ಪುನೀತ್​ ರಾಜ್​ಕುಮಾರ್​ ದೇಗುಲ ಉದ್ಘಾಟನೆ

ಭದ್ರಾವತಿ ಚಾಮೇಗೌಡ ಏರಿಯಾದಲ್ಲಿ ಡಾ. ರಾಜ್​ಕುಮಾರ್​ ಮತ್ತು ಡಾ. ಪುನೀತ್​ ರಾಜ್​ಕುಮಾರ್​ ಅವರ ದೇಗುಲ, ಕಂಚಿನ ಪ್ರತಿಮೆ ಅನಾವರಣವನ್ನು ಅಶ್ವಿನಿ ಪುನೀತ್​ರಾಜ್​ಕುಮಾರ್​ ನೆರವೇರಿಸಿದರು. ಬಿ.ಕೆ.ಸಂಗಮೇಶ್ವರ್​, ಎಸ್​.ಕುಮಾರ್​ ಮುಂತಾದವರಿದ್ದರು.
ಭದ್ರಾವತಿ ಚಾಮೇಗೌಡ ಏರಿಯಾದಲ್ಲಿ ಡಾ. ರಾಜ್​ಕುಮಾರ್​ ಮತ್ತು ಡಾ. ಪುನೀತ್​ ರಾಜ್​ಕುಮಾರ್​ ಅವರ ದೇಗುಲ, ಕಂಚಿನ ಪ್ರತಿಮೆ ಅನಾವರಣವನ್ನು ಅಶ್ವಿನಿ ಪುನೀತ್​ರಾಜ್​ಕುಮಾರ್​ ನೆರವೇರಿಸಿದರು. ಬಿ.ಕೆ.ಸಂಗಮೇಶ್ವರ್​, ಎಸ್​.ಕುಮಾರ್​ ಮುಂತಾದವರಿದ್ದರು.
Published on
ಭದ್ರಾವತಿ: ಅಭಿಮಾನಿಗಳ ಪ್ರೀತಿ, ವಿಶ್ವಾಸ, ಅಭಿಮಾನಕ್ಕೆ ನಾನೆಂದೂ ಚಿರಋಣಿ. ನಿಮಗೆಲ್ಲರಿಗೂ ಧನ್ಯವಾದಗಳು ಎಂದು ನಿರ್ಮಾಪಕಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಹೇಳಿದರು.
ನಗರದ ಬಿ.ಎಚ್​.ರಸ್ತೆ ಚಾಮೇಗೌಡ ಏರಿಯಾದಲ್ಲಿ ಡಾ. ರಾಜ್​ಕುಮಾರ್​ ಮತ್ತು ಡಾ. ಪುನೀತ್​ ರಾಜ್​ಕುಮಾರ್​ ಅಭಿಮಾನಿಗಳ ಸಂ ನೂತನವಾಗಿ ನಿರ್ಮಿಸಿರುವ ಡಾ. ರಾಜ್​ಕುಮಾರ್​ ಮತ್ತು ಡಾ. ಪುನೀತ್​ ರಾಜ್​ಕುಮಾರ್​ ಅವರ ದೇಗುಲ, ಕಂಚಿನ ಪ್ರತಿಮೆಯನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.
ಶಾಸಕ ಬಿ.ಕೆ.ಸಂಗಮೇಶ್ವರ್​ ಮಾತನಾಡಿ, ಜೀವನದಲ್ಲಿ ಕೆಲವರು ಇದ್ದೂ ಸತ್ತಂತೆ ಇರುತ್ತಾರೆ. ಆದರೆ ನಿಧನರಾದರೂ ಬದುಕಿದವರ ಸಾಲಿನಲ್ಲಿ ಪುನೀತ್​ ರಾಜ್​ಕುಮಾರ್​ ಇದ್ದಾರೆ. ಈ ದೇಗುಲದಲ್ಲಿ ನಿತ್ಯವೂ ಪೂಜೆ ಅಭಿಷೇಕಗಳು ನಿರಂತರವಾಗಿ ನಡೆಯಲಿವೆ ಎಂದರು.
ಕಾರ್ಯಕ್ರಮದ ಉಸ್ತುವಾರಿ ಎಸ್​.ಕುಮಾರ್​ ಮಾತನಾಡಿ, ಪುನೀತ್​ ರಾಜ್​ಕುಮಾರ್​ ಹಾಗೂ ಡಾ. ರಾಜ್​ಕುಮಾರ್​ ಅವರು ಕೇವಲ ನಟರಾಗಿದ್ದವರಲ್ಲ. ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಬದುಕಿದವರು ಎಂದು ಬಣ್ಣಿಸಿದರು.
ವೇದಿಕೆಯಲ್ಲಿ ಎಐಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಬಿ.ವಿ.ಶ್ರೀನಿವಾಸ್​, ಡಿಸಿಸಿ ಬ್ಯಾಂಕ್​ ನಿರ್ದೇಶಕ ಎಂ.ಶ್ರೀಕಾಂತ್​, ಪೌರಾಯುಕ್ತ ಕೆ.ಎನ್​.ಹೇಮಂತ್​, ಗ್ರಾಮಾಂತರ ಕಾಂಗ್ರೆಸ್​ ಅಧ್ಯ ಎಚ್​.ಎಲ್​.ಷಡಾರಿ, ಪಂಚ ಗ್ಯಾರಂಟಿ ಯೋಜನೆ ಅಧ್ಯ ಬಿ.ಎಸ್​.ಗಣೇಶ್​, ಪಿಎಲ್​ಡಿ ಬ್ಯಾಂಕ್​ ಅಧ್ಯ ಬಿ.ಕೆ.ಶಿವಕುಮಾರ್​, ನಗರಸಭಾ ಸದಸ್ಯ ಜಾರ್ಜ್​ ಮುಂತಾದವರಿದ್ದರು.
ನಗರದ ಪ್ರಮುಖ ರಸ್ತೆಯಲ್ಲಿ ಬೈಕ್​ ರ್ಯಾಲಿ ನಡಡಸಲಾಯಿತು. ಕಾರ್ಯಕ್ರಮದ ಅಂಗವಾಗಿ ರಕ್ತದಾನ ಶಿಬಿರ ನಡೆಸಲಾಯಿತು.
ಡಾ.ಪುನೀತ್​ ರಸ್ತೆ ಉದ್ಘಾಟನೆ
ಭದ್ರಾವತಿ ತಾಲೂಕು ಕಚೇರಿ ರಸ್ತೆಯಲ್ಲಿ ಅಳವಡಿಸಲಾಗಿದ್ದ ಡಾ. ಪುನೀತ್​ ರಾಜ್​ಕುಮಾರ್​ ರಸ್ತೆ ನಾಮಲಕವನ್ನು ನಿರ್ಮಾಪಕಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಉದ್ಘಾಟಿಸಿದರು. ಸಮೀಪದ ಆಟೋ ನಿಲ್ದಾಣದಲ್ಲಿ ನಿರ್ಮಿಸಿದ್ದ ಪುನೀತ್​ ರಾಜ್​ಕುಮಾರ್​ ಅವರ ನೂತನ ಪುತ್ಥಳಿ ಅನಾವರಣಗೊಳಿಸುವ ಜತೆಗೆ ತಾಪಂ ಕಚೇರಿ ಆವರಣದಲ್ಲಿ ಶ್ರೀ ನಾರಾಯಣಗುರು ವಿಚಾರ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಡವರಿಗೆ ಹಕ್ಕುಪತ್ರ ವಿತರಿಸಿದರು.
ಪುನೀತ್​ರಾಜ್​ಕುಮಾರ್​ ಅವರ ನಿಧನ ನಂತರ ಪುನೀತ್​ ಆಶಯಗಳಿಗೆ ಅನುಗುಣವಾಗಿ ಅವರ ಧರ್ಮಪತ್ನಿ ಅಶ್ವಿನಿ ನಡೆದುಕೊಳ್ಳುತ್ತಿದ್ದಾರೆ. ಒಂದೇ ಜಾಗದಲ್ಲಿ ತಂದೆ&ಮಗನ ಪುತ್ಥಳಿ ನಿರ್ಮಿಸಿರುವುದು ಭದ್ರಾವತಿ ಬಿಟ್ಟರೆ ರಾಜ್ಯದ ಯಾವ ಊರಿನಲ್ಲಿಯೂ ಕಾಣಲು ಸಾಧ್ಯವಿಲ್ಲ.
> ಬಿ.ಕೆ.ಮೋಹನ್​, ನಗರಸಭಾ ಸದಸ್ಯ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net