ಗ್ರಾಮೀಣ ಜನರಿಗೆ ಹೆಚ್ಚಿನ ಅನುಕೂಲ

ಶಿಕಾರಿಪುರ-ತರಲಘಟ್ಟ ನಡುವೆ ನೂತನ ಬಸ್ ಸಂಚಾರಕ್ಕೆ ಶಾಸಕ ಬಿ.ವೈ.ವಿಜಯೇಂದ್ರ ಚಾಲನೆ ನೀಡಿದರು. ಕೆ.ಎಸ್.ಗುರುಮೂರ್ತಿ, ನಾಗರಾಜ್, ಅಶೋಕ್, ಅಂಬಿಕಾ ಇತರರಿದ್ದರು.
ಶಿಕಾರಿಪುರ-ತರಲಘಟ್ಟ ನಡುವೆ ನೂತನ ಬಸ್ ಸಂಚಾರಕ್ಕೆ ಶಾಸಕ ಬಿ.ವೈ.ವಿಜಯೇಂದ್ರ ಚಾಲನೆ ನೀಡಿದರು. ಕೆ.ಎಸ್.ಗುರುಮೂರ್ತಿ, ನಾಗರಾಜ್, ಅಶೋಕ್, ಅಂಬಿಕಾ ಇತರರಿದ್ದರು.
Published on
ಶಿಕಾರಿಪುರ: ಕ್ಷೇತ್ರದಲ್ಲಿ ರಸ್ತೆಗಳ ಅಭಿವೃದ್ಧಿ ಆಗಿದ್ದು, ಎರಡು ರಾಜ್ಯ ಹೆದ್ದಾರಿ ಇರುವುದರಿಂದ ಜನರಿಗೆ ಅನುಕೂಲವಾಗಿದೆ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.
ತರಲಘಟ್ಟ-ಶಿಕಾರಿಪುರ ನಡುವೆ ನೂತನ ಬಸ್ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿ, ಕೆಲ ಹಳ್ಳಿಗಳಿಗೆ ಬಸ್‌ಗಳ ಸಂಚಾರ ಇಲ್ಲದ ಕಾರಣ ತೊಂದರೆಯಾಗಿತ್ತು. ಮನವಿ ನೀಡಿದ ನಂತರ ಹೊಸ ಮಾರ್ಗಗಳಲ್ಲಿ ಬಸ್‌ಗಳ ಸಂಚಾರ ಆರಂಭಿಸಿರುವುದರಿಂದ ಗ್ರಾಮೀಣ ಜನರಿಗೆ ಅನುಕೂಲವಾಗಿದೆ ಎಂದು ತಿಳಿಸಿದರು.
ಗ್ರಾಮಾಂತರ ಪ್ರದೇಶಗಳಿಂದ ಪಟ್ಟಣಕ್ಕೆ ವಿದ್ಯಾಭ್ಯಾಸಕ್ಕೆ ಆಗಮಿಸುವ ವಿದ್ಯಾರ್ಥಿಗಳಿಗೆ ಬಸ್‌ಗಳಿಲ್ಲದೆ ತೊಂದರೆ ಆಗಬಾರದು. ತಾಲೂಕಿನಲ್ಲಿ ಶಿಕ್ಷಣಕ್ಕೆ ಪೂರಕವಾಗಿ ಸಾಕಷ್ಟು ಶಾಲೆಗಳು, ಹಾಸ್ಟೆಲ್ ಸೌಲಭ್ಯ, ಉತ್ತಮ ಶಿಕ್ಷಣ ವ್ಯವಸ್ಥೆ ಇದೆ. ಆದರೆ ತಾಲೂಕಿನ ಗಡಿಭಾಗಗಳಿಂದ ಪಟ್ಟಣಕ್ಕೆ ಬರಲು ಬಸ್‌ಗಳ ಅವಶ್ಯಕತೆ ಇತ್ತು ಎಂದರು.
ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ನಾಗರಾಜ್, ಅಶೋಕ್, ಶಿಕಾರಿಪುರ ಸಾರಿಗೆ ಇಲಾಖೆ ಘಟಕ ವ್ಯವಸ್ಥಾಪಕಿ ಅಂಬಿಕಾ ಇತರರಿದ್ದರು. ನೂತನ ಬಸ್ ತರಲಘಟ್ಟ ಕ್ಯಾಂಪ್, ದೊಡ್ಡಜೋಗಿಹಳ್ಳಿ, ಚುರ್ಚಿಗುಂಡಿ, ಕಲ್ಮನೆ, ಕೋರಲಹಳ್ಳಿ, ಯರೆಕಟ್ಟೆ ಮಾರ್ಗವಾಗಿ ಶಿಕಾರಿಪುರ ತಲುಪಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net