ಸುಳ್ಳು ಹೇಳಿ ಎರಡನೇ ಮದುವೆ ಆದವನಿಗೆ 3 ವರ್ಷ ಶಿಕ್ಷೆ । JMFC Court

ಶಿವಮೊಗ್ಗ ಜೆಎಂಎಫ್‌ಸಿ ನ್ಯಾಯಾಲಯ
ಶಿವಮೊಗ್ಗ ಜೆಎಂಎಫ್‌ಸಿ ನ್ಯಾಯಾಲಯ
Published on
ಶಿವಮೊಗ್ಗ: ಮದುವೆ ಆಗಿದ್ದರೂ ಸುಳ್ಳು ದಾಖಲಾತಿ ನೀಡಿ ಎರಡನೇ ಮದುವೆ(Marriage)ಯಾಗಿದ್ದ ವ್ಯಕ್ತಿಗೆ ಶಿವಮೊಗ್ಗದ ಜಿಲ್ಲಾ 2ನೇ ಜೆಎಂಎಫ್‌ಸಿ(Jmfc) ನ್ಯಾಯಾಲಯವು 3 ವರ್ಷ ಸಾದಾ ಕಾರಾವಾಸ ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಿದೆ. ದಂಡ ಕಟ್ಟಲು ವಿಫಲನಾದಲ್ಲಿ 30 ದಿನಗಳ ಸಾದಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶಿಸಿದೆ. 
ತೀರ್ಥಹಳ್ಳಿ ತಾಲೂಕಿನ ಬಾಳೆಬೈಲ್(Balebail) ಇಂದಿರಾನಗರದ ಮಹಮ್ಮದ್ ಮುತಿಬ್ (32) ಶಿಕ್ಷೆಗೆ ಒಳಗಾದವ. ಈತ ಈ ಹಿಂದೆಯೇ ಮದುವೆಯಾಗಿ ಮಗಳಿದ್ದರೂ ತನಗೆ ಮದುವೆಯಾಗಿಲ್ಲ ಎಂದು ಸುಳ್ಳು ಹೇಳಿ ಶಿವಮೊಗ್ಗದ ಸಬ್‌ರಿಜಿಸ್ಟರ್(Subregister) ಕಚೇರಿಯಲ್ಲಿ ಎರಡನೇ ಮದುವೆಯಾಗಿದ್ದ. ಈ ಬಗ್ಗೆ 2021ರಲ್ಲಿ ಶಿವಮೊಗ್ಗ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 
ಆಗಿನ ತನಿಖಾಧಿಕಾರಿಯಾಗಿದ್ದ ಪಿಎಸ್‌ಐ ಶಾಂತಲಾ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ(Indictment List) ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಧೀಶ ಎನ್.ಕೆ.ಸಿದ್ದರಾಜು ಅವರು ಆರೋಪ ಸಾಬೀತಾಗಿದ್ದರಿಂದ ಮಹಮ್ಮದ್ ಮುತಿಬ್‌ಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದ್ದಾರೆ. ಸರ್ಕಾರಿ ಅಭಿಯೋಜಕ ಕಿರಣ್‌ಕುಮಾರ್ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.  
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net