

ಪ್ರಮುಖ ಮುಖ್ಯಾಂಶಗಳು
ಪ್ರಜ್ಞಾವಂತ ವಿದ್ಯಾರ್ಥಿ (student) ಶಕ್ತಿ ದೇಶಕ್ಕೆ (nation) ಅವಶ್ಯವಿದೆ. ಜವಾಬ್ದಾರಿಯುತ ನಾಗರಿಕನಾಗಿ ಸಾಮಾನ್ಯ ಪರಿಜ್ಞಾನ ಹೊಂದಲು ಎಬಿವಿಪಿಯಂತಹ (abvp) ಸಂಘಟನೆಗಳು ಸಹಕಾರಿಯಾಗುತ್ತವೆ ಎಂದು ಆರ್‌ಎಸ್‌ಎಸ್ ನಗರ ಸಂಘಚಾಲಕ ಲೋಕೇಶ್ವರ್ ರಾವ್ ಕಾಳೆ ಅಭಿಪ್ರಾಯಪಟ್ಟರು.
ಇಂದು ದೇಶವು ಜಾಗತಿಕ ಮಟ್ಟದಲ್ಲಿ ತನ್ನ ಸ್ಥಾನ ಬಲಪಡಿಸಿಕೊಂಡಿದೆ. ಆದರೆ 15-20 ವರ್ಷಗಳ ಹಿಂದೆ ಇದೇ ಭಾರತವನ್ನು ವಿಶ್ವಗುರುವಿನ ಸ್ಥಾನಕ್ಕೆ ಯೋಗ್ಯ ರಾಷ್ಟ್ರವೆಂದು ಹೇಳುವ ಪರಿಸ್ಥಿತಿಯೇ ಇರಲಿಲ್ಲ. ದೇಶದ ಪ್ರಗತಿಯೊಂದಿಗೆ ವಿದ್ಯಾರ್ಥಿಗಳಲ್ಲೂ ರಾಷ್ಟ್ರೀಯ ಚಿಂತನೆ ಮತ್ತು ಜವಾಬ್ದಾರಿಯ ಭಾವನೆ ಬೆಳೆಸುವುದು ಅಗತ್ಯ.
— ಲೋಕೇಶ್ವರ್ ರಾವ್ ಕಾಳೆ ಆರ್‌ಎಸ್‌ಎಸ್ ಶಿವಮೊಗ್ಗ ನಗರ ಸಂಘಚಾಲಕ