ಕೃತಿ ಅತ್ಯಂತ ವಿಭಿನ್ನ ಹಾಗೂ ವಿಶಿಷ್ಟವಾಗಿದೆ. ಇದರಲ್ಲಿ ಉಲ್ಲೇಖವಾಗಿರುವ ಪ್ರಕರಣಗಳ ವಿಚಾರಣೆಗಳ ಮಾಹಿತಿ (information) ಒಂದಕ್ಕಿಂತ ಒಂದು ಭಿನ್ನವಾಗಿವೆ ಎಂದು ಹಿರಿಯ ವಕೀಲ ಕೆ.ಬಸಪ್ಪ ಗೌಡ ಹೇಳಿದರು.
ನಗರದ ಸರ್ಕಾರಿ ನೌಕರರ ಸಂಘದಲ್ಲಿ ಪೀಪಲ್ಸ್ ಲಾಯರ್ಸ್ ಗಿಲ್ಡ್‌ನಿಂದ ಮೆಮೊರಬಲ್ ಟ್ರಯಲ್ಸ್ ಕೃತಿ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಾನೂನು ವ್ಯಾಸಂಗ ಮಾಡುವವರಿಗೆ ಹಾಗೂ ಯುವ ವಕೀಲರಿಗೆ ಈ ಕೃತಿ ಮಾರ್ಗದರ್ಶಿಯಂತಿದೆ ಎಂದರು.
ಕೃತಿ ಕುರಿತು ಮಾತನಾಡಿದ ಪತ್ರಕರ್ತ ಹರ್ಷಕುಮಾರ್ ಕುಗ್ವೆ, ಸಾಕ್ರಟೀಸ್, ಗೆಲಿಲಿಯೋ, ಜೀಸಸ್ ಮುಂತಾದವರು ಸತ್ಯ ಹೇಳುವ ಸಲುವಾಗಿಯೇ ತಮ್ಮ ಜೀವವನ್ನು ಕಳೆದುಕೊಂಡರು. ಪಟ್ಟಭದ್ರ ಹಿತಾಸಕ್ತಿಗಳು ನ್ಯಾಯವನ್ನು ಅದುಮಿಡಲು ಸದಾ ಪ್ರಯತ್ನಿಸುತ್ತವೆ ಎಂದರು.
ದಕ್ಷಿಣ ಆಫ್ರಿಕಾದಲ್ಲಿ ನೆಲ್ಸನ್ ಮಂಡೇಲಾ ಯಾವುದೇ ಶಾಸ್ತ್ರಾಸ್ತ್ರ ಹೋರಾಟದಲ್ಲಿ ಪಾಲ್ಗೊಂಡಿರಲಿಲ್ಲ. ಆದರೆ ಗೆರಿಲ್ಲಾ ಹೋರಾಟದ ತರಬೇತಿ ಪಡೆದಿದ್ದರು ಎಂಬ ಕಾರಣಕ್ಕೆ ಅಲ್ಲಿನ ಸರ್ಕಾರ ಅವರನ್ನು ಎರಡು ದಶಕಗಳಿಗೂ ಹೆಚ್ಚು ಕಾಲ ಸೆರೆಮನೆಯಲ್ಲಿ ಇರಿಸಿತ್ತು. ಭಾರತದ ಸ್ವಾತಂತ್ರೃ ಹೋರಾಟದಲ್ಲಿ ಪಾಲ್ಗೊಂಡಿದ್ದ ಅನೇಕ ಕ್ರಾಂತಿಕಾರಿಗಳನ್ನು ರಾಜದ್ರೋಹಿಗಳೆಂದು ಪರಿಗಣಿಸಿ ಶಿಕ್ಷೆ ವಿಧಿಸಲಾಯಿತು. ಇಂದೂ ಸಹ ನಮ್ಮ ನ್ಯಾಯಾಂಗ ವ್ಯವಸ್ಥೆ ನಮಗೆ ಪದೇಪದೆ ಶಾಕ್ ನೀಡುತ್ತಿದೆ. ನ್ಯಾಯದಾನದ ಉನ್ನತ ಸ್ಥಾನದಲ್ಲಿರುವವರು ನಡೆದುಕೊಳ್ಳುವ ರೀತಿ ಆಶ್ಚರ್ಯ ಮೂಡಿಸುತ್ತಿದೆ ಎಂದು ಹೇಳಿದರು.
ವಕೀಲ ಕೆ.ಪಿ.ಶ್ರೀಪಾಲ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಕೃತಿ ಬಿಡುಗಡೆ ಮಾಡಿದರು. ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್, ಡಿಎಸ್‌ಎಸ್ ಸಂಚಾಲಕ ಎಂ.ಗುರುಮೂರ್ತಿ, ಸಿಬಿಆರ್ ರಾಷ್ಟ್ರೀಯ ಕಾನೂನು ಕಾಲೇಜಿನ ಪ್ರಾಚಾರ್ಯೆ ಅನಲಾ ಮುಂತಾದವರು ಉಪಸ್ಥಿತರಿದ್ದರು.
"
ಸ್ವಾತಂತ್ರೃ ಹೋರಾದ ಪ್ರಮುಖ ಘಟನೆಯಾದ ಈಸೂರು ಹೋರಾಟದ ಬಗ್ಗೆ ಮೆಮೊರಬಲ್ ಟ್ರಯಲ್ಸ್‌ನಲ್ಲಿ ಉತ್ತಮ ಚಿತ್ರಣವಿದೆ. ಈಸೂರಿನ ಸ್ವಾತಂತ್ರೃದ ಕಿಚ್ಚು ಇಲ್ಲಿ ದಾಖಲಾಗಿದೆ. ಸರ್ದಾರ್ ಉಧಮ್ ಸಿಂಗ್ ಅವರಂತಹ ಕ್ರಾಂತಿಕಾರಿ ಹೋರಾಟಗಾರರ ಬಗ್ಗೆ ಉಲ್ಲೇಖವಿದೆ.