ವಿದ್ಯಾರ್ಥಿಗಳಿಗೆ ಹೆಲಿಕಾಪ್ಟರ್​ ಪ್ರಯಾಣ ಭಾಗ್ಯ

ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಕಡೇನಂದಿಹಳ್ಳಿ ಗ್ರಾಮದಲ್ಲಿ ವಿದ್ಯಾರ್ಥಿಗಳ ಹೆಲಿಕಾಪ್ಟರ್​ ಪಯಣಕ್ಕೆ ಸಜ್ಜುಗೊಳ್ಳುತ್ತಿರುವ ಹ್ಯಾಲಿಪ್ಯಾಡ್​ ವೀಸುತ್ತಿರುವ ಜನತೆ.
ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಕಡೇನಂದಿಹಳ್ಳಿ ಗ್ರಾಮದಲ್ಲಿ ವಿದ್ಯಾರ್ಥಿಗಳ ಹೆಲಿಕಾಪ್ಟರ್​ ಪಯಣಕ್ಕೆ ಸಜ್ಜುಗೊಳ್ಳುತ್ತಿರುವ ಹ್ಯಾಲಿಪ್ಯಾಡ್​ ವೀಸುತ್ತಿರುವ ಜನತೆ.
Published on
ಶಿರಾಳಕೊಪ್ಪ: ಶಿಕಾರಿಪುರ ತಾಲೂಕಿನ ಕಡೇನಂದಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ 80ನೇ ಸ್ವಾತಂತ್ರೊ$್ಯತ್ಸವದ ಅಂಗವಾಗಿ ವಿಶ್ವಾಗ್ರ ಸಂಸ್ಥೆಯಿಂದ ಹೆಲಿಕಾಪ್ಟರ್​ ಪ್ರಯಾಣ ಆಯೋಜಿಸಲಾಗಿದೆ.
ಕಡೆನಂದಿಹಳ್ಳಿ ಗ್ರಾಮದ ಶಾಲೆಗೆ ಈಗಾಗಲೇ ಸಂಸ್ಥೆಯವರು ಇಬ್ಬರು ಅತಿಥಿ ಶಿಕ್ಷಕರು ಹಾಗೂ ಕಂಪ್ಯೂಟರ್​ ಸೌಲಭ್ಯ ನೀಡಿದ್ದಾರೆ. ಸ್ವಾತಂತ್ರ್ಯೋತ್ಸವವನ್ನು ಕೇವಲ ಧ್ವಜಾರೋಹಣ ಮತ್ತು ಸಾಂಸತಿಕ ಕಾರ್ಯಕ್ರಮಗಳಿಗೆ ಸೀಮಿತಗೊಳಿಸದೆ, ಮಕ್ಕಳಿಗೆ ಹೊಸ ಅನುಭವ ನೀಡುವ ಪ್ರಯತ್ನ ಇದಾಗಿದೆ. ಈಗಾಗಲೇ ಸರ್ಕಾರದ ಎಲ್ಲ ಇಲಾಖೆಗಳಿಂದ ಅನುಮತಿ ಪಡೆದು ಗ್ರಾಮದಲ್ಲಿ ತಾತ್ಕಾಲಿಕ ಹೆಲಿಪ್ಯಾಡ್​ ನಿರ್ಮಿಸಲಾಗಿದೆ ಎಂದು ಎಸ್​ಡಿಎಂಸಿ ಅಧ್ಯಕ್ಷ ಕುಮಾರ್​ ಮಟ್ಟೀಮನಿ ತಿಳಿಸಿದ್ದಾರೆ.
ಗ್ರಾಮೀಣ ಭಾಗದ ಸರ್ಕಾರಿ ಶಾಲಾ ಮಕ್ಕಳಿಗೆ ಇಂತಹ ವಿಶೇಷ ಅನುಭವಗಳನ್ನು ನೀಡುವುದರಿಂದ ಅವರಲ್ಲಿ ಆತ್ಮವಿಶ್ವಾಸ, ವೈಾನಿಕ ಮನೋಭಾವ, ಹೊಸತನದ ಚಿಂತನೆ ಹಾಗೂ ದೊಡ್ಡ ಕನಸುಗಳನ್ನು ಕಾಣುವ ಮನೋಭಾವ ಬೆಳೆಸಲು ಸಾಧ್ಯವಾಗಲಿದೆ. ದೂರದಿಂದ ಮಾತ್ರ ಹೆಲಿಕಾಪ್ಟರ್​ ನೋಡುತ್ತಿದ್ದ ಮಕ್ಕಳು ಅದರಲ್ಲಿ ಕುಳಿತು ಆಕಾಶದಲ್ಲಿ ಹಾರುವ ಅವಕಾಶ ಪಡೆಯುತ್ತಿರುವುದು ಕಾರ್ಯಕ್ರಮದ ವಿಶೇಷ ಎಂದು ವಿಶ್ವಾಗ್ರ ಸಂಸ್ಥೆ ಸಂಸ್ಥಾಪಕ ಡಾ. ಎ.ಶಿವಕುಮಾರ್​ ಹೇಳಿದ್ದಾರೆ.
ಆ.15ರ ಕಾರ್ಯಕ್ರಮದಲ್ಲಿ ವಿಶ್ವಾಗ್ರ ಸಲ್ಯೂಷನ್ಸ್​ ನಿರ್ದೇಶಕ ಲಿಂಗರಾಜ್​ ಚವ್ಹಾಣ್​, ಗೋಕಾಕ್​ನ ಮನಸಾ ಫೌಂಡೇಶನ್​ ಸಂಸ್ಥಾಪಕ ಮಲ್ಲಿಕಾರ್ಜುನ್​ ಕರ್ಜಗಿಮಠ, ವಿಶ್ವಾಗ್ರ ಫೌಂಡೇಶನ್​ ನಿರ್ದೇಶಕಿ ಅರ್ಚನಾ ಶಿವಕುಮಾರ್​, ದತ್ತು ಸಮಿತಿಯ ಶಿವಕುಮಾರ್​ ಆರಾಧ್ಯ ಸೇರಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
ಸರ್ಕಾರಿ ಶಾಲೆಗಳನ್ನು ಉಳಿಸುವ ಜವಾಬ್ದಾರಿ ಸರ್ಕಾರದ ಜತೆಗೆ ಜನರ ಮೇಲೂ ಇದೆ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳನ್ನು ಉಳಿಸುವ ಅಭಿಯಾನ ಹಮ್ಮಿಕೊಂಡಿದ್ದೇವೆ. ಸರ್ಕಾರಿ ಶಾಲೆಗಳತ್ತ ಎಲ್ಲರ ಗಮನ ಸೆಳೆಯಬೇಕು. ಜನರು ಸರ್ಕಾರಿ ಶಾಲೆಗಳತ್ತ ಮತ್ತಷ್ಟು ಒಲವು ತೋರುವಂತೆ ಮಾಡಬೇಕು ಎಂಬ ಉದ್ದೇಶದಿಂದ ಈ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.
> ಡಾ. ಎ.ಶಿವಕುಮಾರ್​ , ವಿಶ್ವಾಗ್ರ ಸಂಸ್ಥೆ ಸಂಸ್ಥಾಪಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net