ಬಿಸಿ ಟ್ರಸ್ಟ್‌ನ ಚಿತ್ರದುರ್ಗದ ಪ್ರಾದೇಶಿಕ ನಿರ್ದೇಶಕಿ ಬಿ.ಗೀತಾ ಅವರು ನೂತನ ಒಕ್ಕೂಟಗಳ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಮಾಡಿದರು. ಕೋಟೆಗಂಗೂರು ಗ್ರಾಮ ಪಂಚಾಯತ್ ಅಧ್ಯಕ್ಷ ದೂದ್ಯ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐ ಎಲ್.ಸ್ವಪ್ನಾ, ತಾಲೂಕು ಯೋಜನಾಧಿಕಾರಿ ಉಲ್ಲಾಸ್ ಮೆಸ್ತ, ಮಮತಾ ಶಿವಣ್ಣ, ಮೇಲ್ವಿಚಾರಕ ಪ್ರಶಾಂತ್ ಹಾಜರಿದ್ದರು.