ಬಿಜೆಪಿ ಯುವ ಮೋರ್ಚಾದಿಂದ ಧ್ವಜ ವಿತರಣೆ I bjp yuvamorcha

ಡಿ.ಮೋಹನ್ ರೆಡ್ಡಿ, ಬಿಜೆಪಿ ಶಿವಮೊಗ್ಗ ನಗರಾಧ್ಯಕ್ಷ
ಡಿ.ಮೋಹನ್ ರೆಡ್ಡಿ, ಬಿಜೆಪಿ ಶಿವಮೊಗ್ಗ ನಗರಾಧ್ಯಕ್ಷ
Published on

ಪ್ರಮುಖ ಮುಖ್ಯಾಂಶಗಳು

  • ಹರ್‌ಘರ್ ತಿರಂಗಾ ಅಭಿಯಾನ
  • ಮೋಹನ್ ರೆಡ್ಡಿ ವಿವರಣೆ
ಶಿವಮೊಗ್ಗ: ಶಿವಮೊಗ್ಗ ನಗರ ಬಿಜೆಪಿ (bjp) ಘಟಕದಿಂದ ಆ. 15ರವರೆಗೆ ಹರ್‌ಘರ್ (harghar) ತಿರಂಗಾ ಅಭಿಯಾನ ಹಮ್ಮಿಕೊಂಡಿದ್ದು, ಸ್ವಾತಂತ್ರೃದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ 30 ಸಾವಿರ ಮನೆಗಳಿಗೆ ಧ್ವಜ (flag) ವಿತರಿಸಲಾಗುವುದು ಎಂದು ಬಿಜೆಪಿ ನಗರಾಧ್ಯಕ್ಷ ಡಿ.ಮೋಹನ್ ರೆಡ್ಡಿ ಹೇಳಿದರು.
ಸ್ವಾತಂತ್ರೃ ಹೋರಾಟದಲ್ಲಿ ದೇಶಕ್ಕಾಗಿ ಬಲಿದಾನ ಮಾಡಿದವರನ್ನು ಸ್ಮರಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶ. ನಮ್ಮ ಕಾರ್ಯಕರ್ತರು ನಗರದ ವಿವಿಧ ಭಾಗಗಳಿಗೆ ತೆರಳಿ ಮನೆಗಳಿಗೆ ಧ್ವಜ ವಿತರಿಸುವರು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆ.11ರ ಸಂಜೆ 4ಕ್ಕೆ ಅಲ್ಲಮಪ್ರಭು ಮೈದಾನದಿಂದ ಕೃಷ್ಣ ಕೆೆ ವೃತ್ತದವರೆಗೆ ಯುವ ಮೋರ್ಚಾದಿಂದ ಬೈಕ್ ರ‌್ಯಾಲಿ ಆಯೋಜಿಸಲಾಗಿದೆ. 1500 ಬೈಕ್ ಸವಾರರು ಪಾಲ್ಗೊಳ್ಳುವರು. 13ರ ಸಂಜೆ 5ಕ್ಕೆ ಶಿವಪ್ಪನಾಯಕ ವೃತ್ತದಲ್ಲಿ ಪಕ್ಷದ ಒಬಿಸಿ ಮೋರ್ಚಾದಿಂದ ಮಾಜಿ ಯೋಧರಿಗೆ ಸನ್ಮಾನ ಕಾರ್ಯಕ್ರಮವಿದೆ. ಆ.14ರ ಬೆಳಗ್ಗೆ 10ಕ್ಕೆ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ಟಿಎಸ್‌ಬಿ ವೃತ್ತದವರೆಗೆ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿದೆ. ವಿವಿಧ ಸಂಘ ಸಂಸ್ಥೆಗಳು ಭಾಗವಹಿಸಲಿವೆ ಎಂದು ಮಾಹಿತಿ ನೀಡಿದರು.
ಶಾಸಕ ಎಸ್.ಎನ್.ಚನ್ನಬಸಪ್ಪ, ಸೂಡಾ ಮಾಜಿ ಅಧ್ಯಕ್ಷ ಎಸ್.ಜ್ಞಾನೇಶ್ವರ್, ನಗರ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ದೀನದಯಾಳ್, ಪ್ರಕಾಶ್, ರಶ್ಮಿ ಶ್ರೀನಿವಾಸ್, ಯಶೋದಾ, ಮಂಜುನಾಥ್, ಶ್ರೀನಾಗ್ ಸುದ್ದಿಗೋಷ್ಠಿಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net