ಯುವಶಕ್ತಿ ಸದ್ಬಳಕೆಯಾದರೆ ಜಾಗತಿಕ ಮನ್ನಣೆ youth power

ಶಿವಮೊಗ್ಗ: ಭಾರತದ ನಿಜವಾದ ಸಾಮರ್ಥ್ಯ ಇರುವುದು ಯುವಶಕ್ತಿಯಲ್ಲಿ. ನಾವು ಯುವಕರ ಭವಿಷ್ಯವನ್ನು ಭದ್ರಗೊಳಿಸುವ ಯೋಚನೆ ಮಾಡಿದರೆ ಮುಂದಿನ ದಿನಗಳಲ್ಲಿ ಭಾರತ ಜಾಗತಿಕವಾಗಿ ಇನ್ನಷ್ಟು ಮನ್ನಣೆ ಗಳಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.
youth power
ಶಿವಮೊಗ್ಗದ ಗಂಗೋತ್ರಿ ಕಾಲೇಜಿನಲ್ಲಿ ಏರ್ಪಡಿಸಿದ್ದ ಪದವಿಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯನ್ನು ಉದ್ಘಾಟಿಸಿ ಡಿ.ಎಸ್.ಅರುಣ್ ಮಾತನಾಡಿದರು. ಡಾ. ಧನಂಜಯ ಸರ್ಜಿ, ಎಚ್.ಎಸ್.ಸುಂದರೇಶ್, ಚಂದ್ರಪ್ಪ ಗುಂಡಪಲ್ಲಿ, ರಾಕೇಶ ಗೌಡ, ಮಂಜುನಾಥ ಇದ್ದರು.
Published on: 

ಶಿವಮೊಗ್ಗ: ಭಾರತದ ನಿಜವಾದ ಸಾಮರ್ಥ್ಯ ಇರುವುದು ಯುವಶಕ್ತಿಯಲ್ಲಿ. ನಾವು ಯುವಕರ ಭವಿಷ್ಯವನ್ನು ಭದ್ರಗೊಳಿಸುವ ಯೋಚನೆ ಮಾಡಿದರೆ ಮುಂದಿನ ದಿನಗಳಲ್ಲಿ ಭಾರತ ಜಾಗತಿಕವಾಗಿ ಇನ್ನಷ್ಟು ಮನ್ನಣೆ ಗಳಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.

ನಗರದ ಗಂಗೋತ್ರಿ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ಪದವಿಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಾವ ದೇಶ ಸಾಂಸ್ಕೃತಿಕವಾಗಿ ಮುನ್ನಡೆಯುತ್ತದೋ ಆ ದೇಶದಲ್ಲಿ ಮಾನವೀಯ ಅಂಶಗಳು ಹೆಚ್ಚಿರುತ್ತವೆ. ಈ ಹಿನ್ನೆಲೆಯಲ್ಲಿ ಭಾರತದ ಪರಂಪರೆ ಅತ್ಯಂತ ಸದೃಢವಾಗಿದೆ ಎಂದರು.

ಯುವಜನತೆಯ ಮೇಲಿನ ಆಶೋತ್ತರ ಹೆಚ್ಚಾಗುತ್ತಿವೆ. ಯುವಶಕ್ತಿಯನ್ನು ನಾವು ಸದ್ಬಳಕೆ ಮಾಡಿಕೊಳ್ಳಬೇಕಿದೆ. ಅವರನ್ನು ಸರಿಯಾದ ದಿಕ್ಕಿನಲ್ಲಿ ಕರೆದುಕೊಂಡು ಹೋಗುವ ತೀರ್ಮಾನ ಮಾಡಬೇಕಿದೆ. ಶಿವಮೊಗ್ಗ ಜಿಲ್ಲೆ ಸಾಂಸ್ಕೃತಿಕವಾಗಿ ಅತ್ಯಂತ ದೊಡ್ಡ ಹೆಸರು ಪಡೆದಿದೆ. ಇಂತಹ ಜಿಲ್ಲೆಯ ಎಲ್ಲ ಕಾಲೇಜಿನ ಸುಮಾರು 800 ಮಕ್ಕಳು ಇಲ್ಲಿ ಭಾಗವಹಿಸಿದ್ದಾರೆ. ಪ್ರಶಸ್ತಿ ಗೆಲ್ಲುವುದಕ್ಕಿಂತ ಭಾಗವಹಿಸುವುದು ಮುಖ್ಯವಾಗುತ್ತದೆ ಎಂದು ತಿಳಿಸಿದರು.

ಡಿಡಿಪಿಯು ಚಂದ್ರಪ್ಪ ಗುಂಡಪಲ್ಲಿ, ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಶಶಿಧರ್, ಗಂಗೋತ್ರಿ ಕಾಲೇಜಿನ ಉಪಾಧ್ಯಕ್ಷ ಮಂಜುನಾಥ, ಜಂಟಿ ಕಾರ್ಯದರ್ಶಿ ರಾಕೇಶ ಗೌಡ, ಕಾರ್ಯದರ್ಶಿ ಜಗದೀಶ, ನಿರ್ದೇಶಕರಾದ ಡಿ.ಎಂ.ಪರಮೇಶ್ವರಪ್ಪ, ಸುಬ್ರಹ್ಮಣ್ಯಸ್ವಾಮಿ, ಚಂದನ್ ಇತರರಿದ್ದರು.