ಸೆ.8ರಂದು ತಮ್ಮ ಮನೆ ಬಳಿ ಶೆಡ್‌ನಲ್ಲಿ ಅಡಿಕೆ ಬೇಯಿಸುತ್ತಿದ್ದರು. ಅಡಿಕೆ ಹೊರತೆಗೆದ ಬಳಿಕ ಹಂಡೆಯಲ್ಲಿದ್ದ ಅಡಿಕೆ ಚೊಗರು ತೆಗೆಯುತ್ತಿದ್ದ ವೇಳೆ ಕಾಲು ಜಾರಿ ಹಂಡೆಯೊಳಗೆ ಬಿದ್ದಿದ್ದರು. ಪಕ್ಕದಲ್ಲಿಯೇ ಇದ್ದ ಇತರೆ ಮೂವರು ಕೂಡಲೆ ಅವರನ್ನು ಮೇಲಕ್ಕೆತ್ತಿದ್ದಾರೆ. ಬಳಿಕ ಜೇನುಕುಮಾರ್(Jeenukumar) ಶೆಡ್‌ನಿಂದ ಹೊರಗೆ ಓಡಿದ್ದರು. ಶರ್ಟ್ ತೆಗೆದು ಪುನಃ ಶೆಡ್ ಒಳಗೆ ಬಂದಿದ್ದಾರೆ. ಅಷ್ಟು ಹೊತ್ತಿಗೆ ಅವರ ದೇಹದ ಬಹುತೇಕ ಭಾಗ ಸುಟ್ಟು ಹೋಗಿದ್ದು, ಆ ದೃಶ್ಯಗಳು ಶೆಡ್‌ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿವೆ.