ಚಿನ್ನಾಭರಣ ಕಳ್ಳತನ ಮಾಡಿದ್ದ ವ್ಯಕ್ತಿಗೆ ಮೂರು ವರ್ಷ ಜೈಲು । Jewelry theft

ಶಿವಮೊಗ್ಗದ ಎರಡನೇ ಜೆಎಂಎಫ್‌ಸಿ ನ್ಯಾಯಾಲಯ
ಶಿವಮೊಗ್ಗದ ಎರಡನೇ ಜೆಎಂಎಫ್‌ಸಿ ನ್ಯಾಯಾಲಯ
Published on

ಪ್ರಮುಖ ಮುಖ್ಯಾಂಶಗಳು

  • 96 ಗ್ರಾಂ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಹರಿಹರದ ವ್ಯಕ್ತಿ
  • ಜಾಮಿಯಾ ಮಸೀದಿ ಕಾಂಪ್ಲೆಕ್ಸ್‌ನಲ್ಲಿರುವ ಜ್ಯುವೆಲರ್ ಶಾಪ್‌
  • 2017ರಲ್ಲಿ ದೊಡ್ಡಪೇಟೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದ ಅಬ್ಬಾಸ್ ಖಾನ್
ಶಿವಮೊಗ್ಗ: ನಗರದ ಗಾಂಧಿಬಜಾರ್‌ನ ಬಂಗಾರ ಖರೀದಿಸುವ ನೆಪದಲ್ಲಿ ಅಂಗಡಿ ಮಾಲೀಕನಿಗೆ ಚಳ್ಳೆಹಣ್ಣು ತಿನ್ನಿಸಿ 96 ಗ್ರಾಂ ಚಿನ್ನಾಭರಣ(Jewelry) ಕದ್ದು ಪರಾರಿಯಾಗಿದ್ದ ದಾವಣಗೆರೆ ಜಿಲ್ಲೆಯ ಹರಿಹರದ ವ್ಯಕ್ತಿಗೆ ಶಿವಮೊಗ್ಗ ನ್ಯಾಯಾಲಯ(shimoga court) ಮೂರು ವರ್ಷ ಕಾರಾಗೃಹ ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಿದೆ. 
ಹರಿಹರದ ಅಬ್ಬಾಸ್ ಖಾನ್ ಅಲಿಯಾಸ್ ಅಬ್ಬಾಸ್ (40) ಶಿಕ್ಷೆಗೆ ಒಳಗಾದವರು. 2015ರ ಏಪ್ರಿಲ್ 8ರಂದು ಗಾಂಧಿಬಜಾರ್ ಮುಖ್ಯ ರಸ್ತೆ ಜಾಮಿಯಾ ಮಸೀದಿ(Jamia Mosque) ಕಾಂಪ್ಲೆಕ್ಸ್‌ನಲ್ಲಿರುವ ಜ್ಯುವೆಲರ್ ಶಾಪ್‌ಗೆ ತೆರಳಿ ಎರಡು ಬೆಳ್ಳಿ ಕಡಗ(silver kadaga) ಖರೀದಿಸುವ ನೆಪದಲ್ಲಿ ಚಿನ್ನಾಭರಣ ಎಗರಿಸಿದ್ದ.
ದೊಡ್ಡಪೇಟೆ(Doddapete) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 2017ರಲ್ಲಿ ಅಬ್ಬಾಸ್ ಖಾನ್ ಸಿಕ್ಕಿಬಿದ್ದಿದ್ದ. ಆತನಿಂದ 16 ಗ್ರಾಂನ ಬಂಗಾರದ ಚೈನ್ ಸರ,  8 ಗ್ರಾಂನ ಬಂಗಾರದ ನವರತ್ನ ಉಂಗುರ, 5 ಗ್ರಾಂನ ಒಂದು ಬಿಳಿ ಹರಳಿನ ಬಂಗಾರದ ಉಂಗುರ, 4 ಗ್ರಾಂನ ಒಂದು ಹಸಿರು ಹರಳಿನ ಉಂಗುರ ಸೇರಿ 80 ಸಾವಿರ ರೂ. ಮೌಲ್ಯದ 34 ಗ್ರಾಂ ತೂಕದ ಚಿನ್ನಾಭರಣ ಜಪ್ತಿ ಮಾಡಿದ್ದರು. ತನಿಖೆಯಿಂದ ಕಳ್ಳತನ ಆರೋಪ ದೃಢಪಟ್ಟಿದ್ದರಿಂದ ಆತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ(Indictment List) ಸಲ್ಲಿಕೆಯಾಗಿತ್ತು.
ಆರೋಪ ಸಾಬೀತಾಗಿದ್ದರಿಂದ ಎರಡನೇ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಎನ್.ಕೆ.ಸಿದ್ದರಾಜು ಅವರು ಅಬ್ಬಾಸ್ ಖಾನ್ ಅವರಿಗೆ ಮೂರು ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದ್ದಾರೆ. ಸಹಾಯಕ ಸರ್ಕಾರಿ ಅಭಿಯೋಜಕ ಜಿ.ಕೆ.ಕಿರಣ್‌ಕುಮಾರ್ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net