ಮೊಬೈಲ್ ಟವರ್ ಅವ್ಯವಸ್ಥೆ ಸರಿಪಡಿಸಿ

ಹೊಸನಗರ ತಾಲೂಕಿನ ಕಟ್ಟಿನಹೊಳೆಯಲ್ಲಿ ನೆಟ್‌ವರ್ಕ್ ಅವ್ಯವಸ್ಥೆ ಖಂಡಿಸಿ ಗ್ರಾಮಸ್ಥರು ಪ್ರತಿಭಟಿಸಿದರು. ಶಿವಕುಮಾರ್, ದಿನೇಶ್, ಮುರಳೀಧರ್, ಸತ್ಯನಾರಾಯಣ ಇತರರಿದ್ದರು.
ಹೊಸನಗರ ತಾಲೂಕಿನ ಕಟ್ಟಿನಹೊಳೆಯಲ್ಲಿ ನೆಟ್‌ವರ್ಕ್ ಅವ್ಯವಸ್ಥೆ ಖಂಡಿಸಿ ಗ್ರಾಮಸ್ಥರು ಪ್ರತಿಭಟಿಸಿದರು. ಶಿವಕುಮಾರ್, ದಿನೇಶ್, ಮುರಳೀಧರ್, ಸತ್ಯನಾರಾಯಣ ಇತರರಿದ್ದರು.
Published on
ಹೊಸನಗರ: ತಾಲೂಕಿನ ಕಟ್ಟಿನಹೊಳೆಯಲ್ಲಿ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಅವ್ಯವಸ್ಥೆ ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಕಟ್ಟಿನಹೊಳೆ ಗ್ರಾಮದ ಬಟ್ಟೆ ವಿನಾಯಕ ದೇವಸ್ಥಾನ ಬಳಿ ಇತ್ತೀಚೆಗೆ ಕೇಂದ್ರ ಸರ್ಕಾರದಿಂದ ಹೊಸದಾಗಿ ಬಿಎಸ್‌ಎನ್‌ಎಲ್ ಮೊಬೈಲ್ ಟವರ್ ನಿರ್ಮಿಸಲಾಗಿದೆ. ಈ ಭಾಗದ ಜನರಿಗೆ, ಪ್ರವಾಸಿಗರಿಗೆ ಉತ್ತಮ ಸಂಪರ್ಕ ಸಿಗುತ್ತದೆ ಎಂದು ಆಶಿಸಿದ್ದೆವು. ಆದರೆ ಈ ಟವರ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದರು.
ಮೊಬೈಲ್ ಸಿಗ್ನಲ್ ಸಮಸ್ಯೆ ಹೆಚ್ಚಿದ್ದು, ಕರೆ ಮಾಡಲು ಕಷ್ಟಕರ ಪರಿಸ್ಥಿತಿ ಇದೆ. ಇಂಟರ್ನೆಟ್ ಸಂಪರ್ಕ ಲಭ್ಯವಿಲ್ಲದೆ ಆನ್‌ಲೈನ್ ಕೆಲಸಗಳು ಸ್ಥಗಿತಗೊಂಡಿವೆ. ಹೊಸ ಟವರ್ ಸ್ಥಾಪನೆಯಾಗಿದ್ದರೂ ಪ್ರಯೋಜನ ಸಿಗುತ್ತಿಲ್ಲ ಎಂದು ದೂರಿದರು.
ಡಿಜಿಟಲ್ ಕಾಲದಲ್ಲಿ ನೆಟ್‌ವರ್ಕ್ ಇಲ್ಲದೆ ವಿದ್ಯಾರ್ಥಿಗಳಿಗೆ, ಬ್ಯಾಂಕಿಂಗ್ ಕೆಲಸಗಳಿಗೆ ಮತ್ತು ತುರ್ತು ಪರಿಸ್ಥಿತಿಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಹೊಸನಗರ ಹಾಗೂ ಶಿವಮೊಗ್ಗ ಜಿಲ್ಲಾ ಬಿಎಸ್‌ಎನ್‌ಎಲ್ ಅಧಿಕಾರಿಗಳು ತಾಂತ್ರಿಕ ದೋಷವನ್ನು ಪರಿಶೀಲಿಸಿ ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಉಪಯೋಗಕ್ಕೆ ಬಾರದ ಟವರ್‌ಗೆ ಶ್ರದ್ಧಾಂಜಲಿ ಸಲ್ಲಿಸಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶಿವಕುಮಾರ್, ದಿನೇಶ್, ಮುರಳೀಧರ್, ಸತ್ಯನಾರಾಯಣ, ಅರುಣ, ಅರ್ಚನಾ, ರಾಘವೇಂದ್ರ ಶೆಟ್ಟಿ, ಗಣಪತಿ ಕೊರಡಿ, ಕೃಷ್ಣಮೂರ್ತಿ, ಅರವಿಂದ ರಾವ್, ಮಂಜುನಾಥ್, ಕಿರಣ್, ಗಣೇಶ್ ನಾಯಕ, ಅವಿನಾಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net