4.80 ಕ್ವಿಂಟಾಲ್ ಒಣ ಅಡಿಕೆ ಕಳವು ಮಾಡಿದ್ದ ಐವರ ಬಂಧನ | Areca nut theft

ಹೊಳಲೂರು ಗ್ರಾಮದಲ್ಲಿ ಕಳವು ಮಾಡಿದ್ದ ಒಣ ಅಡಿಕೆ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರು, ಬೈಕ್ ಅನ್ನು ಜಪ್ತಿ ಮಾಡಿದ ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು. ರಾಘವೇಂದ್ರ ಕಾಂಡಿಕೆ, ನವೀನ್ ಮಠಪತಿ, ಲಂಕೇಶ್, ಶ್ರೀಕಾಂತ್, ಕಾಶಿನಾಥ, ಸುನೀಲ್‌ಕುಮಾರ್, ಕವನ್, ದಾಕ್ಷಾಯಣಿ ಇದ್ದರು.
ಹೊಳಲೂರು ಗ್ರಾಮದಲ್ಲಿ ಕಳವು ಮಾಡಿದ್ದ ಒಣ ಅಡಿಕೆ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರು, ಬೈಕ್ ಅನ್ನು ಜಪ್ತಿ ಮಾಡಿದ ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು. ರಾಘವೇಂದ್ರ ಕಾಂಡಿಕೆ, ನವೀನ್ ಮಠಪತಿ, ಲಂಕೇಶ್, ಶ್ರೀಕಾಂತ್, ಕಾಶಿನಾಥ, ಸುನೀಲ್‌ಕುಮಾರ್, ಕವನ್, ದಾಕ್ಷಾಯಣಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಹೊಳಲೂರು ಗ್ರಾಮದ ಗೋಡೌನ್‌ನಲ್ಲಿ ಸಂಗ್ರಹಿಸಿಟ್ಟಿದ್ದ ಅಡಿಕೆ
  • 5.75 ಲಕ್ಷ ರೂ. ಮೌಲ್ಯದ ಅಡಿಕೆ, ಕಾರು, ಬೈಕ್ ಜಪ್ತಿ
  • ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ
ಶಿವಮೊಗ್ಗ: ತಾಲೂಕಿನ ಹೊಳಲೂರು ಗ್ರಾಮದ ಗೋಡೌನ್‌ನಲ್ಲಿ ಸಂಗ್ರಹಿಸಿಟ್ಟಿದ್ದ 4.80 ಕ್ವಿಂಟಾಲ್ ಒಣ ಅಡಿಕೆಯನ್ನು ಕಳವು(Areca nut theft) ಮಾಡಿದ್ದ ಐವರನ್ನು ಬಂಧಿಸಿರುವ ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು, 5.75 ಲಕ್ಷ ರೂ. ಮೌಲ್ಯದ ಅಡಿಕೆ, ಕಾರು, ಬೈಕನ್ನು ಜಪ್ತಿ ಮಾಡಿದ್ದಾರೆ.
ಶಿವಮೊಗ್ಗ ಕೆ.ಆರ್.ಪುರಂ ರಸ್ತೆಯ ರಾಹುಲ್ (25), ಸೀಗೇಹಟ್ಟಿ ಇಮಾಮ್‌ಬಾಡಾದ ಎಸ್.ಜಗನ್ನಾಥ (23), ವೆಂಕಟೇಶ್ವರ ದೇವಸ್ಥಾನದ ಹತ್ತಿರದ ಕೆ.ಚಂದನ್ (22), ಕ್ಲಾರ್ಕ್‌ಪೇಟೆ 2ನೇಕ್ರಾಸ್‌ನ ನವೀನ್ ಅಲಿಯಾಸ್ ಟಿಪ್ಪಿ (20) ಮತ್ತು ಮಂಜುನಾಥ ಬಡಾವಣೆ ಡಿ.ಸುದೀಪ ಬಂಧಿತರು.
ಆರೋಪಿಗಳು ಆ.23ರಂದು ಬೆಳಗಿನಜಾವ ಹೊಳಲೂರಿನ ಗೋಡೌನ್‌(Godown)ನಲ್ಲಿದ್ದ ಅಡಿಕೆಯನ್ನು ಕಳ್ಳತನ ಮಾಡಿದ್ದರು. ಈ ಬಗ್ಗೆ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್‌ಸ್ಪೆಕ್ಟರ್ ರಾಘವೇಂದ್ರ ಕಾಂಡಿಕೆ(Inspector Raghavendra Kandike), ಪಿಎಸ್‌ಐ ನವೀನ್ ಮಠಪತಿ, ಸಿಬ್ಬಂದಿಗಳಾದ ಲಂಕೇಶ್, ಶ್ರೀಕಾಂತ್, ಕಾಶಿನಾಥ, ಸುನೀಲ್‌ಕುಮಾರ್, ಕವನ್, ದಾಕ್ಷಾಯಣಿ ಅವರನ್ನೊಳಗೊಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ. ಬಂಧಿತರಿಂದ 3 ಲಕ್ಷ ರೂ. ಮೌಲ್ಯದ ಕಾರು, 25 ಸಾವಿರ ರೂ. ಮೌಲ್ಯದ ಬೈಕ್, 2.50 ಲಕ್ಷ ರೂ. ಮೌಲ್ಯದ ಒಣ ಅಡಿಕೆಯನ್ನು ಜಪ್ತಿ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net