ಮಾನವೀಯ ಮೌಲ್ಯ ಪ್ರೇರೇಪಿಸುವ ಜೈನ ಧರ್ಮ

ರಿಪ್ಪನ್‌ಪೇಟೆ ಸಮೀಪದ ಹೊಂಬುಜ ಜೈನಮಠದಲ್ಲಿ ಮುಕುಟ ಸಪ್ತಮಿ ಅಂಗವಾಗಿ ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಶ್ರೀ ಪದ್ಮಾವತಿ ದೇವಿಗೆ ನಿರ್ವಾಣ ಲಾಡು ಸಮರ್ಪಿಸಿದರು.
ರಿಪ್ಪನ್‌ಪೇಟೆ ಸಮೀಪದ ಹೊಂಬುಜ ಜೈನಮಠದಲ್ಲಿ ಮುಕುಟ ಸಪ್ತಮಿ ಅಂಗವಾಗಿ ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಶ್ರೀ ಪದ್ಮಾವತಿ ದೇವಿಗೆ ನಿರ್ವಾಣ ಲಾಡು ಸಮರ್ಪಿಸಿದರು.
Published on
ರಿಪ್ಪನ್‌ಪೇಟೆ: ಜೈನಧರ್ಮವು ಮಾನವೀಯ ಮೌಲ್ಯ ಮತ್ತು ಅಹಿಂಸಾತ್ಮಕ ಭಾವನೆ ಬೆಳೆಸಲು ಪ್ರೇರೇಪಿಸುತ್ತದೆ ಎಂದು ಹೊಂಬುಜ ಜೈನಮಠದ ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
ಶ್ರೀ ಪಾರ್ಶ್ವನಾಥ ತೀರ್ಥಂಕರರ ಮೋಕ್ಷಕಲ್ಯಾಣದ ಸುದಿನ ಮುಕುಟ ಸಪ್ತಮಿ ಕುರಿತು ಮಾತನಾಡಿ, ಇಂದ್ರಿಯ ನಿಗ್ರಹ ಮತ್ತು ಕಠೋರ ಧ್ಯಾನದ ಮಹತ್ವ ಅರಿತುಕೊಳ್ಳಬೇಕು. ಹೊಂಬುಜ ಕ್ಷೇತ್ರದ ಅಧಿನಾಯಕ ಪಾಶ್ವನಾಥ ತೀರ್ಥಂಕರರು ಆಗಿರುವುದರಿಂದ ಭಕ್ತರು ವಿಶ್ವದ ಎಲ್ಲೆಡೆಯಿಂದ ಆಗಮಿಸಿ ದರ್ಶನ ಪಡೆದು ಸಂಕಷ್ಟದಿಂದ ಪರಿಹಾರ ಪಡೆಯುತ್ತಾರೆ ಎಂದು ತಿಳಿಸಿದರು.
ಶ್ರೀಗಳು ಭಕ್ತರಿಗೆ ಶ್ರೀಫಲ ಮಂತ್ರಾಕ್ಷತೆ ನೀಡಿ ಹರಸಿದರು. ಶ್ರೀ ಪಾರ್ಶ್ವನಾಥ ತೀರ್ಥಂಕರ ಸನ್ನಿಧಿಯಲ್ಲಿ ವಿಶೇಷ ಪೂಜಾ ದ್ರವ್ಯಗಳನ್ನು ಅರ್ಪಿಸಲಾಯಿತು. ಶ್ರೀ ಸ್ವರ್ಣ ಪಲ್ಲಕ್ಕಿಯಲ್ಲಿ ಜಿನಬಿಂಬ ಶ್ರೀವಿಹಾರ ನಡೆಸಲಾಯಿತು. ನಿರ್ವಾಣ ಲಾಡು ಸಮರ್ಪಿಸಲಾಯಿತು. ಜಗನ್ಮಾತೆ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಪೂಜಾ ವಿಧಾನ ನೆರವೇರಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net