ಎಚ್.ಪಿ.ಗಿರೀಶ್, ಆರಿಫುಲ್ಲಾ ನಿಗಮ-ಮಂಡಳಿಗೆ ನೇಮಕ Nigama-Mandali

ಶಿವಮೊಗ್ಗ: ವಿವಿಧ ನಿಗಮ-ಮಂಡಳಿಗಳ ನಿರ್ದೇಶಕ ಹಾಗೂ ಸದಸ್ಯ ಸ್ಥಾನಕ್ಕೆ ಹೊಸಬರನ್ನು ನೇಮಕ ಮಾಡಲಾಗಿದೆ. ಶಿವಮೊಗ್ಗದ ಎಚ್.ಪಿ.ಗಿರೀಶ್ ಅವರನ್ನು ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ. ಸಿಎಂ ಡಿ.ಕೆ.ಶಿವಕುಮಾರ್ ಅವರು ಬಸವಕಲ್ಯಾಣ ಅಭಿವೃದ್ಧಿ ಮಂಡಳಿಗೆ ಅಧ್ಯಕ್ಷರಾಗಿದ್ದಾರೆ.
Nigama-Mandali
ಎಚ್.ಪಿ.ಗಿರೀಶ್
Published on: 

ಶಿವಮೊಗ್ಗ: ವಿವಿಧ ನಿಗಮ-ಮಂಡಳಿಗಳ ನಿರ್ದೇಶಕ ಹಾಗೂ ಸದಸ್ಯ ಸ್ಥಾನಕ್ಕೆ ಹೊಸಬರನ್ನು ನೇಮಕ ಮಾಡಲಾಗಿದೆ. ಶಿವಮೊಗ್ಗದ ಎಚ್.ಪಿ.ಗಿರೀಶ್ ಅವರನ್ನು ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ. ಸಿಎಂ ಡಿ.ಕೆ.ಶಿವಕುಮಾರ್ ಅವರು ಬಸವಕಲ್ಯಾಣ ಅಭಿವೃದ್ಧಿ ಮಂಡಳಿಗೆ ಅಧ್ಯಕ್ಷರಾಗಿದ್ದಾರೆ.

ಮುಸ್ಲಿಂ ಮುಖಂಡ ಆರೀಫುಲ್ಲಾ, ತೀರ್ಥಹಳ್ಳಿ ಕಾಂಗ್ರೆಸ್ ಮುಖಂಡ ಕೆಸ್ತೂರು ಮಂಜುನಾಥ್, ಸಾಗರ ಎಸ್.ನಿಂಗಪ್ಪ ಅವರನ್ನು ಪಶ್ಚಿಮಘಟ್ಟ ಕಾರ್ಯಪಡೆಗೆ ಸದಸ್ಯರನ್ನಾಗಿ ನೇಮಿಸಲಾಗಿದೆ. ಬಂಜಾರ ಅಭಿವೃದ್ಧಿ ನಿಗಮಕ್ಕೆ ಶಿವಮೊಗ್ಗದ ಗೀತಾ, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ನಾಮನಿರ್ದೇಶಕರಾಗಿ ಭದ್ರಾವತಿಯ ಮಂಜುನಾಥ್ ಕದಿರೇಶ್ ಅವರನ್ನು ನೇಮಕ ಮಾಡಲಾಗಿದೆ.

ರಾಜ್ಯ ನಗರ ನೀರು ಸರಬರಾಜು ಹಾಗೂ ಕೊಳಚೆ ನಿಯಂತ್ರಣ ಮಂಡಳಿ ಸದಸ್ಯರಾಗಿ ಟಿ.ಎಚ್.ಹಾಲೇಶಪ್ಪ, ಮೆಸ್ಕಾಂ ನಿರ್ದೇಶಕರಾಗಿ ಮೊಹಮ್ಮದ್ ರಜಾಕ್ ಹಾಗೂ ಗುತ್ಯಪ್ಪ, ಭದ್ರಾ ಕಾಡಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ ನಿರ್ದೇಶಕ ಸ್ಥಾನಕ್ಕೆ ಗಣಪತಿ ಹುಲ್ತಿಕೊಪ್ಪ ಅವರನ್ನು ನೇಮಕ ಮಾಡಲಾಗಿದೆ.