ಗುರುವಿನ ಮಾರ್ಗದರ್ಶನ ಅವಶ್ಯ

ಗುರುಪೂರ್ಣಿಮೆ ಅಂಗವಾಗಿ ತೀರ್ಥಹಳ್ಳಿಯಲ್ಲಿ ಸಿನಿಯರ್ ಚೇಂಬರ್ ಇಂಟರ್‌ನ್ಯಾಷನಲ್‌ನಿಂದ ನಿವೃತ್ತ ಶಿಕ್ಷಕ ಎಸ್.ನಾಗಪ್ಪ ಅವರನ್ನು ಸನ್ಮಾನಿಸಲಾಯಿತು. ನಂದಕಿಶೋರ್ ಕಾಮತ್, ಸರ್ಜಾ ಕೈಲಾಶನಾಥ್, ಕೆಪಿಎಸ್ ಸ್ವಾಮಿ ಇತರರಿದ್ದರು.
ಗುರುಪೂರ್ಣಿಮೆ ಅಂಗವಾಗಿ ತೀರ್ಥಹಳ್ಳಿಯಲ್ಲಿ ಸಿನಿಯರ್ ಚೇಂಬರ್ ಇಂಟರ್‌ನ್ಯಾಷನಲ್‌ನಿಂದ ನಿವೃತ್ತ ಶಿಕ್ಷಕ ಎಸ್.ನಾಗಪ್ಪ ಅವರನ್ನು ಸನ್ಮಾನಿಸಲಾಯಿತು. ನಂದಕಿಶೋರ್ ಕಾಮತ್, ಸರ್ಜಾ ಕೈಲಾಶನಾಥ್, ಕೆಪಿಎಸ್ ಸ್ವಾಮಿ ಇತರರಿದ್ದರು.
Published on
ತೀರ್ಥಹಳ್ಳಿ: ಬದುಕು ರೂಪಿಸಿಕೊಳ್ಳಲು ಮಾರ್ಗದರ್ಶನ ಮಾಡಿದ ಗುರುವಿನ ಸ್ಮರಣೆ ಅಗತ್ಯ ಎಂದು ಸಿನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಅಧ್ಯಕ್ಷ ನಂದಕಿಶೋರ್ ಕಾಮತ್ ಕಟಪಾಡಿ ಹೇಳಿದರು.
ಗುರುಪೂರ್ಣಿಮೆ ಪ್ರಯುಕ್ತ ಸಿನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ತೀರ್ಥಹಳ್ಳಿ ಲೀಜನ್‌ನಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್.ನಾಗಪ್ಪ(92) ಅವರನ್ನು ಪಟ್ಟಣದ ರೈಸ್‌ಮಿಲ್ ಕೇರಿಯಲ್ಲಿರುವ ಅವರ ನಿವಾಸದಲ್ಲಿ ಗೌರವಿಸಿ ಮಾತನಾಡಿದರು.
ಆಧುನಿಕ ಸೌಲಭ್ಯಗಳಿಲ್ಲದೆ ಗ್ರಾಮೀಣ ಭಾಗದ ವಿಧ್ಯಾರ್ಥಿಗಳ ಭವಿಷ್ಯ ರೂಪಿಸಲು ಹತ್ತಾರು ಕಿ.ಮೀ. ನಡೆದು ಅಕ್ಷರ ಕಲಿಸಿರುವ ನಾಗಪ್ಪ ಅವರಂತಹ ಶಿಕ್ಷಕರು ವಿರಳ. ಬದುಕಿನುದ್ದಕ್ಕೂ ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ. ಹಿರಿಯ ಶಿಕ್ಷಕರನ್ನು ಗೌರವಿಸುತ್ತಿರುವುದು ಸಂತಸ ತಂದಿದೆ ಎಂದು ತಿಳಿಸಿದರು.
ಸರ್ಜಾ ಕೈಲಾಶನಾಥ್, ಕೆಪಿಎಸ್ ಸ್ವಾಮಿ, ಶಿಕ್ಷಕ ಗೋಪಾಲಕೃಷ್ಣ, ಕಿರಣ್‌ಕುಮಾರ್, ಪತ್ರಕರ್ತ ಡಾನ್ ರಾಮಣ್ಣ, ಶ್ರೀಕಾಂತ್ ನಾಯಕ್, ಅಕ್ಷಯ್, ನಾಗಪ್ಪ ಕುಟುಂಬದವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net