ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ವ್ಯಕ್ತಿ ಬಂಧನ | Court hearing

ಬಂಧಿತ ಆರೋಪಿ ಎ.ಮಂಜುನಾಥ
ಬಂಧಿತ ಆರೋಪಿ ಎ.ಮಂಜುನಾಥ
Published on

ಪ್ರಮುಖ ಮುಖ್ಯಾಂಶಗಳು

  • ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ನೇಪಾಳಿ ಮಂಜ
  • ಶಿವಮೊಗ್ಗ ಹೊಸಮನೆ 3ನೇ ಕ್ರಾಸ್‌ನ ಎ.ಮಂಜುನಾಥ ಬಂಧಿತ
  • ಬಂಧನದ ವಾರೆಂಟ್ ಜಾರಿ ಮಾಡಿದ್ದ ಶಿವಮೊಗ್ಗದ ನ್ಯಾಯಾಲಯ
ಶಿವಮೊಗ್ಗ: ಹಲವು ವರ್ಷಗಳಿಂದ ನ್ಯಾಯಾಲಯದ ವಿಚಾರಣೆ(hearing)ಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ(Absconding) ವ್ಯಕ್ತಿಯನ್ನು ದೊಡ್ಡಪೇಟೆ ಠಾಣೆ ಪೊಲೀಸರು ಬೆಂಗಳೂರಿನಲ್ಲಿ  ಬಂಧಿಸಿದ್ದಾರೆ. ಶಿವಮೊಗ್ಗ ಹೊಸಮನೆ 3ನೇ ಕ್ರಾಸ್‌ನ ಎ.ಮಂಜುನಾಥ ಅಲಿಯಾಸ್ ನೇಪಾಳಿ ಮಂಜ(Nepali Manja)(41) ಬಂಧಿತ ಆರೋಪಿ.
ಈತನ ವಿರುದ್ಧ ಜಯನಗರ ಠಾಣೆ ಸೇರಿ ವಿವಿಧೆಡೆ ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯ(Court)ದ ವಿಚಾರಣೆಗೆ ಹಾಜರಾಗಿರಲಿಲ್ಲ. ಹಾಗಾಗಿ ನೇಪಾಳಿ ಮಂಜನ ವಿರುದ್ಧ ಬಂಧನದ ವಾರೆಂಟ್ ಜಾರಿಯಾಗಿತ್ತು. ಈ ಬಗ್ಗೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ದೊಡ್ಡಪೇಟೆ ಠಾಣೆ ಪೊಲೀಸರು ನೇಪಾಳಿ ಮಂಜನಿಗಾಗಿ ಹುಡುಕಾಟ ನಡೆಸಿದ್ದರು.
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಪೈಂಟಿಂಗ್(Painting) ಕೆಲಸ ಮಾಡಿಕೊಂಡಿರುವುದನ್ನು ಖಚಿತಪಡಿಸಿಕೊಂಡ ದೊಡ್ಡಪೇಟೆ ಠಾಣೆ ಇನ್‌ಸೆಕ್ಟರ್ ಸತ್ಯನಾರಾಯಣ್ ಮಾರ್ಗದರ್ಶನದಲ್ಲಿ ಪಿಎಸ್‌ಐ ಎಂ.ಎನ್.ಅಂಬಿಗೇರ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಗೋವರ್ಧನ್, ರವೀಂದ್ರ ಪ್ರಸಾದ್ ಅವರು ಆರೋಪಿ ನೇಪಾಳಿ ಮಂಜನನ್ನು ಬಂಧಿಸಿ ಕರೆತಂದು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net