ರಾಜ್ಯಮಟ್ಟದ ಎಲೈಟ್ ಬಾಕ್ಸಿಂಗ್‌ನಲ್ಲಿ ಸಾಗರದ ಸಾದ್‌ಗೆ ಪದಕ Elite Boxing

ಶಿವಮೊಗ್ಗ: ಬೆಂಗಳೂರಿನ ವಿದ್ಯಾನಗರದ ಶ್ರೀ ಜಯಪ್ರಕಾಶ್ ನಾರಾಯಣ ನ್ಯಾಷನಲ್ ಯೂತ್ ಟ್ರೈನಿಂಗ್ ಸೆಂಟರ್‌ನಲ್ಲಿ ನಡೆದ 10ನೇ ರಾಜ್ಯಮಟ್ಟದ ಎಲೈಟ್ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಶಿವಮೊಗ್ಗ ಜಿಲ್ಲೆಯನ್ನು ಪ್ರತಿನಿಧಿಸಿದ್ದ ಸಾಗರದ ಬಾಕ್ಸರ್ ಶೇಖ್ ಮೊಹಮ್ಮದ್ ಸಾದ್ ಅವರು ಪುರುಷರ ಕ್ರೂಸರ್ (80-85 ಕೆ.ಜಿ) ವಿಭಾಗದಲ್ಲಿ ಕಂಚಿನ ಪದಕ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
Elite Boxing
ರಾಜ್ಯಮಟ್ಟದ ಎಲೈಟ್ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಸಾಗರದ ಬಾಕ್ಸರ್ ಶೇಖ್ ಮೊಹಮ್ಮದ್ ಸಾದ್ ಅವರು ಪುರುಷರ ಕ್ರೂಸರ್ ವಿಭಾಗದಲ್ಲಿ ಕಂಚಿನ ಪದಕ ಪಡೆದರು.
Published on: 

ಶಿವಮೊಗ್ಗ: ಬೆಂಗಳೂರಿನ ವಿದ್ಯಾನಗರದ ಶ್ರೀ ಜಯಪ್ರಕಾಶ್ ನಾರಾಯಣ ನ್ಯಾಷನಲ್ ಯೂತ್ ಟ್ರೈನಿಂಗ್ ಸೆಂಟರ್‌ನಲ್ಲಿ ನಡೆದ 10ನೇ ರಾಜ್ಯಮಟ್ಟದ ಎಲೈಟ್ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಶಿವಮೊಗ್ಗ ಜಿಲ್ಲೆಯನ್ನು ಪ್ರತಿನಿಧಿಸಿದ್ದ ಸಾಗರದ ಬಾಕ್ಸರ್ ಶೇಖ್ ಮೊಹಮ್ಮದ್ ಸಾದ್ ಅವರು ಪುರುಷರ ಕ್ರೂಸರ್ (80-85 ಕೆ.ಜಿ) ವಿಭಾಗದಲ್ಲಿ ಕಂಚಿನ ಪದಕ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಕರ್ನಾಟಕ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ಪಂದ್ಯಾವಳಿ ನಡೆದಿದ್ದು, ಸಾಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಸಿಎ ಅಂತಿಮ ವರ್ಷದಲ್ಲಿ ಓದುತ್ತಿರುವ ಸಾದ್, ಡಿ. ನಿಸಾರ್ ಅಹ್ಮದ್ ಹಾಗೂ ಇರ್ಷಾದ್ ಬಾನು ದಂಪತಿ ಪುತ್ರ. ಅವರಿಗೆ ಎನ್‌ಐಎಸ್ ಬಾಕ್ಸಿಂಗ್ ಕೋಚ್ ಮೀನಾಕ್ಷಿ ಅವರು ತರಬೇತಿ ನೀಡಿದ್ದಾರೆ.

ಶಿವಮೊಗ್ಗ ಜಿಲ್ಲಾ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಅಧ್ಯಕ್ಷ ಶಿವಮೊಗ್ಗ ವಿನೋದ್, ಪ್ರಧಾನ ಕಾರ್ಯದರ್ಶಿ ಹಾಗೂ ಕೋಚ್ ಮೀನಾಕ್ಷಿ, ಖಜಾಂಚಿ ಅನೂಪ್ ಆರ್. ಶೇಖರ್, ಸಹ ಕಾರ್ಯದರ್ಶಿ ಶ್ರೇಯಸ್ ಅವರು ಸಾದ್ ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.