ಮಕ್ಕಳಿಗೆ ಭಾಷೆ ಮಹತ್ವದ ಅರಿವು ಮೂಡಿಸಿ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸೊರಬದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಮಂಜುಳಾ ಹೆಗಡಾಳ್, ಪ್ರಭು ಮೇಸ್ತ್ರಿ, ಚಂದನ್, ಶಶಿಧರ ಇತರರಿದ್ದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸೊರಬದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಮಂಜುಳಾ ಹೆಗಡಾಳ್, ಪ್ರಭು ಮೇಸ್ತ್ರಿ, ಚಂದನ್, ಶಶಿಧರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕನ್ನಡವನ್ನು ದೈನಂದಿನ ಜೀವನದಲ್ಲಿ ಬಳಸಲು ಹಿಂಜರಿಯದೆ ಮಕ್ಕಳಿಗೆ ಮನೆಯಲ್ಲಿ ಕನ್ನಡದ ಮಹತ್ವ ಹೇಳಬೇಕು
  • ಶಿವಶರಣರ ವಚನ ಸಾಹಿತ್ಯದ ಸಮಾನತೆ ಸಂದೇಶವಿದೆ
ಸೊರಬ: ಕನ್ನಡ ಭಾಷೆ ಮತ್ತು ನಾಡಿನ ಬಗ್ಗೆ ಒಂದು ದಿನ ಅಭಿಮಾನ ತೋರಿದರೆ ಸಾಲದು. ನಿತ್ಯದ ನಡೆ ಆಗಿರಬೇಕು. ಕನ್ನಡವನ್ನು ದೈನಂದಿನ ಜೀವನದಲ್ಲಿ ಬಳಸಲು ಹಿಂಜರಿಯದೆ ಮಕ್ಕಳಿಗೆ ಮನೆಯಲ್ಲಿ ಕನ್ನಡದ ಮಹತ್ವ ಹೇಳಬೇಕು ಎಂದು ತಹಸೀಲ್ದಾರ್ ಮಂಜುಳಾ ಹೆಗಡಾಳ್ ಕರೆ ನೀಡಿದರು.
ಪಟ್ಟಣದಲ್ಲಿ ತಾಲೂಕು ಆಡಳಿತ, ತಾಪಂ, ಪುರಸಭೆ, ವಿವಿಧ ಇಲಾಖೆಗಳ ಸಹಯೋಗದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಪ್ರತಿ ವರ್ಷ ನವೆಂಬರ್‌ನಲ್ಲಿ ಕನ್ನಡದ ಕಂಪು, ಕರುನಾಡಿನ ಪ್ರೀತಿ ಮರುಕಳಿಸುತ್ತದೆ. ಈ ದಿನ ನಮ್ಮ ಅಸ್ಮಿತೆಯ ಹಬ್ಬ. ನಮ್ಮ ಸಂಸ್ಕೃತಿಯ ವಿಜಯೋತ್ಸವ ಮತ್ತು ಭವಿಷ್ಯದ ಬದುಕಿಗೆ ನಮ್ಮನ್ನು ಪ್ರೇರೇಪಿಸುವ ದಿನ ಎಂದು ತಿಳಿಸಿದರು.
ಕರ್ನಾಟಕ ಹಲವು ವಿಶೇಷತೆಗಳನ್ನು ಹೊಂದಿದ್ದು, ಪಂಪ, ರನ್ನ, ಪೊನ್ನ, ರಾಷ್ಟ್ರಕವಿ ಕುವೆಂಪು, ಬೇಂದ್ರೆ, ಶಿವರಾಮ ಕಾರಂತ ಸೇರಿದಂತೆ ಅನೇಕ ಸಾಹಿತಿಗಳಿದ್ದಾರೆ. ವಿಜಯನಗರದ ಭವ್ಯ ಇತಿಹಾಸವಿದೆ. ಹಂಪಿಯ ಕಲಾಕೌಶಲವಿದೆ. ಶಿವಶರಣರ ವಚನ ಸಾಹಿತ್ಯದ ಸಮಾನತೆ ಸಂದೇಶವಿದೆ. ತಂತ್ರಜ್ಞಾನದ ರಾಜಧಾನಿ ಬೆಂಗಳೂರು, ಮಲೆನಾಡಿನ ಹಸಿರು ಸಿರಿ, ಕರಾವಳಿವರೆಗೆ ನಮ್ಮ ನಾಡು ಸಂಸ್ಕೃತಿ ಮತ್ತು ಪ್ರಕೃತಿಯ ಸಂಗಮ. ಇಂತಹ ಶ್ರೀಗಂಧದ ನಾಡಿನಲ್ಲಿ ಜನಿಸಿರುವುದು ನಮ್ಮೆಲ್ಲರ ಸೌಭಾಗ್ಯ ಎಂದರು.
ಪುರಸಭೆ ಅಧ್ಯಕ್ಷ ಪ್ರಭು ಮೇಸ್ತ್ರಿ, ಮುಖ್ಯಾಧಿಕಾರಿ ಚಂದನ್, ತಾಪಂ ಇಒ ಕೆ.ಶಶಿಧರ, ಬಿಇಒ ಆರ್.ಪುಷ್ಪಾ, ಟಿಎಚ್‌ಒ ನೂತನ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶ್ರೀಕಾಂತ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಜಯಶೀಲಗೌಡ, ತಾಲೂಕು ನೌಕರರ ಸಂಘದ ಅಧ್ಯಕ್ಷ ಮಂಜುನಾಥ, ಷಣ್ಮುಖ ಆಚಾರ್ಯ, ಬಲಿಂದ್ರಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net