ರ‌್ಯಾಲಿಯಲ್ಲಿ 500 ಬೈಕ್‌ಗಳು, 200 ಕಾರುಗಳು, 100 ಸೈಕಲ್‌ಗಳು ಭಾಗವಹಿಸಲಿವೆ. ಬೈಕ್-ಕಾರು ಹಾಗೂ ಸೈಕಲ್ ರ‌್ಯಾಲಿ ಪ್ರತ್ಯೇಕವಾಗಿ ಸಾಗಲಿವೆ. ಬೈಕ್ ಮತ್ತು ಕಾರು ಜಾಥಾಯು ಫ್ರೀಡಂಪಾರ್ಕ್(Freedom Park)ನಿಂದ ಹೊರಟು ಪೊಲೀಸ್ ಚೌಕಿ, ಆದಿಚುಂಚನಗಿರಿ ಮಠ, ಗುತ್ತಿ ನರ್ಸಿಂಗ್ ಹೋಮ್, ಬಿಜೆಪಿ ಕಚೇರಿ, ಎಲ್‌ಎಲ್‌ಆರ್ ರಸ್ತೆ, ಗೋಪಿ ವೃತ್ತ, ಅಮೀರ್ ಅಹ್ಮದ್ ಸರ್ಕಲ್, ಗಾಂಧಿಬಜಾರ್, ರಾಮಣ್ಣಶ್ರೇಷ್ಠಿ ಪಾರ್ಕ್, ಬೆಕ್ಕಿನಕಲ್ಮಠ ವೃತ್ತ, ಬಿ.ಎಚ್.ರಸ್ತೆ, ವೀರಭದ್ರೇಶ್ವರ ಟಾಕೀಸ್ ಮಾರ್ಗವಾಗಿ ಮಹಾವೀರ ವೃತ್ತ ತಲುಪಲಿದೆ. ಸೈಕಲ್ ಜಾಥಾವು ಲಕ್ಷ್ಮೀ ಟಾಕೀಸ್ ವೃತ್ತ, ಜೈಲ್ ವೃತ್ತ, ದುರ್ಗಿಗುಡಿ, ಗೋಪಿ ವೃತ್ತ, ಬಾಲರಾಜ್ ಅರಸ್ ರಸ್ತೆ ಮಾರ್ಗವಾಗಿ ಮಹಾವೀರ ವೃತ್ತ ತಲುಪಲಿದೆ ಎಂದು ಹೇಳಿದರು.