ವೈವಿಧ ಭಾಷೆ ಕಲಿಕೆಯಿಂದ ಸಂವಹನ ಸುಲಭ

ಶಿಕಾರಿಪುರದ ಜುಬೇದಾ ಉರ್ದು ಡಿಗ್ರಿ ಕಾಲೇಜಿನಿಂದ ಏರ್ಪಡಿಸಿದ್ದ ವಿಚಾರ ಸಂಕಿರಣವನ್ನು ಮೌಲಾನಾ ಮಫ್ತಿ ಮೊಹಮ್ಮದ್ ಅಲಿ ಉದ್ಘಾಟಿಸಿದರು. ಬಿ.ಜಿ.ಚನ್ನಪ್ಪ, ವಿನಯ್ ಆರಾಧ್ಯ, ಡಾ. ಹಾಫಿಜ್ ಕರ್ನಾಟಕಿ ಇತರರಿದ್ದರು.
ಶಿಕಾರಿಪುರದ ಜುಬೇದಾ ಉರ್ದು ಡಿಗ್ರಿ ಕಾಲೇಜಿನಿಂದ ಏರ್ಪಡಿಸಿದ್ದ ವಿಚಾರ ಸಂಕಿರಣವನ್ನು ಮೌಲಾನಾ ಮಫ್ತಿ ಮೊಹಮ್ಮದ್ ಅಲಿ ಉದ್ಘಾಟಿಸಿದರು. ಬಿ.ಜಿ.ಚನ್ನಪ್ಪ, ವಿನಯ್ ಆರಾಧ್ಯ, ಡಾ. ಹಾಫಿಜ್ ಕರ್ನಾಟಕಿ ಇತರರಿದ್ದರು.
Published on
ಶಿಕಾರಿಪುರ: ಉರ್ದು ಭಾಷೆ ಅತ್ಯಂತ ಸರಳವಾಗಿದ್ದು, ಈ ಭಾಷೆ ಕಲಿತರೆ ಪ್ರಪಂಚದ ಎಲ್ಲ ದೇಶಗಳಲ್ಲೂ ವ್ಯವಹರಿಸಬಹುದು ಎಂದು ರಾಜ್ಯ ಉರ್ದು ಅಕಾಡೆಮಿ ಅಧ್ಯಕ್ಷ ಮೌಲಾನಾ ಮಫ್ತಿ ಮೊಹಮ್ಮದ್ ಅಲಿ ಹೇಳಿದರು.
ಜುಬೇದಾ ಉರ್ದು ಡಿಗ್ರಿ ಕಾಲೇಜಿನಿಂದ ಏರ್ಪಡಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ಜನರು ಎಲ್ಲ ಭಾಷೆಗಳನ್ನು ಕಲಿಯುವ ಮೂಲಕ ಭಾಷಾ ಸೌಹಾರ್ದ ಮೆರೆಯಬೇಕು ಎಂದು ತಿಳಿಸಿದರು.
ಸಾಹಿತಿಗಳು ಎಲ್ಲ ಭಾಷೆಗಳನ್ನು ಕಲಿತು ಬೇರೆ ಭಾಷೆಗಳ ಸಾಹಿತ್ಯವನ್ನು ಅವರವರ ಭಾಷೆಯಲ್ಲಿ ಕಟ್ಟಿಕೊಡಬೇಕು. ಎಲ್ಲ ಸಮುದಾಯಗಳ ಸಾಹಿತಿಗಳು ಸಾಹಿತ್ಯ ವಲಯಕ್ಕೆ ವಿಶೇಷ ಕೊಡುಗೆ ನೀಡಬೇಕು. ರಾಜ್ಯ ಉರ್ದು ಅಕಾಡೆಮಿಯು ಸಾಹಿತ್ಯಕ್ಕೆ ಕೊಡುಗೆ ನೀಡಿದ ಮಹನೀಯರನ್ನು ಸಮಾಜಕ್ಕೆ ಪರಿಚಯಿಸುವ ಕೆಲಸ ಮಾಡುತ್ತಿದೆ ಎಂದರು.
ಡಾ. ಹಾಫಿಜ್ ಕರ್ನಾಟಕಿ ಮಾತನಾಡಿ, ಯಾವುದೇ ಭಾಷೆ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ. ಎಲ್ಲ ಭಾಷೆಗಳನ್ನು ಕಲಿಯುವುದು, ಪರಸ್ಪರ ಗೌರವಿಸುವುದು ಅಗತ್ಯ. ಸಮಾಜಕ್ಕೆ ಒಳಿತನ್ನು ನೀಡುವ ಪ್ರಯತ್ನ ಮಾಡಿದರೆ ಅದು ಈ ದೇಶಕ್ಕೆ ಕೊಟ್ಟ ದೊಡ್ಡ ಕೊಡುಗೆಯಾಗಲಿದೆ ಎಂದು ತಿಳಿಸಿದರು.
ಶಿಕಾರಿಪುರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯ ಬಿ.ಜಿ.ಚನ್ನಪ್ಪ ಮಾತನಾಡಿ, ಉರ್ದು ಭಾಷೆ ಸೌಹಾರ್ದದ ಸಂಕೇತ. ಸ್ವಲ್ಪ ಶ್ರಮಪಟ್ಟರೆ ಎಲ್ಲರೂ ಕಲಿಯಬಹುದು. ಉರ್ದು ಗಜಲ್‌ಗಳು ಅತ್ಯಂತ ಅರ್ಥಗರ್ಭಿತ ಹಾಗೂ ಪರಿಣಾಮಕಾರಿ ಎಂದರು.
ಉಪತಹಸೀಲ್ದಾರ್ ವಿನಯ್ ಆರಾಧ್ಯ, ಸೈಯದ್ ಕಲಾಲ್ ಅಹಮದ್, ಸೈಯದ್ ಖಾಲಿಕ್, ಮುದಸಿರ್ ಅಹಮದ್, ದಾವೂದ್ ಮೊಸಿನ್, ಶಬೀನಾ ತಲತ್, ಡಾ. ಸಿದ್ದಿಕಿ, ಅಬ್ದುಲ್ ಸಲ್ಮಾನ್, ಅಜರ್ ನದ್ವಿ, ಅಬ್ದುಲ್ ರಶೀದ್, ರಿಯಾಜ್, ಮೊಹಮ್ಮದ್ ಶರೀಫ್, ಅಹಮದ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net