

ಪ್ರಮುಖ ಮುಖ್ಯಾಂಶಗಳು
ಪೊಲೀಸ್ ಇಲಾಖೆಯಲ್ಲಿ ಸಂಚಾರಿ ಇ-ಚಲನ್‌ನಲ್ಲಿ ದಾಖಲಾದ ಪ್ರಕರಣಗಳಿಗೆ ಶೇ.50ರಷ್ಟು ರಿಯಾಯಿತಿಯೊಂದಿಗೆ ದಂಡ ಪಾವತಿಸಲು ಹಾಗೂ 1990-91ರಿಂದ 2019-20ರ ಅವಧಿಯಲ್ಲಿ ಆರ್‌ಟಿಒ ಇಲಾಖೆಯಲ್ಲಿ ದಾಖಲಾದ ಪ್ರಕರಣಗಳಿಗೆ ಶೇ.50ರ ರಿಯಾಯಿತಿಯೊಂದಿಗೆ ದಂಡ ಪಾವತಿಸಲು ಡಿ.12 ಕಡೇ ದಿನ. ಸಾರ್ವಜನಿಕರು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಇನ್ನೊಮ್ಮೆ ಇಂತಹ ಅವಕಾಶ ಸಿಗುವುದಿಲ್ಲ.
ಶಿವಮೊಗ್ಗ ಹಾಗೂ ಸಾಗರ ಆರ್‌ಟಿಒ ಕಚೇರಿಗಳಲ್ಲಿ ದಂಡ ಪಾವತಿಗೆ ಅವಕಾಶ ಕಲ್ಪಿಸಲಾಗಿದೆ. ಸಂಬಂಧಿಸಿದವರು ಪ್ರಕರಣದ ವಿವರ ನೀಡಿದರೆ ಬಾಕಿ ಇರುವ ದಂಡ ತಿಳಿಸಲಾಗುತ್ತದೆ. ಸಾರ್ವಜನಿಕರು ಕಡೆಯ ದಿನದವರೆಗೂ ಕಾಯದೆ ಈಗಿನಿಂದಲೇ ದಂಡ ಪಾವತಿಸಬೇಕು. ಇಲ್ಲದಿದ್ದರೆ ಮುಂದೆ ಸಮಸ್ಯೆ ಎದುರಿಸಬೇಕಾಗುತ್ತದೆ.