ಆ ಮಾತು ನಂಬಿದ ಸಂತ್ರಸ್ತ ಹಾಗೂ ಅವರ ತಂದೆಗೆ ಟವರ್ ಅಳವಡಿಕೆಯ ಪ್ರಕ್ರಿಯೆ ಆರಂಭಿಸಲು ಪ್ರೊಸೆಸಿಂಗ್ ಫೀಸ್(Processing Fee), ಟೆಲಿಕಾಂ ಇಲಾಖೆ ಲೈಸೆನ್ಸ್ ಶುಲ್ಕ ಮತ್ತು ಜಿಎಸ್‌ಟಿ ಹೆಸರಿನಲ್ಲಿ ಹಣ ಪಾವತಿಸುವಂತೆ ವಂಚಕರು ಸೂಚಿಸಿದ್ದಾರೆ. ವಿವಿಧ ಬ್ಯಾಂಕ್ ಖಾತೆ ಹಾಗೂ ಕ್ಯೂಆರ್ ಕೋಡ್‌ಗಳ ಮೂಲಕ ಹಂತಹಂತವಾಗಿ 5,15,900 ರೂ. ವರ್ಗಾವಣೆ ಮಾಡಿಸಿಕೊಂಡಿದ್ದಾರೆ.