ಬಫರ್ ಜೋನ್ ಒತ್ತುವರಿ ತೆರವುಗೊಳಿಸ ಆಗ್ರಹಿಸಿ ಕರವೇ ಪ್ರತಿಭಟನೆ | Karave protest

ರಾಜಕಾಲುವೆಯ ಬಫರ್ ಜೋನ್ ಅತಿಕ್ರಮಣ ತೆರವುಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ   ಸ್ವಾಭಿಮಾನಿ ಬಣದ ಜಿಲ್ಲಾ ಘಟಕದ ಪದಾಧಿಕಾರಿಗಳು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.   ಕಿರಣ್‌ಕುಮಾರ್, ಸಂತೋಷ್, ಪ್ರವೀಣ್‌ಕುಮಾರ್, ಕೃಷ್ಣಪ್ಪ, ನೂರುಲ್ಲ ಇತರರಿದ್ದರು.
ರಾಜಕಾಲುವೆಯ ಬಫರ್ ಜೋನ್ ಅತಿಕ್ರಮಣ ತೆರವುಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಜಿಲ್ಲಾ ಘಟಕದ ಪದಾಧಿಕಾರಿಗಳು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕಿರಣ್‌ಕುಮಾರ್, ಸಂತೋಷ್, ಪ್ರವೀಣ್‌ಕುಮಾರ್, ಕೃಷ್ಣಪ್ಪ, ನೂರುಲ್ಲ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸವಳಂಗ ರಸ್ತೆಯ ಅಕ್ಕಮಹಾದೇವಿ ವೃತ್ತದ ಬಳಿ ರಾಜಕಾಲುವೆ
  • ಜಿಲ್ಲಾಧಿಕಾರಿ ಕಚೇರಿ ಎದುರು ಕರವೇ ಸ್ವಾಭಿಮಾನಿ ಬಣ ಪ್ರತಿಭಟನೆ
  • ಕಟ್ಟಡ ಪರವಾನಗಿ, ಕಂದಾಯ ನಿಗದಿ ರದ್ದುಪಡಿಸಬೇಕು ಎಂದು ಒತ್ತಾಯ
ಶಿವಮೊಗ್ಗ: ನಗರದ ಸವಳಂಗ ರಸ್ತೆಯ ಅಕ್ಕಮಹಾದೇವಿ ವೃತ್ತದ ಬಳಿ ರಾಜಕಾಲುವೆ ಬಫರ್ ಜೋನ್(Buffer zone) ವ್ಯಾಪ್ತಿಯ 2 ಕಿ.ಮೀ. ಜಾಗ ಅತಿಕ್ರಮಣ ತೆರವುಗೊಳಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಜಿಲ್ಲಾ ಘಟಕದ ಪದಾಧಿಕಾರಿಗಳು ಶನಿವಾರ ಜಿಲ್ಲಾಧಿಕಾರಿ ಕಚೇರಿ(District Collector's Office) ಎದುರು ಪ್ರತಿಭಟನೆ ನಡೆಸಿದರು.
ಸರ್ಕಾರ ರಾಜಕಾಲುವೆ(Rajakaluve)ಗಳ ನಿರ್ವಹಣೆ ಹಾಗೂ ರಕ್ಷಣೆಗೆ ಕಟ್ಟುನಿಟ್ಟಿನ ಕಾನೂನು ಕಾಯ್ದೆಗಳನ್ನು ರೂಪಿಸಿ ಜಾರಿಗೆ ಬರುವಂತೆ ಆಯಾ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದ್ದರೂ ನಿಯಮಗಳು ಪಾಲನೆ ಆಗುತ್ತಿಲ್ಲ. ಅಕ್ಕಮಹಾದೇವಿ ವೃತ್ತ(Akkamahadevi Circle)ದ ಬಳಿ ರಾಜಕಾಲುವೆಯ ಬಫರ್ ಜೋನ್ ಜಾಗ ಅತಿಕ್ರಮಣ ಆಗಿರುವುದನ್ನು ತೆರವುಗೊಳಿಸಬೇಕು. ಕಟ್ಟಡ ಪರವಾನಗಿ, ಕಂದಾಯ ನಿಗದಿಗಳನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ರಾಜಕಾಲುವೆ ಬಫರ್ ನಿಯಮಗಳ ಕಾಯ್ದೆಯಂತೆ ನೋಟಿಸ್ ನೀಡದೆ ತೆರವುಗೊಳಿಸಲು ಮಹಾನಗರ ಪಾಲಿಕೆ(Mahanagara palike)ಗೆ ಅಧಿಕಾರವಿದೆ. ಕಟ್ಟಡಗಳಿಗೆ ನಿಯಮ ಬಾಹಿರವಾಗಿ ಕೊಟ್ಟಿರುವ ಪರವಾನಗಿ ಹಾಗೂ ಕಂದಾಯ ನಿಗದಿಗಳನ್ನು ರದ್ದುಪಡಿಸಿ ತೆರವುಗೊಳಿಸಬೇಕೆಂದು ಆಗ್ರಹಿಸಿದರು.
ಬಫರ್ ಜೋನ್ ಉಲ್ಲಂಘನೆ ಆಗಿದ್ದರೂ ವಿದ್ಯುತ್ ಸಂಪರ್ಕ ನೀಡಿರುವುದು ಅಪರಾಧವಾಗಿದೆ. ಕಟ್ಟಡಗಳು, ಕಾಂಪ್ಲೆಕ್ಸ್‌ಗಳು, ಅಪಾರ್ಟ್‌ಮೆಂಟ್‌ಗಳು, ಖಾಸಗಿ ನರ್ಸಿಂಗ್ ಹೋಂ(Private nursing home)ಗಳಿಗೆ ನೀಡಿರುವ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಬೇಕು. ಏಳು ದಿನದೊಳಗೆ ಅತಿಕ್ರಮಣ ತೆರವುಗೊಳಿಸದೇ ಇದ್ದರೆ ಡಿಸಿ, ಪಾಲಿಕೆ ಆಯುಕ್ತರು, ಜಿಲ್ಲಾ ಆರೋಗ್ಯಾಧಿಕಾರಿಗಳು, ಮೆಸ್ಕಾಂ ಎಕ್ಸಿಕ್ಯೂಟಿವ್ ಇಂಜಿನಿಯರ್ ವಿರುದ್ಧ ಕರ್ನಾಟಕ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾಧ್ಯಕ್ಷ ಎಚ್.ಎಸ್.ಕಿರಣ್‌ಕುಮಾರ್, ಸಂತೋಷ್, ಪ್ರವೀಣ್‌ಕುಮಾರ್, ಕೃಷ್ಣಪ್ಪ, ನೂರುಲ್ಲ, ಸಾಧಿಕ್, ರವಿ, ಕೇಶವ, ಆನಂದ್, ವಿಜಯಕುಮಾರ್, ಪರಮೇಶ್, ಅನಿತಾ, ಸೈಯದ್ ಮುಜೀಬುಲ್ಲಾ, ರಾಜಶೇಖರ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net