ಎಂಎಡಿಬಿ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ

ಎಂಎಡಿಬಿ ಅನುದಾನದಲ್ಲಿ ನಿರ್ಮಿಸಿರುವ ಕೋಣಂದೂರಿನ ಪ್ರಯಾಣಿಕರ ತಂಗುದಾಣವನ್ನು ಆರ್.ಎಂ.ಮಂಜುನಾಥ ಗೌಡ ಉದ್ಘಾಟಿಸಿದರು. ಮುಡುಬ ರಾಘವೇಂದ್ರ, ಪ್ರಕಾಶ್ ಗೌಡ, ಪ್ರಸಾದ್ ಗೌಡ, ದೇವರಾಜ ಶೆಟ್ಟಿ ಇತರರಿದ್ದರು.
ಎಂಎಡಿಬಿ ಅನುದಾನದಲ್ಲಿ ನಿರ್ಮಿಸಿರುವ ಕೋಣಂದೂರಿನ ಪ್ರಯಾಣಿಕರ ತಂಗುದಾಣವನ್ನು ಆರ್.ಎಂ.ಮಂಜುನಾಥ ಗೌಡ ಉದ್ಘಾಟಿಸಿದರು. ಮುಡುಬ ರಾಘವೇಂದ್ರ, ಪ್ರಕಾಶ್ ಗೌಡ, ಪ್ರಸಾದ್ ಗೌಡ, ದೇವರಾಜ ಶೆಟ್ಟಿ ಇತರರಿದ್ದರು.
Published on
ತೀರ್ಥಹಳ್ಳಿ: ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅನುದಾನದಲ್ಲಿ ತೀರ್ಥಹಳ್ಳಿ ತಾಲೂಕಿನ ವಿವಿಧ ಗ್ರಾಪಂ ವ್ಯಾಪ್ತಿಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಿರುವ ತಂಗುದಾಣಗಳನ್ನು ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಉದ್ಘಾಟಿಸಿದರು.
ಕೊಣಂದೂರು ಗ್ರಾಪಂ ವ್ಯಾಪ್ತಿಯ ಸಿಕೆ ವೃತ್ತದಲ್ಲಿ ಆಟೋ ಚಾಲಕರ ಅನುಕೂಲಕ್ಕಾಗಿ ನಿರ್ಮಿಸಿರುವ ನೂತನ ಆಟೋ ನಿಲ್ದಾಣ, ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗದಲ್ಲಿ ನೂತನ ಬಸ್ ನಿಲ್ದಾಣ, ದೇಮ್ಲಾಪುರ ಗ್ರಾಪಂ ವ್ಯಾಪ್ತಿ ಮಳಲಿಮಕ್ಕಿಯಲ್ಲಿ ಬಸ್ ನಿಲ್ದಾಣ, ತ್ರಿಯಂಬಕಪುರ ಗ್ರಾಪಂ ವ್ಯಾಪ್ತಿ ಹುಲ್ಲತ್ತಿಯಲ್ಲಿ ಬಸ್ ನಿಲ್ದಾಣವನ್ನು ಉದ್ಘಾಟಿಸಿದರು.
ದೇಮ್ಲಾಪುರ ವೃತ್ತದಲ್ಲಿ ನೂತನ ಆಟೋ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಡುಬ ರಾಘವೇಂದ್ರ, ಪ್ರಕಾಶ್ ಗೌಡ, ಪ್ರಸಾದ್ ಗೌಡ, ಆಟೋ ಬಳಗದ ಅಧ್ಯಕ್ಷ ದೇವರಾಜ ಶೆಟ್ಟಿ , ಡಾ. ಸುಂದರೇಶ್, ರವೀಶ್, ಸುರೇಶ್, ಆದರ್ಶ, ಲೋಕೇಶ್, ದಿನೇಶ್, ಸುಕೇಶ್, ನಾಗರಾಜ್, ಸಚಿನ್ ಗೌಡ, ವಿಶ್ವನಾಥ್, ರಕ್ಷಿತ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net