ಕುಷ್ಠರೋಗವನ್ನು ನಿರ್ಲಕ್ಷಿಸಿದರೆ ಅಂಗವೈಕಲ್ಯ ಸಾಧ್ಯತೆ| health department

ಶಿವಮೊಗ್ಗದಲ್ಲಿ ಕುಷ್ಠರೋಗ ಪ್ರಕರಣ ಪತ್ತೆಹಚ್ಚುವ ಅಭಿಯಾನಕ್ಕೆ ಚಾಲನೆ ಕಾರ್ಯಕ್ರಮದಲ್ಲಿ ಡಿಎಚ್‌ಒ ಡಾ. ಕೆ.ಎಸ್.ನಟರಾಜ್, ಡಾ. ಕಿರಣ್, ಡಾ. ಚಂದ್ರಶೇಖರ್, ಡಾ. ಆರ್ಷಿಯಾ ಅಂಜುಂ ಇತರರಿದ್ದರು.
ಶಿವಮೊಗ್ಗದಲ್ಲಿ ಕುಷ್ಠರೋಗ ಪ್ರಕರಣ ಪತ್ತೆಹಚ್ಚುವ ಅಭಿಯಾನಕ್ಕೆ ಚಾಲನೆ ಕಾರ್ಯಕ್ರಮದಲ್ಲಿ ಡಿಎಚ್‌ಒ ಡಾ. ಕೆ.ಎಸ್.ನಟರಾಜ್, ಡಾ. ಕಿರಣ್, ಡಾ. ಚಂದ್ರಶೇಖರ್, ಡಾ. ಆರ್ಷಿಯಾ ಅಂಜುಂ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಿಎಚ್‌ಒ ಕೆ.ಎಸ್.ನಟರಾಜ್ ಎಚ್ಚರಿಕೆ
  • ಆರೋಗ್ಯ ಇಲಾಖೆಯಿಂದ ಜಾಗೃತಿ ಅಭಿಯಾನ
  • ಕುಷ್ಠ ರೋಗದಿಂದ ಅಂಗವೈಕಲ್ಯದ ಅಪಾಯ

ಜಿಲ್ಲಾಡಳಿತದಿಂದ ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಡಿ ಬಾಪೂಜಿ ನಗರದ ಆರೋಗ್ಯ ಕೇಂದ್ರದಲ್ಲಿ ಸೋಮವಾರ (monday) ಏರ್ಪಡಿಸಿದ್ದ ಕುಷ್ಠರೋಗ ಪ್ರಕರಣ ಪತ್ತೆಹಚ್ಚುವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕುಷ್ಠರೋಗವು ಎಂ.ಲೆಪ್ರೆ ಎಂಬ ರೋಗಾಣುವಿನಿಂದ ಬರುವ ಕಾಯಿಲೆ (decesae). ಈ ರೋಗದಿಂದ ಉಂಟಾಗುವ ಅಂಗವೈಕಲ್ಯದ ಕಾರಣದಿಂದ ಸಾಮಾಜಿಕವಾಗಿ ಕಳಂಕ ಅಂಟಿಕೊಂಡಿದೆ ಎಂದರು.

ದೇಹದ ಮೇಲೆ ತಿಳಿ ಬಿಳಿ ಅಥವಾ ತಾಮ್ರ ಬಣ್ಣದ ಮಚ್ಚೆಗಳು, ಕೈ ಅಥವಾ ಕಾಲುಗಳಲ್ಲಿ ಸ್ಪರ್ಶಜ್ಞಾನ ಇಲ್ಲದಿರುವುದು, ಜೋಮು ಹಿಡಿಯುವುದು, ಮುಖ ಮತ್ತು ಕಿವಿಯ ಮೇಲೆ ಎಣ್ಣೆಯಂತಹ ಹೊಳಪುಗಳು ಕಂಡುಬರುವುದು ಕುಷ್ಠ ರೋಗದ ಲಕ್ಷಣಗಳು. ಈ ರೋಗವು ಮೂಗಿನ ದ್ರವ ಹಾಗೂ ಉಸಿರಿನ ಮೂಲಕ ಆರೋಗ್ಯವಂತರಿಗೆ ಹರಡುತ್ತದೆ. ಈ ರೋಗವು ವಂಶಪಾರಂಪರ್ಯವಲ್ಲ ಎಂದು ತಿಳಿಸಿದರು.

ಡಿಎಲ್‌ಒ ಡಾ. ಕಿರಣ್ ಮಾತನಾಡಿ, ಕುಷ್ಠರೋಗ ಪ್ರಕರಣಗಳನ್ನು ಪತ್ತೆಹಚ್ಚಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮನೆ ಮನೆಗೆ ಭೇಟಿ ನೀಡುವ ಆಶಾ ಕಾರ್ಯಕರ್ತರು ವ್ಯಕ್ತಿಯ ದೇಹದಲ್ಲಿ ಯಾವುದೇ ರೀತಿಯ ತಿಳಿ ಬಿಳಿ ಮಚ್ಚೆ ಹಾಗೂ ಚರ್ಮದಲ್ಲಿ ಕಾಯಿಲೆ ಕಂಡು ಬಂದಲ್ಲಿ ಕೂಡಲೇ ವೈದ್ಯರ ಬಳಿ ತೆರಳುವಂತೆ ಸಲಹೆ ನೀಡಬೇಕು ಎಂದರು.

ಜಿಲ್ಲೆಯಲ್ಲಿ 14 ದಿನ ಕುಷ್ಠರೋಗ ನಿರ್ಮೂಲನಾ ಅಭಿಯಾನ ನಡೆಯಲಿದೆ. 133 ಹಳ್ಳಿಗಳು, 71,662 ಮನೆಗಳು ಹಾಗೂ 3,06,052 ಜನರನ್ನು ಪರೀಕ್ಷೆಗೆ ಒಳಪಡಿಸಿ ಕುಷ್ಠರೋಗ ಪ್ರಕರಣಗಳನ್ನು ಪತ್ತೆಹಚ್ಚುವ ಗುರಿ ಇದೆ ಎಂದು ತಿಳಿಸಿದರು.

ಶಿವಮೊಗ್ಗ ತಾಲೂಕು ಆರೋಗ್ಯಾಧಿಕಾರಿ ಡಾ. ಚಂದ್ರಶೇಖರ್, ಬಾಪೂಜಿ ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಆರ್ಷಿಯಾ ಅಂಜುಂ, ಆರೋಗ್ಯ ಇಲಾಖೆ ಅಧಿಕಾರಿಗಳು, ಆಶಾ ಕಾರ್ಯಕರ್ತರು ಹಾಗೂ ಸ್ವಯಂಸೇವಕರು ಇದ್ದರು.

"

"ದೇಹದಲ್ಲಿ ತಿಳಿಯಾದ ಬಿಳಿ ಮಚ್ಚೆಗಳು ಕಂಡುಬಂದಲ್ಲಿ ಅದನ್ನು ಗುಪ್ತವಾಗಿರಿಸದೆ ವೈದ್ಯರಿಗೆ ತೋರಿಸಬೇಕು. ಆ ಮೂಲಕ ರೋಗದ ಆರಂಭಿಕ ಹಂತದಲ್ಲೇ ಚಿಕಿತ್ಸೆ ಪಡೆದು ಅಂಗವೈಕಲ್ಯ ತಡೆಗಟ್ಟಬಹುದು. ಬಹು ಔಷಧ ಚಿಕಿತ್ಸೆಯಿಂದಲೂ ಈ ರೋಗವನ್ನು ಸಂಪೂರ್ಣ ಗುಣಪಡಿಸಬಹುದು. 6 ಅಥವಾ 12 ತಿಂಗಳು ಕಾಲ ಮನೆಯಲ್ಲೇ ಚಿಕಿತ್ಸೆ ಪಡೆದುಕೊಳ್ಳಬೇಕು. ಈಗಾಗಲೇ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ರೋಗಕ್ಕೆ ಬಹು ಔಷಧಗಳನ್ನು ಉಚಿತವಾಗಿ ನೀಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net